ಸುದ್ದಿ
ಸರ್ಕಾರಿ ಇಂಜಿನಿಯರ್ಸ್ ಸಂಘದ ಜಿಲ್ಲಾಧ್ಯಕ್ಷರಾಗಿ ಜಿ.ಎನ್. ರಾಧಾಕೃಷ್ಣ ಅವಿರೋಧ ಆಯ್ಕೆ
ತುಮಕೂರು: ರಾಜ್ಯ ಸರ್ಕಾರಿ ಇಂಜಿನಿಯರ್ಸ್ ಸಂಘ ಕರ್ನಾಟಕ ಇಂಜಿನಿಯರಿಂಗ್ ಸರ್ವೀಸ್ ಅಸೋಸಿಯೇಷನ್ ನ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಜಿ.ಎನ್.ರಾಧಾಕೃಷ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕೇಂದ್ರ ಸಂಘದ ಅಧ್ಯಕ್ಷ ಪೀತಾಂಬರಸ್ವಾಮಿಯವರ ಅಧ್ಯಕ್ಷತೆಯಲ್ಲಿ ನಡೆದ ಸರ್ವಸದಸ್ಯರ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಜಿಲ್ಲಾ ಘಟಕದ ಗೌರವಾಧ್ಯಕ್ಷರಾಗಿ ಹೊನ್ನೇಶಪ್ಪ, ಉಪಾಧ್ಯಕ್ಷರಾಗಿ ಯೋಗೀಶ್, ಕಾರ್ಯದರ್ಶಿಯಾಗಿ ರಮೇಶ್, ಜಂಟಿ ಕಾರ್ಯದರ್ಶಿಯಾಗಿ ಪ್ರಕಾಶ್, ಖಜಾಂಚಿಯಾಗಿ ದಯಾನಂದ್ ಹಾಗೂ ಜೆಎಸಿ ಸಂಚಾಲಕರಾಗಿ ಸಿದ್ದಪ್ಪ ಅವರು ಆಯ್ಕೆಯಾಗಿದ್ದಾರೆ.
ನೀರಾವರಿ ಇಲಾಖೆಯ ಯೋಜನಾ ಘಟಕದ ಪದಾಧಿಕಾರಿಗಳಾಗಿ ಗುರುಪ್ರಸಾದ್ (ಅಧ್ಯಕ್ಷ), ತನುಜ(ಉಪಾಧ್ಯಕ್ಷೆ), ವಿಜಯಪ್ರಸಾದ್ (ಕಾರ್ಯದರ್ಶಿ), ಸಂತೋಷ್ (ಜಂಟಿ ಕಾರ್ಯದರ್ಶಿ), ಸರ್ಪಭೂಷಣ್(ಖಜಾಂಚಿ) ಹಾಗೂ ಸೌಮ್ಯ ( ಜೆಎಸಿ ಸಂಚಾಲಕಿ) ರವರುಗಳು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.