ಶಿರಾ: ತಾಲ್ಲೂಕಿನಲ್ಲಿ ಸುಮಾರು ೩೨೬೩೦ ಹೇಕ್ಟೇರ್ ವಿಸ್ತೀರ್ಣದಲ್ಲಿ ಶೇಂಗಾ ಬಿತ್ತನೆಯಾಗಿದ್ದು, ಹೂ, ಹೂಡು ಇಳಿಯುವ ಹಂತ ಮತ್ತು ಕಾಯಿ ಬಲಿಯುವ ಹಂತದಲ್ಲಿರುತ್ತದೆ. ಇತ್ತೀಚಿನ ದಿನಗಳಲ್ಲಿ ತುಂತುರು ಮಳೆ ಮತ್ತು ಮೋಡ ಕವಿದ ವಾತಾವರಣವಿದ್ದು, ಸುರಳಿ ಪೂಚೆ/ ರಸ ಹೀರುವ ಕೀಟಗಳ ಬಾದೆ ಕಂಡು ಬಂದಿದೆ. ಈ ಕೀಟಗಳಿಂದ ಶೇಂಗಾ ಗಿಡಗಳ ಎಲೆಗಳು ಮುದುಡಿಕೊಂಡಿದ್ದು, ಎಲೆಗಳ ಮೇಲೆ ಕಂದು ಬಣ್ಣದ ಮಚ್ಚೆಗಳು ಮೂಡಿರುತ್ತವೆ. ರೈತರು ಈ ಕೀಟದ ಹತೋಟಿಗೆ ಈ ಕೆಳಕಂಡ ಕ್ರಮಗಳನ್ನು ಅನುಸರಿಸಿ ಎಂದು ಸಹಾಯಕ ಕೃಷಿ ನಿರ್ದೇಶಕರಾದ ರಂಗನಾಥ್ ತಿಳಿಸಿದ್ದಾರೆ.
ಮಾನೋಕ್ರೋಟೋಫಾಸ್ ೩೬ ಎಸ್.ಎಲ್ ಕೀಟನಾಶಕವನ್ನು ೧.೫-೨.೦ ಮಿಲಿ ಪ್ರತಿ ಲೀಟರ್ ನೀರಿಗೆ, ಕ್ಲೋರೋಪೈರೊಫಾಸ್ ೨.೦೦ ಮಿಲಿ ಪ್ರತಿ ಲೀಟರ್ ನೀರಿಗೆ, ಪಾಸಲೋನ್ ೩೫ ಇ.ಸಿ. ೨.೦ ಮಿಲಿ ಪ್ರತಿ ಲೀಟರ್ ನೀರಿಗೆ ಹಾಕಿ ಶೇಂಗ ಗಿಡಗಳಿಗೆ ಸಿಂಪಡಿಸಿ ಎಂದು ತಿಳಿಸಿದ್ದಾರೆ.