
ಕುಣಿಗಲ್ : ಸುಮಾರು 13 ವರ್ಷಗಳಿಂದ ದೊಡ್ಡ ಕೆರೆ ಅಚ್ಚುಕಟ್ಟುದಾರರಿಗೆ ವ್ಯವಸಾಯಕ್ಕೆ ನೀರನ್ನು ಕೊಡದೆ ಹಾಲಿ ಶಾಸಕರು ಹಾಗೂ ಮಾಜಿ ಸಂಸದರು ರೈತರಿಗೆ ಅನ್ಯಾಯ ಮಾಡಿದ್ದಾರೆ ಎಂದು ಮಾಜಿ ಪುರಸಭೆ ಅಧ್ಯಕ್ಷ ಹಾಗೂ ಜೆಡಿಎಸ್ ಮುಖಂಡ ಕೆ ಎಲ್ ಹರೀಶ್ ಆರೋಪಿಸಿದ್ದಾರೆ.
ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 13 ವರ್ಷಗಳಿಂದ ಕುಣಿಗಲ್ ಕೆರೆ ತುಂಬಿದ್ದರು ಶಾಸಕರು ಹಾಗೂ ಮಾಜಿ ಸಂಸದರು ಕೆರೆಯ ನೀರನ್ನು ಅಚ್ಚುಕಟ್ಟುದಾರರಿಗೆ ವ್ಯವಸಾಯಕ್ಕೆ ನೀರನ್ನು ಕೊಡದೆ ರೈತರಿಗೆ ಅನ್ಯಾಯ ಮಾಡಿದ್ದಾರೆ. ಕೆರೆಯಲ್ಲಿ ಕೊಳೆತು ಗಬ್ಬೆಂದು ನಾರುತ್ತಿದ್ದು ಕುಡಿಯಲು ಯೋಗ್ಯವಿಲ್ಲದ ನೀರನ್ನು ಕುಣಿಗಲ್ ಜನತೆಗೆ ಅದೇ ನೀರನ್ನು ಕುಡಿಸುತ್ತಿದ್ದಾರೆ.
ಕೆರೆ ನೀರನ್ನು ತೂಭಿನ ಮುಖಾಂತರ ವ್ಯವಸಾಯಕ್ಕೆ ಬಳಸಿ ಪೂರ್ತಿ ಕೆರೆಯನ್ನು ಖಾಲಿ ಆದ ನಂತರ ಕೆರೆಗೆ ನೀರನ್ನು ತುಂಬಿದ್ದರೆ ಕುಣಿಗಲ್ ಜನತೆಗೆ ಶುದ್ಧ ಕುಡಿಯುವ ನೀರು ಸಿಗುತ್ತಿತ್ತು.
ಕೋಡಿಯಾದರೆ ತಳದಲ್ಲಿ ಕೊಳೆತು ಗುಬ್ಬೆನ್ನು ನಾರುತ್ತಿರುವ ನೀರು ಕೋಡಿಯಲ್ಲಿ ಹೊರಗಡೆ ಹೋಗಲು ಸಾಧ್ಯವಿಲ್ಲ ಎಂಬ ಅರಿವು ಕೂಡ ಶಾಸಕರಿಗೆ ಇಲ್ಲದಂತಾಗಿದೆ ಹೇಮಾವತಿ ಹಾಗೂ ಮಳೆ ನೀರಿನಿಂದ ಕೆರೆ ತುಂಬಿ ಕೋಡಿಬಿದ್ದು ಒಂದು ವಾರ ಕಳೆದ ನಂತರ ಮಾಜಿ ಸಂಸದರನ್ನು ಕರೆಸಿ ಗಂಗೆ ಪೂಜೆ ಮಾಡಿಸುತ್ತಾರೆ. ಮಾಡಿಸಲಿ ಅದಕ್ಕೇನು ನಮ್ಮ ಅಭ್ಯಂತರವಿಲ್ಲ ಆದರೆ ಕಾವೇರಿ ನೀರಾವರಿ ನಿಗಮದ ಹೇಮಾವತಿ ನಾಲೆ ನೋಡಿಕೊಳ್ಳುವ ಅಧಿಕಾರಿಗಳು ಯಾರದೋ ಕುಮ್ಮಕಿನಿಂದ ಕುಣಿಗಲ್ ಕೆರೆಯ ಎರಡು ತೂಬುಗಳಿಗೂ ಸಿಮೆಂಟ್ ಪ್ಯಾಕ್ ಮಾಡಿ ಮುಚ್ಚಿದ್ದಾರೆ ಆದರೆ ಶಾಸಕರು ಈಗ ಹೇಳುತ್ತಿದ್ದಾರೆ ಕುಣಿಗಲ್ ಕೆರೆ ಅಚ್ಚುಕಟ್ಟು ದಾರರಿಗೆ ಕೆರೆಯ ಹಿಂಬದಿಯಲ್ಲಿರುವ ತೂಬಿನ ನೀರು ಹರಿಯುವ ನಾಲೆಗಳನ್ನು ಕ್ಲೀನ್ ಮಾಡಿಸಿ ನೀರು ಬಿಡುತ್ತೇವೆ ಎನ್ನುತ್ತಾರೆ. ಈಗಾಗಲೇ ತೂಬಿನ ಮುಖಾಂತರ ಕುಣಿಗಲ್ ಕೆರೆ ನೀರು ಹರಿಯುವ ಕಾಲುವೆಗಳನ್ನು ಸ್ವಚ್ಛತೆ ಮಾಡಿದ್ದೇವೆ ಎಂದು ಹೇಮವತಿ ಅಧಿಕಾರಿಗಳು ನಕಲಿ ಬಿಲ್ ಸೃಷ್ಟಿ ಮಾಡಿ ಹಣ ಲೂಟಿ ಮಾಡಿದ್ದಾರೆ. ಇವರುಗಳಿಗೆ ಯಾರು ಹೇಳುವವರು ಕೇಳುವವರು ಇಲ್ಲದಂತಾಗಿ ಶಾಸಕರ ಸರ್ಕಾರವೇ ಇದ್ದರೂ ಕೂಡ ಕುಣಿಗಲ್ ತಾಲೂಕು ಅಭಿವೃದ್ಧಿ ವಿಚಾರದಲ್ಲಿ ಶೂನ್ಯವಾಗಿದೆ.
ಯಾವುದೇ ಅಭಿವೃದ್ಧಿ ಕೆಲಸಗಳಿಗೆ ಯಾವಾಗಲೂ ನಮ್ಮ ಸಹಕಾರ ಇದ್ದೆ ಇರುತ್ತದೆ ಎಂದು ಮಾತನಾಡುವ ಶಾಸಕರು ಎಚ್ಚೆತ್ತುಕೊಂಡು ಈ ಬಾರಿ ಕುಣಿಗಲ್ ಕೆರೆ ನೀರನ್ನು ವ್ಯವಸಾಯಕ್ಕೆ ನೀಡದೆ ಇದ್ದ ಪಕ್ಷದಲ್ಲಿ ಬೀದಿಗಿಳಿದು ಶಾಸಕರ ಹಾಗೂ ಹೇಮಾವತಿ ನಾಲೆ ಅಧಿಕಾರಿಗಳ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರುಗಳಾದ ಶ್ರೀನಿವಾಸ್ ಮೂರ್ತಿ, (ವಾಸು) ಅನ್ಸರ್ ಪಾಷ ಉಪಸ್ಥಿತರಿದ್ದರು.