ಜಿಲ್ಲೆತುಮಕೂರು
Trending

ಪಟ್ಟಣದಲ್ಲೇ ಹಾಸ್ಟಲ್ ನಿರ್ಮಾಣಕ್ಕೆ ಒತ್ತಾಯಿಸಿ ಮನವಿ | suvarna pragathi

ಮಾಜಿ ಶಾಸಕ ತಿಮ್ಮರಾಯಪ್ಪ ಮತ್ತು ಸಂಘ ಸಂಸ್ಥೆಗಳ ಮುಖಂಡರಿAದ ಡೀಸಿಗೆ ಮನವಿ

ತುಮಕೂರು: ಪಾವಗಡ ಪಟ್ಟಣದಲ್ಲಿ ಸಮಾಜ ಕಲ್ಯಾಣ ಇಲಾಖೆವತಿಯಿಂದ ನಿರ್ಮಿಸುತ್ತಿರುವ ವಸತಿ ನಿಲಯಗಳು ಕಾಲೇಜಿನಿಂದ ಐದಾರು ಕಿ.ಮಿ. ದೂರದಲ್ಲಿದ್ದು,ವಿದ್ಯಾರ್ಥಿಗಳು ಊಟ,ತಿಂಡಿ, ವಿಶ್ರಾಂತಿಗೆAದು ಓಡಾಡಲು ಅನಾನುಕೂಲವಾಗುವ ಹಿನ್ನೆಲೆಯಲ್ಲಿ ನಿರ್ಮಾಣ ಕಾರ್ಯವನ್ನು ತಾತ್ಕಾಲಿಕ ವಾಗಿ ಸ್ಥಗಿತಗೊಳಿಸಿ,ಕಾಲೇಜಿಗೆ ಹತ್ತಿರದಲ್ಲಿ ಹಾಸ್ಟಲ್ ನಿರ್ಮಾಣ ಮಾಡಬೇಕೆಂದು ಮಾಜಿ ಶಾಸಕ ಕೆ.ಎಂ.ತಿಮ್ಮರಾಮಯಪ್ಪ ಮತ್ತು ವಿವಿಧ ಸಂಘ ಸಂಸ್ಥೆಗಳ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಮಂಗಳವಾರ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಮುಖಂಡರುಗಳು,ಪಾವಗಡ ಪಟ್ಟಣದಲ್ಲಿ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ೨೪ ಕೋಟಿ ರೂ ವೆಚ್ಚದಲ್ಲಿ ೫ ವಸತಿ ನಿಲಯಗಳನ್ನು ಕ್ರೆöÊಸ್ಟ್ ಸಂಸ್ಥೆವತಿಯಿAದ ನಿರ್ಮಿಸಲು ಮುಂದಾಗಿದ್ದಾರೆ.ಪಿಯುಸಿ,ಪದವಿ ಕಾಲೇಜುಗಳು ಚಳ್ಳಕೆರೆ, ಕಲ್ಯಾಣ ದುರ್ಗ ರಸ್ತೆಯಲ್ಲಿದ್ದರೆ, ಹಾಸ್ಟಲ್‌ಗಳನ್ನು ತುಮಕೂರು ರಸ್ತೆಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ.ಹಾ ಸ್ಟಲ್‌ಗೂ,ಕಾಲೇಜಿಗೂ ಕನಿಷ್ಠವೆಂದರೂ ಐದು ಕಿ.ಲೋ ಮೀಟರ್ ದೂರವಿದೆ.ಬೆಳಗ್ಗೆ ತಿಂಡಿ ತಿಂದು ಕಾಲೇಜಿಗೆ ಬಂದ ವಿಧ್ಯಾರ್ಥಿಗಳು ಮದ್ಯಾ ಹ್ನದ ವೇಳೆ ಊಟಕ್ಕೆ ಮತ್ತೆ ಐದು ಕಿ.ಮಿ ನಡೆದು ಹೋಗಬೇಕು ,ಅಲ್ಲಿಂದ ಪುನಃ ಕಾಲೇಜಿಗೆ ಬರ ಬೇಕು.ಹಾಗಾಗಿ ದಿನಕ್ಕೆ ಕನಿಷ್ಠವೆಂದರೂ ೨೫ ಕಿ.ಮಿ.ನಡೆದಾಡಬೇಕಾಗುತ್ತದೆ.ಅತಿ ಉಷ್ಣಾಂಶ ದಿಂದ ಕೂಡಿದ ಪಾವಗಡದಂತಹ ನೆಲದಲ್ಲಿ ಇದು ಸಾಧ್ಯವೇ ಎಂದು ತಿಮ್ಮರಾಯಪ್ಪ ಪ್ರಶ್ನಿಸಿದರು.ಈ ಹಿಂದೆ ಸದರಿ ಜಾಗದಲ್ಲಿ ಹಾಸ್ಟಲ್ ನಿರ್ಮಾಣಕ್ಕೆ ಮುಂದಾದ ಸಂದರ್ಭದಲ್ಲಿ ಜನಪ್ರತಿನಿಧಿಗಳು ಹಾಗೂ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿದ್ದ ರಿಂದ ಕೆಲ ಕಾಲ ನಿರ್ಮಾಣ ಕಾರ್ಯ ಸ್ಥಗಿತಗೊ ಳಿಸಿದ್ದರು.ಆದರೆ ಏಕಾಎಕಿ ಕಳೆದ ಒಂದು ವಾರದಿಂದ ಪೌಂಡೇಷನ್‌ಗೆ ಮಣ್ಣು ತೆಗೆಯುವ ಕೆಲಸ ನಡೆಯುತ್ತಿದೆ. ಕೂಡಲೇ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕೆಂಬುದು ನಮ್ಮ ಆಗ್ರಹವಾಗಿದೆ.ಕಾಲೇಜಿಗೆ ಹತ್ತಿರದಲ್ಲಿಯೇ ಸರ್ವೆ ನಂಬರ್ ೧೭೮ರಲ್ಲಿ ೧೩ ಎಕರೆ ಸರಕಾರಿ ಜಾಗವಿದ್ದು,ಒಂದೇ ಜಾಗದಲ್ಲಿ ಇಷ್ಟು ಹಾಸ್ಟಲ್‌ಗಳನ್ನು ನಿರ್ಮಿಸಬಹುದಾಗಿದೆ.ಅಲ್ಲದೆ ಕಾಲೇಜಿನ ಬಳಿಯೇ ಸುಮಾರು ೩೦ ಗುಂಟೆ ಸರಕಾರಿ ಜಾಗವಿದೆ. ಅಲ್ಲಿಯೂ ಒಂದು ಹಾಸ್ಟಲ್ ಕಟ್ಟಡ ನಿರ್ಮಿಸಬಹುದು.ಹೀಗಿದ್ದರೂ ತಾಲೂಕು ಆಡಳಿತ ಐದು ಕಿ.ಮಿ.ದೂರದಲ್ಲಿ ಹಾಸ್ಟಲ್ ನಿರ್ಮಿಸಲು ಹೊರಟಿರುವುದು ಸರಿಯಲ್ಲ.ಜಿಲ್ಲಾಡಳಿತ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಕಾಲೇಜು ಹತ್ತಿರದಲ್ಲಿಯೇ ಹಾಸ್ಟಲ್ ನಿರ್ಮಾಣಕ್ಕೆ ಮುಂದಾಗಬೇಕು.ಇಲ್ಲದಿದ್ದರೆ ಉಪವಾಸ ಸತ್ಯಾ ಗ್ರಹ ಹಮ್ಮಿಕೊಳ್ಳುವುದಾಗಿ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ತಿಳಿಸಿದರು.
ಪಾವಗಡ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸೊಗಡು ವೆಂಕಟೇಶ್ ಮಾತನಾಡಿ, ಪಟ್ಟಣದಲ್ಲಿ ಹಲವು ಕಟ್ಟಡಗಳು ಶಿಥಿಲೊಂಡಿದ್ದು,ಕಚೇರಿಗಳು ಬೇರೆಡೆಗೆ ಸ್ಥಳಾಂತರ ಗೊಂಡಿರುವ ಜಾಗಗಳು ಖಾಲಿ ಇವೆ.ಅಲ್ಲದೆ ಪಟ್ಟಣ ಪಂಚಾಯಿತಿ ಸುತ್ತಮುತ್ತ ಮೂರು ಎಕರೆಗೂ ಹೆಚ್ಚು ಜಾಗ ಖಾಲಿ ಇವೆ.ಅಲ್ಲಿ ಹಾಸ್ಟಲ್ ನಿರ್ಮಾಣ ಮಾಡಿದರೆ ಹೆಣ್ಣುಮಕ್ಕಳಿಗೆ ರಕ್ಷಣೆ ಇರುತ್ತದೆ.ಅದನ್ನು ಬಿಟ್ಟು ಐದು ಕಿ.ಮಿ.ದೂರದಲ್ಲಿ ಬೆಟ್ಟ ಪ್ರದೇಶದಲ್ಲಿ ಏ ನಾದರೂ ಹೆಚ್ಚು ಕಡಿಮೆಯಾದರೆ ಬಡವರ ಮಕ್ಕಳ ಜೀವಕ್ಕೆ ಯಾರು ಹೊಣೆ ಎಂಬುದು ಪ್ರಶ್ನೆ ಯಾಗಿದೆ.ಹಾಗಾಗಿ ಕಾಲೇಜಿಗೆ ಹತ್ತಿರದಲ್ಲಿಯೆ ಹಾಸ್ಟಲ್ ನಿರ್ಮಾಣ ಮಾಡಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಮಾತನಾಡಿ, ನಾಳೆ ಸದರಿ ಜಾಗದ ಕುರಿತು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ಸ್ಥಳ ಪರಿಶೀಲನೆ ನಡೆಸಿ ಮನವಿ ಸಲ್ಲಿಸಲಿದ್ದಾರೆ. ಅವರ ವರದಿಯ ನಂತರ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಮಾತನಾಡಿ,ಅವರಿಗೆ ಸಮಸ್ಯೆಯನ್ನು ಮನವರಿಕೆ ಮಾಡಿಕೊಟ್ಟು, ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ಈ ವೇಳೆ ಮುಖಂಡರಾದ ಹೆಚ್.ವಿ.ರಮೇಶ್, ಪೆÀದ್ದಣ್ಣ, ಸಿ.ಕೆ.ತಿಪ್ಪೇಸ್ವಾಮಿ, ನರಸಿಂಹಪ್ಪ, ಟಿ.ಎನ್. ಪೇಟೆ ರಮೇಶ್, ಗೋಪಾಲ್ ನಟರಾಜು ಮತ್ತಿ ತರರು ಜೊತೆಗಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker