ಕೊಬ್ಬರಿ ಹಾರಹಾಕಿ,ಬೆಳ್ಳಿ ಕತ್ತಿ ನೀಡಿ ಗೃಹಸಚಿವರ ಜನ್ಮ ದಿನಕ್ಕೆ ಶುಭಕೋರಿದ ಮಾಜಿ ಶಾಸಕ ಡಿ.ಸಿ.ಗೌರಿಶಂಕರ್
ತುಮಕೂರು : ತುಮಕೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಹೆಗ್ಗೆರೆ ಗ್ರಾಮದಲ್ಲಿ ಮಾಜಿ ಶಾಸಕ ಡಿ ಸಿ ಗೌರೀಶಂಕರ್ ನೇತೃತ್ವದಲ್ಲಿ ಗೃಹಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಅವರ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಹೆಗ್ಗರೆ ಸರ್ಕಲ್ ನಲ್ಲಿ ಪಟಾಕಿ ಸಿಡಿಸಿ ಗೃಹಸಚಿವರನ್ನು ಸ್ವಾಗತಿಸಲಾಯಿತು ಬಳಿಕ ಬೃಹತ್ ಕ್ರೇನ್ ಮೂಲಕ ಗೃಹಸಚಿವರಿಗೆ 50000 ಮೌಲ್ಯದ ಬೃಹತ್ ಕೊಬ್ಬರಿ ಹಾರ ಹಾಕಿ ಅಭಿನಂದಿಸಲಾಯಿತು.
ಬಳಿಕ ವೇದಿಕೆ ಬಳಿ ಬಂದ ಗೃಹಸಚಿವರು ಮಾಜಿ ಶಾಸಕ ಡಿ ಸಿ ಗೌರೀಶಂಕರ್ ,ಕಾಂಗ್ರೆಸ್ ಮುಖಂಡ ಪಾಲನೇತ್ರಯ್ಯ,ಕಲ್ಲಳ್ಳಿ ದೇವರಾಜು ಸೇರಿದಂತೆ ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ 75 ಕೆ ಜಿ ತೂಕದ ಕೇಕ್ ಕತ್ತರಿಸಿದರು ಈ ವೇಳೆ ನೆರೆದಿದ್ದ ಸಾವಿರಾರು ಕಾರ್ಯಕರ್ತರು ಗೃಹಸಚಿವರಿಗೆ ಜನ್ಮದಿನದ ಶುಭಾಶಯ ಕೋರಿದರು.
ಈ ವೇಳೆ ಗೃಹಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ ನಿಮ್ಮ ಪ್ರೀತಿ ಅಭಿಮಾನಕ್ಕೆ ನಾನು ಸದಾಚಿರರುಣಿ ,ನೀವು ಈ ಭಾರಿ ಸ್ವಲ್ಪ ಯಾಮಾರಿದ್ದೀರ ಇಲ್ಲದಿದ್ದರೆ ಡಿ ಸಿ ಗೌರೀಶಂಕರ್ ಶಾಸಕರಾಗಿರುತ್ತಿದ್ದರು ಮುಂದಿನ ಭಾರಿ ಯಾಮಾರಬೇಡಿ ಎಂದು ಮನವಿ ಮಾಡಿದರು.ಇದೇ ವೇಳೆ ಮಾಜಿ ಶಾಸಕ ಡಿ ಸಿ ಗೌರೀಶಂಕರ್ ಗೃಹಸಚಿವರಿಗೆ 4 ಲಕ್ಷ ಮೌಲ್ಯದ ಬೆಳ್ಳಿ ಕಿರೀಟ ,ಕತ್ತಿ ನೀಡಿ ಸನ್ಮಾನಿಸಿದರು. ನೆರೆದಿದ್ದ ಸಾವಿರಾರು ಜನಕ್ಕೆ ಊಟದ ವ್ಯವಸ್ತೆ ಕಲ್ಪಿಸಲಾಗಿತ್ತು.