ಹಾಡಹಗಲೇ ಬರೋಬ್ಬರಿ 15 ಲಕ್ಷ ಹಣಕ್ಕೆ ಕನ್ನ ಹಾಕಿದ ಖದೀಮ ಕಳ್ಳರು
ಗುಬ್ಬಿ : ಪಟ್ಟಣದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಕಾರು ನಿಲ್ಲಿಸಿ ಕಚೇರಿಗೆ ಹೋಗಿ ಬರುವಷ್ಟರಲ್ಲಿ ಕಾರಿನಲ್ಲಿದ್ದ ಬರೋಬ್ಬರಿ ಹದಿನೈದು ಲಕ್ಷ ಹಣವನ್ನು ಹಾಡಹಗಲೇ ಕಾರಿನ ಕಿಟಕಿ ಹೊಡೆದು ಹಣ ಲಪಟಾಯಿಸಿರುವ ಘಟನೆ ಇಂದು ಮಧ್ಯಾಹ್ನ 3 ಗಂಟೆ ಸಮಯದಲ್ಲಿ ನಡೆದಿದೆ.
ತಾಲ್ಲೂಕಿನ ಕಡಬ ಹೋಬಳಿ ಡಿ.ರಾಂಪುರ ಗ್ರಾಮದ ವರ್ತಕ ಮತ್ತು ನಿಟ್ಟೂರಿನ ಭವಾನಿ ಟ್ರೇಡರ್ಸ್ ನ ಮಾಲೀಕ ಶಿವರಾಜು ಎಂಬಾತ ಇಂದು ಮಧ್ಯಾಹ್ನ ನಿಟ್ಟೂರಿನ ಎಸ್.ಬಿ. ಐ ಬ್ಯಾಂಕ್ ನ ತನ್ನ ಖಾತೆಯಿಂದ ಹಣ ಬಿಡಿಸಿಕೊಂಡು ಗುಬ್ಬಿ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣಕ್ಕೇ ಬಂದಿದ್ದು ಕಾರು ನಿಲ್ಲಿಸಿ ಕಚೇರಿಗೆ ಹೋಗಿ ಬರುವಷ್ಟರಲ್ಲಿ ಕಾರಿನ ಮುಂದೆ ಸೀಟಿನಲ್ಲಿ ಇಟ್ಟಿದ್ದ ಬರೋಬ್ಬರಿ ಹದಿನೈದು ಲಕ್ಷ ಹಣವನ್ನು ಹಾಡಹಗಲೇ ಕದ್ದೊಯ್ದ ಘಟನೆ ಸಾರ್ವಜನಿಕರನ್ನ ನಡುಕ ಹುಟ್ಟಿಸಿದ ಘಟನೆ ಜರುಗಿದೆ.
ಈಗಾಗಲೇ ಗುಬ್ಬಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು ಗುಬ್ಬಿ ಪೊಲೀಸರು ಕಳ್ಳರ ಜಾಲ ಭೇದಿಸಲು ಕ್ರಮಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.