![](https://suvarnapragathi.in/wp-content/uploads/2021/08/24-AUG-PS-PHOTO-780x470.jpg)
ಚಿಕ್ಕನಾಯಕನಹಳ್ಳಿ: ಆಗಸ್ಟ್ ೧೪ ರಂದು ಪಟ್ಟಣದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಿದ್ದೀರಿ, ಆದರೆ ಪುರಸಭಾ ಸದಸ್ಯರಿಗೆ ಆಹ್ವಾನ ಕೊಟ್ಟಿಲ್ಲ, ನಾವು ಜನರಿಂದ ಆಯ್ಕೆಯಾಗಿದ್ದೇವೆ, ಪುರಸಭೆಗೆ ಕತ್ತೆ ಕಾಯೋಕೆ ಬಂದಿಲ್ಲ ಎಂದು ಸದಸ್ಯೆ ಉಮಾ ಪರಮೇಶ್ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಪುರಸಭೆಯಲ್ಲಿ ಪುರಸಭಾಧ್ಯಕ್ಷೆ ಪುಷ್ಪರವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಈ ಆಕ್ರೋಶ ವ್ಯಕ್ತವಾಯಿತು. ಪುರಸಭಾ ಮುಖ್ಯಾಧಿಕಾರಿ ಶ್ರೀನಿವಾಸ್ ಮಾತನಾಡಿ, ನಮ್ಮಿಂದ ತಪ್ಪಾಗಿದೆ ಕ್ಷಮಿಸಿ ಎಂದರು.
ಆರೋಗ್ಯ ನಿರೀಕ್ಷಕರಾದ ವಿದ್ಯಾ ಪಟ್ಟಣದಲ್ಲಿ ಎಲ್ಲೆಂದರಲ್ಲಿ ಕಸ ಬಿಟ್ಟಿದ್ದು ಸ್ವಚ್ಛತೆಯ ಬಗ್ಗೆ ೨೩ ವಾರ್ಡ್ನ ಸದಸ್ಯರು ದೂರವಾಣಿ ಮಾಡಿದರೆ ಸರಿಯಾಗಿ ಸ್ಪಂದಿಸುವುದಿಲ್ಲ ಇದರ ಬಗ್ಗೆ ನೋಟಿಸ್ ನೀಡಿ ಎಂದು ಸದಸ್ಯರು ಒತ್ತಾಯಿಸಿದರು.
ಪುರಸಭಾ ನೌಕರರು ಸರಿಯಾಗಿ ಕಾರ್ಯನಿರ್ವ ಹಿಸದೇ ಇರುವುದರಿಂದ ಪಟ್ಟಣದ ಪುರಸಭಾ ಸದಸ್ಯರಿಗೆ ಜನತೆ ಛೀ ಮಾರಿ ಹಾಕುತ್ತಿದ್ದಾರೆ ಇದ ರಿಂದ ಸದಸ್ಯರಿಗೆ ಅವಮಾನವಾಗುತ್ತಿದೆ ಎಂದರು.
ಪಟ್ಟಣದ ಪುರಸಭೆಯ ಗುತ್ತಿಗೆ ಪೌರ ಕಾರ್ಮಿಕರಿಗೆ ಪುರಸಭೆಯಿಂದ ಸಂಬಳ ನೀಡಲಾಗುವುದಿಲ್ಲ, ಸರ್ಕಾರ ಶೇ.೭೫% ರಷ್ಟು ಅನುದಾನ ನೀಡಿದರೆ ಪುರಸಭಾ ನಿಧಿಯಿಂದ ಶೇ.೨೫ ರಷ್ಟು ಹಣ ಸೇರಿಸಿ ಗುತ್ತಿಗೆ ಪೌರಕಾರ್ಮಿಕರಿಗೆ ಸಂಬಳ ನೀಡಲಾ ಗುವುದು. ಜೂನ್, ಜುಲೈ, ಆಗಸ್ಟ್ ವರೆಗೆ ಸಂಬಳ ನೀಡುತ್ತೇವೆ, ನಂತರ ಸಂಬಳ ನೀಡಲು ಸಾದ್ಯವಿಲ್ಲ ಎಂದು ಮುಖ್ಯಾಧಿಕಾರಿ ಹೇಳಿದರು. ಈ ಬಗ್ಗೆ ಪೌರಾಡಳಿತ ಸಚಿವರನ್ನು ಭೇಟಿ ಮಾಡಲು ಸಭೆ ತೀರ್ಮಾನಿಸಿತು.
ಸರ್ಕಾರದ ಸುತ್ತೋಲೆ ಬಂದಾಗ ಮುಂಚಿತವಾಗಿ ಸದಸ್ಯರಿಗೆ ಮನೆಗೆ ಕಳುಹಿಸಿ ಎಂದು ಸದಸ್ಯ ರಾಜ ಶೇಖರ್ ಸಭೆಯಲ್ಲಿ ಹೇಳಿದರು.
ಸರ್ಕಾರ ಪುರಸಭೆಗೆ ೨೦೨೧-೨೨ ರಲ್ಲಿ ಒಂದು ಕೋಟಿ ೫೦ಲಕ್ಷ ರೂ ಬಿಡುಗಡೆ ಮಾಡಿದೆ ಆದರೆ ಇದುವರೆಗೆ ಸಭೆಗೆ ತಿಳಿಸಿರುವುದೇ ಇಲ್ಲ ಎಂದು ಸದಸ್ಯ ಬಾಬು ಹೇಳಿದಾಗ ಅನುದಾನ ಬಂದಿದ್ದರೂ ಕ್ರಿಯಾಯೋಜನೆ ಮಾಡುವಾಗ ಸದಸ್ಯರ ಗಮನಕ್ಕೆ ತಂದು ಮಾಡಲಾಗುವುದು ಎಂದು ಮುಖ್ಯಾಧಿಕಾರಿ ಶ್ರೀನಿವಾಸ್ ಹೇಳಿದರು.
ಕೆಲವು ಪುರಸಭೆಯ ನೌಕರರೇ ವಾಹನಗಳ ಬಿಡಿ ಭಾಗಗಳನ್ನು ಕದ್ದು ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಾರೆ ಇದರ ಬಗ್ಗೆ ತನಿಖೆ ನಡೆ ಸುವಂತೆ ಪುರಸಭಾ ಮುಖ್ಯಾಧಿಕಾರಿಗಳಿಗೆ ಸದಸ್ಯೆ ರೇಣುಕಮ್ಮ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಭೆಗೆ ೨೨ ಮಂದಿ ಪೌರ ಕಾರ್ಮಿಕರು ಆಗಮಿಸಿ, ವಿದ್ಯುತ್ ಹಾಗೂ ನೀರು ಬಿಡುವವರಿಗೆ ಟೆಂಡರ್ ಕರೆದು ಸಂಬಳ ನೀಡುತ್ತೀರಾ ಆದರೆ ಪೌರ ಕಾರ್ಮಿಕರಿಗೆ ಏಕೆ ಟೆಂ ಡರ್ ಕರೆಯುತ್ತಿಲ್ಲ ಎಂದು ಪ್ರಶ್ನಿಸಿದರಲ್ಲದೆ, ನಾವು ಪೌರ ಕಾರ್ಮಿಕರು ಬೆಳಗಿನ ಜಾವ ಎದ್ದು ಊರನ್ನು ಸ್ವಚ್ಛಗೊಳಿಸುತ್ತೀವಿ ನಮಗೆ ಏಕೆ ತಾರತಮ್ಯ ಮಾಡುತ್ತೀರ ಎಂದು ಪ್ರಶ್ನಿಸಿದರು.
ಸಭೆಯಲ್ಲಿ ಪುರಸಭಾ ಅಧ್ಯಕ್ಷೆ ಪುಷ್ಪ ಹನುಮಂತ ರಾಜು, ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ್, ಸದಸ್ಯರಾದ ಸಿ.ಬಸವರಾಜು, ಮಲ್ಲೇಶ್, ಕೆಂಗಲ್ ದಯಾನಂದ್, ಶ್ಯಾಮ್, ಮಂಜುನಾಥಗೌಡ, ರತ್ನಮ್ಮ ಕಳಸೇಗೌಡ, ಜಯಮ್ಮ, ಲಕ್ಷ್ಮೀ ಪಾಂಡುರAಗ, ಸಿ.ಡಿ.ಸುರೇಶ್, ನಾಗರಾಜು, ಪೂರ್ಣಿಮ, ಮಲ್ಲಿಕಾರ್ಜುನ್, ಇತರರಿದ್ದರು.