ಪಟ್ಟಣದಲ್ಲಿ ಸರಣಿ ಕಳ್ಳತನ : ಸಾರ್ವಜನಿಕರಲ್ಲಿ ಆತಂಕ..!
ಗುಬ್ಬಿ : ಪಟ್ಟಣದ ಹೆದ್ದಾರಿ ಬದಿಯ 2 ಸೂಪರ್ ಮಾರ್ಕೆಟ್ ದೊಡ್ಡ ಮಳಿಗೆಯಲ್ಲಿ ಐನಾತಿ ಕಳ್ಳರು ಕೈ ಚಳಕ ತೋರಿ ಸಾವಿರಾರು ರೂಪಾಯಿ ಲಪಾಟಿಸಿ ಹಲ್ಲೆಗೆ ಮುಂದಾದ ಘಟನೆ ತಡರಾತ್ರಿ ನಡೆದಿದ್ದು ಪಟ್ಟಣದ ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದೆ.
ಗುಬ್ಬಿ ಪಟ್ಟಣದ ಶ್ರೀನಿವಾಸ ಹೈಪರ್ ಮಾರ್ಕೆಟ್ ಸೇರಿದಂತೆ ಜಿ.ಎಂ.ಆರ್.ಮೆಗಾ ಮಾರ್ಟ್ ಮಾರ್ಕೆಟ್ ನ ಬೀಗ ಮುರಿದು ತಡೆಯಲು ಬಂದವರ ಮೇಲೆ ಹಲ್ಲೆಗೆ ಮುಂದಾಗಿ ಅಂಗಡಿ ಮಾಲೀಕರನ್ನು ಹೆದರಿಸಿ ಪೇರಿ ಕಿತ್ತ ಜೊತೆಗೆ ಹಲ್ಲೆಗೆ ಮುಂದಾದ ಬಗ್ಗೆ ಸಾರ್ವಜನಿಕರು ಭಯಭೀತರಾಗಿದ್ದಾರೆ.
ಕರ್ನಾಟಕ ಬ್ಯಾಂಕ್ ಪಕ್ಕದ ಶ್ರೀನಿವಾಸ ಹೈಪರ್ ಮಾರ್ಕೆಟ್ ಮಳಿಗೆಯ ಬೀಗ ಮುರಿದ ಖದೀಮರು 50 ಸಾವಿರ ನಗದು ಸೇರಿದಂತೆ 10 ಕ್ಕು ಹೆಚ್ಚು ಅಕ್ಕಿ ಚೀಲಗಳು ಮತ್ತು ಸಿಸಿಟಿವಿ ಯ ಡಿವಿಆರ್ ಕದ್ದು ಪರಾರಿಯಾಗಿದ್ದಾರೆ.
ಬಸ್ ನಿಲ್ದಾಣದ ಕೂಗಳತೆ ದೂರದಲ್ಲಿರುವ ಜಿಎಂಆರ್ ಮೆಗಾ ಮಾರ್ಟ್ ಗೆ ಕನ್ನ ಹಾಕಲು ಮುಂದಾದ ನಾಲ್ಕೈದು ಜನರ ತಂಡ ಕಬ್ಬಿಣದ ಸಲಾಕೆಯಿಂದ ಅಂಗಡಿಯ ಬೀಗ ಮುರಿದು ಒಳ ನುಗ್ಗಿದ ಕಳ್ಳರ ಗುಂಪು ಹಿಂಬದಿಯ ಬಾಗಿಲು ಹೊಡೆಯುವಾಗ ಶಬ್ದವಾಗಿ ಪಕ್ಕದ ಮಳಿಗೆಯಲ್ಲಿ ವಾಸವಾಗಿದ್ದ ಮಾಲೀಕರ ಕುಟುಂಬ ಕಳ್ಳರನ್ನು ನೋಡಿ ಕೂಗಿಕೊಂಡಾಗ ಕಬ್ಬಿಣದ ರಾಡ್ ತೆಗೆದು ಹೊಡೆಯಲು ಹೋಗಿ ಅವರನ್ನು ಹೆದರಿಸಿ ಕಾಲ್ಕಿತ್ತ ಘಟನೆ ತಡರಾತ್ರಿ ನಡೆದಿದ್ದು ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ.