
ಕುಣಿಗಲ್ : ಅಧಿಕಾರಿಗಳು ಎಸ್ ಡಿ ಎಮ್ ಕ್ರಷರ್ ಬಗ್ಗೆ ತನಿಖೆ ನಡೆಸಲು ಬಂದಾಗ ಕ್ರಷರ್ ಮಾಲಿಕ ಮತ್ತು ಆತನ ಸಹಚರರು ನನ್ನ ಮೇಲೆ ಹಾಗೂ ನನ್ನ ಭಾಮೈದನ ಮೇಲೆ ಏಕಾಏಕಿ ಹಲ್ಲೇ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ವಾಜರಪಾಳ್ಯ ಧನಂಜಯ ವಿ ಎಸ್ ಆರೋಪ ಮಾಡಿದ್ದಾರೆ.
ಈ ಸಂಬಂಧ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತದೊಂದಿಗೆ ಮಾತನಾಡಿದ ಅವರು ನಾನು ಹುಲಿಯೂರುದುರ್ಗ ಹೋಬಳಿಯ ದೊಡ್ಡ ಮಾವತ್ತೂರು ಬಳಿ ಇರುವ ಎಸ್‌ಡಿಎಮ್ ಕ್ರಷರ್ ಮೇಲೆ ತನಿಖೆ ನಡೆಸುವಂತೆ ಕುಣಿಗಲ್ ತಾಸಿಲ್ದಾರ್ ಅವರಿಗೆ ದೂರು ನೀಡಿದೆ.ಈ ಸಂಬಂಧ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಅಕ್ಟೋಬರ್ 15ರಂದು ವಾಟ್ಸಾಪ್ ಮೂಲಕ ಪರಿಶೀಲನೆ ಸ್ಥಳಕ್ಕೆ ಬರುವಂತೆ ನೋಟಿಸ್ ನೀಡಿದ್ದರು.
ಕುಣಿಗಲ್ ತಹಶೀಲ್ದಾರ್ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪರಿಸರ ನಿಯಂತ್ರಣ ಇಲಾಖೆ ಅಧಿಕಾರಿಗಳು ಜಂಟಿ ತನಿಖೆ ನೆಡೆಸಲು ಕ್ರಷರ್ ಬಳಿ ಬಂದ ಸಮಯದಲ್ಲಿ ನಾನು ಕೂಡ ಸ್ಥಳಕ್ಕೆ ಹೋದಾಗ ಎಸ್ ಡಿ ಎಮ್ ಕ್ರಷರ್ ಮಾಲಿಕ ಸುರೇಶ್ ಮತ್ತು ಆತನ ಸಹಚರರು ಅಧಿಕಾರಿಗಳ ಮುಂದೆಯೇ ಅವಾಚ್ಯ ಶಬ್ದಗಳಿಂದ ನಿಂದಿಸಿ ನನ್ನ ಮೇಲೆ ದೈಹಿಕವಾಗಿ ಹಲ್ಲೆ ಮಾಡಿರುತ್ತಾರೆ ಇದನ್ನು ಬಿಡಿಸಲು ಬಂದ ನನ್ನ ಭಾಮೈದನಾದ ಭೈರಯ್ಯನ ಮೇಲೂ ಹಲ್ಲೆ ನಡೆಸಿದ್ದಾರೆ ಎಂದರು.
ಅಧಿಕಾರಿಗಳ ಮುಂದೆ ಕ್ರಷರ್ ಮಾಲಿಕ ಮತ್ತು ಆತನ ಸಹಚರರು ಈ ರೀತಿ ನಡೆದುಕೊಂಡರು ಸಹ ಸ್ಥಳದಲ್ಲಿದ್ದ ಅಧಿಕಾರಿಗಳು ಮೂಕ ಪ್ರೇಕ್ಷಕರಂತೆ ವರ್ತಿಸಿ ಕ್ರಷರ್ ಮಾಲೀಕರು ಕೋಟ್ಯಂತರ ಬಂಡವಾಳ ಹಾಕಿರುತ್ತಾರೆ ಅವರಿಗೆ ವಿನಾಕಾರಣ ಏಕೆ ತೊಂದರೆ ಕೊಡುತ್ತೀಯ ಎಂದು ಕ್ರಷರ್ ಮಾಲೀಕರ ಪರವಾಗಿ ತಹಶೀಲ್ದಾರ್ ಬೆಂಬಲಿಸಿ ನನ್ನನ್ನೇ ಬೈಯುತ್ತಾರೆ ಇದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ ಅವರು ನನ್ನ ಮೇಲೆ ಹಲ್ಲೇ ಮಾಡಿದ ಕ್ರಷರ್ ಮಾಲೀಕ ಮತ್ತು ಆತನ ಸಹಚರರ ವಿರುದ್ಧ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಹತ್ತು ಹಲವಾರು ವಿಚಾರಗಳನ್ನು ಹಂಚಿಕೊಂಡ ಅವರು ಈ ಸಂಬಂಧ ನನ್ನ ಜೀವಕ್ಕೆ ತೊಂದರೆಯಿದ್ದು ನನಗೆ ರಕ್ಷಣೆ ನೀಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಈ ಸಂಬಂಧ ಅಕ್ಟೋಬರ್ 16ರಂದು ಧನಂಜಯ ವಿ ಎಸ್ ವಿವರವಾದ ಲಿಖಿತ ದೂರನ್ನು ಹುಲಿಯೂರುದುರ್ಗ ಪೊಲೀಸರಿಗೆ ನೀಡಿದ ಹಿನ್ನೆಲೆಯಲ್ಲಿ ಹುಲಿಯೂರುದುರ್ಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಸಮಾಜ ಸೇವಕ ನಾಗಣ್ಣ, ಪ್ರಕಾಶ್, ಅಮೃತ ಜಯರಾಮ್ ಮತ್ತಿತರರು ಉಪಸ್ಥಿತರಿದ್ದರು.