ಬೈರನಾಯಕನಹಳ್ಳಿ ಬಳಿ ಮರಳು ತುಂಬುತ್ತಿದ್ದ ಟಿಪ್ಪರ್ ಲಾರಿ ಪೊಲೀಸರ ವಶಕ್ಕೆ

ಕುಣಿಗಲ್ : ಮರಳು ತುಂಬುತ್ತಿದ್ದ ಟಿಪ್ಪರ್ ಲಾರಿಯೊoದನ್ನ ಸೋಮವಾರ ಬೆಳಗಿನ ಜಾವ ಹುಲಿಯೂರುದುರ್ಗ ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ.
ತಾಲೂಕಿನ ಹುಲಿಯೂರುದುರ್ಗ ಪೊಲೀಸ್ ಠಾಣೆ ಪೊಲೀಸರು ಖಚಿತ ಮಾಹಿತಿಯನ್ನು ಆಧರಿಸಿ ಬೈರನಾಯಕನಹಳ್ಳಿಯ ಸಮೀಪ ಮರಳು ತುಂಬುತ್ತಿದ್ದ ಸ್ಥಳಕ್ಕೆ ಪೊಲೀಸರು ತೆರಳಿ ಮರಳು ತುಂಬುತ್ತಿದ್ದ ಟಿಪ್ಪರ್ ಲಾರಿಯನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ಆದರೆ ಮರಳು ತುಂಬುತ್ತಿದ ವ್ಯಕ್ತಿಗಳು ಯಾರೊಬ್ಬರು ಪೊಲೀಸರ ಕೈಗೆ ಸಿಗದೆ ಪರಾರಿಯಾಗಿದ್ದಾರೆ. ಈ ಸಂಬಂಧ ಹುಲಿಯೂರುದುರ್ಗ ಪೊಲೀಸ್ ಠಾಣೆಯ ಪಿಎಸ್ಐ ರವರು ಪತ್ರಿಕೆಯೊಂದಿಗೆ ಮಾತನಾಡಿ ಟಿಪ್ಪರ್ ಲಾರಿಯಲ್ಲಿ ( ka11c3594) ಸುಮಾರು ಹತ್ತು ಟನ್ ಮರಳು ತುಂಬಿತ್ತು ನಿಯಮಾನುಸಾರ ತುಮಕೂರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಗಮನಕ್ಕೆ ತರಲಾಗಿದೆ ಅವರು ಬಂದು ಪರಿಶೀಲನೆ ಮಾಡಿದ ನಂತರ ಪ್ರಕರಣ ದಾಖಲಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಈ ಸಂಬಂಧ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕುಣಿಗಲ್ ತಾಲೂಕಿನ (ಇನ್ಚಾರ್ಜ್) ಅಧಿಕಾರಿಯವರನ್ನು ಕೇಳಿದಾಗ ಮರಳು ತುಂಬಿದ್ದ ಟಿಪ್ಪರ್ ಲಾರಿಯನ್ನು ಹಿಡಿದಿದ್ದೇವೆ ಎಂದು ಹುಲಿಯೂರುದುರ್ಗ ಪಿಎಸ್ಐ ರವರು ದೂರವಾಣಿ ಮೂಲಕ ತಿಳಿಸಿದ್ದಾರೆ ಎಂದರು.