ತುಮಕೂರು:ಪಿ.ಟಿ.ಸಿ.ಎಲ್.ಕಾಯ್ದೆಯ ವಿರುದ್ದ ಸುಪ್ರಿಂಕೋರ್ಟು ನೀಡಿರುವ ಆದೇಶದ ವಿರುದ್ದ ರಾಜ್ಯ ಸರಕಾರ ಮೇಲ್ಮನವಿ ಸಲ್ಲಿಸಬೇಕು,ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯ ಜಾರಿಗೆ ಒತ್ತಾಯಿಸಿ ಇಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ,ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ನಿಟ್ಟೂರು ರಂಗಸ್ವಾಮಿ ಅವರ ನೇತೃತ್ವದಲ್ಲಿ ಸಮಿತಿ ಹಲವಾರು ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಸರಕಾರದ ವಿರುದ್ದ ಘೋಷಣೆ ಕೂಗಿದರು.
ಈ ವೇಳೆ ಮಾತನಾಡಿದ ಅವರು, ಪರಿಶಿಷ್ಟ ಜಾತಿ ಮತ್ತು ವರ್ಗಗಳ ಜನರ ಭೂಮಿಯನ್ನು ಪರಭಾರೆ ಮಾಡದಂತೆ ಜಾರಿಗೆ ತಂದಿದ್ದ ಪಿಟಿಸಿಎಲ್ ಕಾಯ್ದೆಯ ವಿರುದ್ದವಾಗಿ ಸುಪ್ರಿಂಕೋರ್ಟು ತೀರ್ಪು ನೀಡಿದೆ. ಇದರಿಂದ ಅಲ್ಪಸ್ವಲ್ಪ ಜಮೀನು ಹೊಂದಿದ್ದ ಜನರು ಸಹ ಉಳ್ಳವರ ಮುಂದೆ ಜಮೀನಿಗಾಗಿ ಹೋರಾಟ ಮಾಡಲಾಗದೆ ಪರಿತಪಿಸುವಂತಾಗಿದೆ. ಹಾಗಾಗಿ ರಾಜ್ಯ ಸರಕಾರ ಕೂಡಲೇ ಇದರ ವಿರುದ್ದ ಮೇಲ್ಮನವಿ ಸಲ್ಲಿಸಬೇಕೆಂಬುದು ದಸಂಸ ಒತ್ತಾಯವಾಗಿದೆ. ಹಾಗೆಯೇ ೨೦೧೧ರಲ್ಲಿಯೇ ನ್ಯಾ.ಎ.ಜೆ.ಸದಾಶಿವ ಅವರು ಒಳಮೀಸಲಾತಿಗೆ ಸಂಬAಧಿಸಿದAತೆ ಮನವಿ ಸಲ್ಲಿಸಿದ್ದರೂ ಸಹ ಇದುವರೆಗೂ ರಾಜ್ಯ ಸರಕಾರ ಅದನ್ನು ಸದನದಲ್ಲಿ ಮಂಡಿಸಿ, ಅದರ ಶಿಫಾರಸ್ಸುಗಳನ್ನು ಜಾರಿಗೊಳಿಸುವ ಕೆಲಸ ಮಾಡುತ್ತಿಲ್ಲ. ಇಲ್ಲದ ಸಬೂಬುಗಳನ್ನು ಹೇಳಿ ಕಾಲಹರಣ ಮಾಡುತಿದೆ. ಸರಕಾರ ಕೂಡಲೇ ವಿಧಾನಸಭೆಯಲ್ಲಿ ಮಂಡಿಸಿ, ಅದರ ಶಿಫಾರಸ್ಸಗಳ ಜಾರಿಗೆ ಮುಂದಾಗಬೇಕು ಎಂಬುದು ದಸಂಸ ಆಗ್ರಹವಾಗಿದೆ ಎಂದರು.
ಜನಸAಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಳದ ಹಿನ್ನೆಲೆಯಲ್ಲಿ ನೇಮಕಗೊಂಡಿರುವ ನ್ಯಾ.ಡಾ.ನಾಗಮೋಹನ್ ದಾಸ್ ನೇತೃತ್ವದ ಆಯೋಗದ ವರದಿ ಹಾಗು ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷರಾದ ನ್ಯಾಯವಾದಿ ಕಾಂತರಾಜು ಅವರ ಆಯೋಗ ಜಾತಿಗಣತಿ ವರದಿಗಳನ್ನು ಕೂಡಲೇ ಸದನದಲ್ಲಿ ಅಂಗೀಕರಿಸಿ, ಅವುಗಳ ಅನ್ವಯ ಪರಿಶಿಷ್ಟ ಜಾತಿ, ವರ್ಗಗಳು ಹಾಗೂ ಹಿಂದುಳಿದ ವರ್ಗಗಳಿಗೆ ನೀಡುತ್ತಿರುವ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕೆಂದು ನಿಟ್ಟೂರು ರಂಗಸ್ವಾಮಿ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ದೊಡ್ಡೇರಿ ಕಣಿಮಯ್ಯ, ಲಕ್ಷಿö್ಮಕಾಂತ್, ಗಾಂಧಿರಾಜು, ಮರಳೂರು ಕೃಷ್ಣಮೂರ್ತಿ, ನರಸಯ್ಯ, ಕೇಬಲ್ ರಘು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.