ತುಮಕೂರು: ಹೊರಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಸಫಾಯಿ ಕರ್ಮ ಚಾರಿಗಳಿಗೆ ಸೂಕ್ತ ವಸತಿ ಸೌಲಭ್ಯ ಕಲ್ಪಿಸುವುದು, ಅವರ ಸೇವೆಯನ್ನು ಖಾ ಯಂಗೊಳಿಸುವುದು, ವೇತನ ಹೆಚ್ಚಳ ಮಾಡುವುದು ಸೇರಿದಂತೆ ವಿವಿಧ ಬೇಡಿ ಕೆಗಳ ಅಹವಾಲುಗಳನ್ನು ಸಫಾಯಿ ಕರ್ಮಚಾರಿಗಳು ರಾಷ್ಟ್ರೀಯಾ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ.ವೆಂಕಟೇಶನ್ ಅವರ ಮುಂದಿಟ್ಟರು.
ಜಿಲ್ಲಾಡಳಿತದಿAದ ನಗರದ ಸಿದ್ಧಿವಿನಾ ಯಕ ಕಲ್ಯಾಣ ಮಂಟಪದಲ್ಲಿ ರಾಷ್ಟ್ರೀಯಾ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ.ವೆಂಕ ಟೇಶನ್ ಅಧ್ಯಕ್ಷತೆಯಲ್ಲಿ ಜರುಗಿದ ಸಫಾಯಿ ಕರ್ಮಚಾರಿಗಳ ಕಾರ್ಯಕ್ರಮಗಳ ಅನುಷ್ಟಾನ ಮತ್ತು ಕುಂದುಕೊರತೆಗಳ ಸಭೆಯಲ್ಲಿ ಸಫಾಯಿ ಕರ್ಮಚಾರಿಗಳು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಅಧ್ಯಕ್ಷರಿಗೆ ಮನವಿ ಮಾಡಿದರು.
ಸಫಾಯಿ ಕರ್ಮಚಾರಿಗಳ ಅಹವಾಲುಗಳನ್ನು ಆಲಿಸಿದ ರಾಷ್ಟ್ರೀಯಾ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ.ವೆAಕಟೇಶನ್ ಮಾತ ನಾಡಿ, ರಾಷ್ಟ್ರೀಯಾ ಸಫಾಯಿ ಕರ್ಮಚಾರಿಗಳ ಆಯೋಗವು ಸಫಾಯಿ ಕರ್ಮಚಾರಿಗಳ ಕ್ಷೇಮಾ ಭಿವೃದ್ಧಿಗೆ ಸದಾ ಜೊತೆಯ ಲ್ಲಿರುತ್ತದೆ. ನಿಮ್ಮೆಲ್ಲಾ ಸಮ ಸ್ಯೆಗಳನ್ನು ಪರಿಶೀಲಿಸಿ ಸರ್ಕಾರಕ್ಕೆ ಶಿಫಾರಸು ಮಾಡಿ ಉನ್ನತ ಮಟ್ಟದಲ್ಲಿ ಚರ್ಚಿಸಿ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ರಾಷ್ಟ್ರೀಯಾ ಕರ್ಮಚಾರಿಗಳ ಆಯೋಗಕ್ಕೆ ತಮ್ಮ ಸಮ ಸ್ಯೆ ಮತ್ತು ಬೇಡಿಕೆಗಳ ಕುರಿತು ಪತ್ರ ಬರೆದು ಕಳಿಸಿ ಎಂದ ಅವರು, ಸಫಾಯಿ ಕರ್ಮಚಾರಿಗಳಿಗೆ ಉತ್ತಮ ಸೌಲಭ್ಯ ಕಲ್ಪಿಸಲು ಅನೇಕ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಟಾನಕ್ಕೆ ತರಲಾಗುವುದು ಎಂದು ಹೇಳಿದರು.
ಚಿಕ್ಕನಾಯಕನಹಳ್ಳಿ ಹಾ ಗೂ ಪಾವಗಡ ತಾಲೂಕಿನ ಸಫಾಯಿ ಕರ್ಮಚಾರಿ ಗಳಿಗೆ ವಸತಿಗೆ ಯೋಗ್ಯ ವಲ್ಲದ ಕಾಡು ಹಾಗೂ ಬೆಟ್ಟದ ಬಂಡೆಯ ಮೇಲೆ ನಗರದ ದೂರದ ಪ್ರದೇಶದಲ್ಲಿ ವಸತಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಬೆಟ್ಟದ ಮೇಲೆ ಜೀವನ ನಡೆಸುವುದು ಕಷ್ಟ. ಹಾಗಾಗಿ ನಮಗೆ ನಗರದಲ್ಲಿ ಗುರುತಿಸಲಾಗಿರುವ ನಿವೇಶನಗಳ ಪ್ರದೇಶದಲ್ಲಿ ವಸತಿ ಸೌಲಭ್ಯ ಕಲ್ಪಿಸುವಂತೆ ಅಧ್ಯಕ್ಷರಿಗೆ ಮನವಿ ಮಾಡಿದಾಗ ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು ಪರಿಶೀಲನೆ ನಡೆಸಿ ಸೂಕ್ತ ಪ್ರದೇಶದಲ್ಲಿಯೆ ವಸತಿ ಸೌಲಭ್ಯ ಕಲ್ಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಕೊರಟಗೆರೆ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಚಾಲಕರು ಹಾಗೂ ಹಲವು ವರ್ಷಗಳಿಂದಲೂ ಹೊರಗುತ್ತಿಗೆಯಲ್ಲಿ ಸೇವೆ ಸಲ್ಲಿಸುತ್ತಿರುವವರು ನಮಗೆ ನಿವೇಶನ ಕಲ್ಪಿಸುವುದರ ಜೊತೆಗೆ ಸಂಬಳ ಹೆಚ್ಚಳ ಮಾಡಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು, ಹೊರಗುತ್ತಿಗೆಯಲ್ಲಿ ಕೆಲಸ ನಿರ್ವಹಿಸುತ್ತಿರುವವರಿಗೆ ಆಶ್ರಯ ಸಮಿತಿ ಯಲ್ಲಿ ಮನೆ ದೊರಕಿಸಲು ಅವಕಾಶವಿದ್ದು, ಸ್ಥಳೀಯ ಅಧಿಕಾರಿಗಳು ಹೊರಗುತ್ತಿಗೆಯಲ್ಲಿ ಕಾರ್ಯ ನಿರ್ವಹಿ ಸುತ್ತಿರುವವರಿಗೆ ಸೌಲಭ್ಯದೊರಕಿಸಿ ಕೊಡಬೇಕು ಸೂಚಿಸಿದರು.
೨೦೧೧ರಿಂದ ೨೦೧೭ರವರೆಗೆ ಪೌರ ಕಾರ್ಮಿಕರ ಪಿಎಫ್ ಹಣ ಕಡಿತ ವಾಗಿದ್ದರೂ ಭವಿಷ್ಯ ನಿಧಿಗೆ ಜಮೆಯಾಗಿಲ್ಲ. ಹಣ ಕಡಿತಗೊಳ್ಳುವ ಬಗ್ಗೆ ಯಾ ವುದೇ ಮಾಹಿತಿ ಅರಿವಿಗೆ ಬರುವುದಿಲ್ಲ. ಈ ಬಗ್ಗೆ ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡುತ್ತಿಲ್ಲ ಎಂದು ಪೌರ ಕಾರ್ಮಿಕರು ಅಧ್ಯಕ್ಷರ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ಕಡಿತಗೊಳ್ಳುವ ಹಣವನ್ನು ಭವಿಷ್ಯ ನಿಧಿಗೆ ಸಮರ್ಪಕವಾಗಿ ವರ್ಗಾ ಯಿಸಲಾಗುವುದು. ಸಂಬಳ ಜಮಾ ಆದ ಹತ್ತು ದಿನಗಳ ಒಳಗೆ ಹಣ ಕಡಿತವಾಗುವ ಮಾಹಿತಿ ಮೊಬೈಲ್‌ಗೆ ರವಾನೆಯಾಗಲಿದೆ. ಅಧಿಕಾರಿಗಳು ಪಿಎಫ್ ಸೌಲಭ್ಯವನ್ನು ಪೌರಕಾರ್ಮಿಕರಿಗೆ ತಲುಪಿಸ ಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಹನುಮಂತಪ್ಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹ ಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿ ಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರ ವಾಡ್, ಉಪವಿಭಾಗಾಧಿಕಾರಿ ಅಜಯ್ ಸೇರಿದಂತೆ ಇತರರಿದ್ದರು.
ಸಭೆಯ ಬಳಿಕ ರಾಷ್ಟ್ರೀಯಾ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ.ವೆAಕಟೇಶನ್ ಅವರು ನಗರದ ಸಂತೇಪೇಟೆಯ ಅರವಿಂದ ನಗರದಲ್ಲಿನ ಪೌರಕಾರ್ಮಿಕರ ನಿವಾಸಗಳಿಗೆ ಭೇಟಿ ನೀಡಿ ಸಮಸ್ಯೆ ಗಳನ್ನು ಆಲಿಸಿದರು. ನಂತರ ದಿಬ್ಬೂರಿನಲ್ಲಿ ಪೌರಕಾರ್ಮಿಕರಿಗಾಗಿ ಮಹಾನಗರಪಾಲಿಕೆಯಿಂದ ನಿರ್ಮಿಸಲಾಗುತ್ತಿರುವ ೫೨ ವಸತಿ ನವೇಶನಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.