ತುಮಕೂರು: ದನ ಮೇಯಿಸಲು ಹೋಗಿದ್ದ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಿ ಪರಾರಿ ಆಗಿರುವ ಘಟನೆ ಕ್ಯಾತ್ಸಂದ್ರ ಪೋಲಿಸ್ ಠಾಣೆ ವ್ಯಾಪ್ತಿಯ ಚಿಕ್ಕಹಳ್ಳಿ ಬಳಿ ಇರುವ ಅರಣ್ಯ ಪ್ರದೇಶದ ಪೊದೆಯಲ್ಲಿ ನೆಡೆದಿದೆ.
ಕ್ಯಾತ್ಸಂದ್ರ ಪೋಲಿಸ್ ಠಾಣೆ ವ್ಯಾಪ್ತಿಯ ಹಿರೇಹಳ್ಳಿ ಬಳಿ ಇರುವ ಛೋಟಾ ಸಾಬರ ಪಾಳ್ಳದ ನಿವಾಸಿ ಶಿವಕುಮಾರ್ ಎಂಬುವರ ಪತ್ನಿ ಜಯಲಕ್ಷ್ಮಿ (೩೪) ಕೊಲೆಯಾದ ಮಹಿಳೆ. ಅವರ ಗಂಡ ಶಿವಕುಮಾರ್ ಹಿರೇಹಳ್ಳಿ ಬಳಿ ಇರುವ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಮಂಗಳವಾರ ಸಂಜೆ ಕಂಪನಿಯಿAದ ಮನೆಗೆ ಬಂದಾಗ ಜಯಲಕ್ಷಿö್ಮÃ ಮನೆಗೆ ಬಂದಿಲ್ಲದ ಬಗ್ಗೆ ಮಕ್ಕಳನ್ನು ವಿಚಾರಿಸಿ, ಜಮೀನನ ಬಳಿಗೆ ಹೋದಾಗ ಜಯಲಕ್ಷ್ಮಿಯ ಮೈ ಮೇಲೆ ಬಟ್ಟೆ ಇಲ್ಲದೆ ರಕ್ತದ ಮಡುವಿನಲ್ಲಿ ಶವವಾಗಿದ್ದ ನೋಡಿ ಆತಂಕಗೊAಡು ತತ್ ಕ್ಷಣವೇ ಕ್ಯಾತ್ಸಂದ್ರ ಪೋಲಿಸ್ ಠಾಣೆಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಕ್ಯಾತ್ಸಂದ್ರ ಪೋಲಿಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಓಂ ಪ್ರಕಾಶ್ ಗೌಡ, ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಡಿವೈಎಸ್ಪಿ ಶ್ರೀನಿವಾಸ್, ವೃತ್ತ ನಿರೀಕ್ಷಕರಾದ ಚನ್ನೇಗೌಡ ಅವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಬೆರಳಚ್ಚು ತಜ್ಞರು, ಶ್ವಾನದಳದವರು,ಕರೆಸಿ ತನಿಖೆ ಚುರುಕುಗೊಳಿಸಿದ್ದಾರೆ.ಸ್ಥಳಕ್ಕೆ ಎಸ್ಪಿ ರಾಹುಲ್ ಕುಮಾರ್ ಶಹಾಪುರ್ ವಾಡ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಉದೇಶ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪೋಲಿಸ್ ಬಂದೋಬಸ್ತ್ನಲ್ಲಿ ಶವ: ಗ್ಯಾಂಗ್ ರೇಪ್ ಆಗಿರುವ ಶಂಕೆ ಹಿನ್ನೆಲೆಯಲ್ಲಿ ಪೋಲಿಸರು ಶವವನ್ನು ತುಮಕೂರಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸದೆ ಕೊಲೆಯಾದ ಸ್ಥಳದಲ್ಲಿಯೇ ಶವವನ್ನು ತೆಗೆಯದೆ ಬಿಗಿ ಪೋಲಿಸ್ ಬಂದೋಬಸ್ತ್ ರಾತ್ರಿ ಇಡಿ ಶವವನ್ನು ಕಾಯಲಾಗಿತ್ತು. ಬುಧವಾರ ಬೆಳಗ್ಗೆ ಮಹಿಳಾ ವೈದ್ಯರನ್ನು ಕರೆಸಿ ವೈದ್ಯಕೀಯ ತಪಾಸಣೆ ನೆಡೆಸಿದರು. ಆದರೆ ಶವವನ್ನ ಪರಿಶೀಲನೆ ನೆಡೆಸಲು ಎಫ್‌ಎಸ್‌ಎಲ್ ಅಧಿಕಾರಿಗಳನ್ನು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಿಲ್ಲೆಯಲ್ಲಿ ಇರುವ ನುರಿತ ಪೋಲಿಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವಿಶೇಷ ತಂಡ ರಚಿಸಿ ಡಿವೈಎಸ್ಪಿ ಶ್ರೀನಿವಾಸ್ ಅವರ ನೇತೃತ್ವದಲ್ಲಿ ತನಿಖೆಯನ್ನು ತೀವ್ರಗೊಳಿಸಿದ್ದಾರೆ.