ಗುಬ್ಬಿ ಪೋಲಿಸ್ ಠಾಣೆಯಿಂದ ಡಕಾಯಿತಿ ಆರೋಪಿ ಪರಾರಿ
ತುಮಕೂರು ಜಿಲ್ಲೆ ಗುಬ್ಬಿ ಪೋಲಿಸ್ ಠಾಣೆಯಲ್ಲಿ ಪೋಲೀಸರ ವಶದಲ್ಲಿದ್ದ ಡಕಾಯಿತಿ ಕೇಸಿನ ಆರೋಪಿ ಗುರುವಾರ ತಡರಾತ್ರಿ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿರುವ ಘಟನೆ ನೆಡೆದಿದೆ.
ನ್ಯಾಯಾಲಯದ ಅನುಮತಿ ಮೇರೆಗೆ ಗದಗ ಮೂಲದ ಡಕಾಯತಿ ಕೇಸಿನ ಆರೋಪಿ ಸೈಯದ್ ಆಲಿ ಬಾಳಾ ಸಾಹೇಬ್ ನದಾಫ್ ಎನ್ನುವವರನ್ನು ತನಿಖೆಗಾಗಿ ಗುಬ್ಬಿ ಪೋಲಿಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ದೇವಿಕಾ ದೇವಿ ರವರು ಇಲಾಖೆಯ ವಶಕ್ಕೆ ಪಡೆದಿದ್ದರು ಎನ್ನಲಾಗಿದೆ.
ಕರೆತಂದ ಆರೋಪಿಯನ್ನು ಗುಬ್ಬಿ ಪೋಲಿಸ್ ಠಾಣೆಯ ಲಾಕಪ್ ನಲ್ಲಿ ತನಿಖೆಗಾಗಿ ಇಟ್ಟುಕೊಂಡಿದ್ದರು ಎನ್ನಲಾಗಿದ್ದು ಆದರೆ ಫೆಬ್ರವರಿ 1 ರ ತಡರಾತ್ರಿ ಲಾಕಪ್ ನಿಂದ ಇಬ್ಬರ ಪೈಕಿ ಒಬ್ಬ ಆರೋಪಿಯು ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ ಎನ್ನುವ ಮಾಹಿತಿ ಹೊರಬಿದ್ದಿದೆ ತಪ್ಪಿಸಿಕೊಂಡ ಆರೋಪಿ ಪತ್ತೆಗಾಗಿ ಪೋಲೀಸರು ಹರಸಾಹಸ ಪಡುತ್ತಿದ್ದಾರೆ.
ತಪ್ಪಿಸಿಕೊಂಡು ಓಡಿ ಹೋದ ಆರೋಪಿಯು ವೃತ್ತಿನಿರತ ಆರೋಪಿಯಾಗಿದ್ದು ಕಳ್ಳತನವನ್ನೇ(ಕಸಬು) ಈತ ನಿರಂತರವಾಗಿ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಮೂಲತಃ ಗದಗ ಜಿಲ್ಲೆಯ ಲಕ್ಷ್ಮೀಶ್ವರ ಹೋಬಳಿ ಹುಲ್ಲೂರು ಗ್ರಾಮದ ವಾಸಿಯಾದ ಸೈಯದ್ ಆಲಿ ಬಾಳಾ ಸಾಹೇಬ್ ನದಾಫ್ @ ಹರ್ಷವರ್ಧನ ೨೫ ವರ್ಷ ವಯಸ್ಸಿನ ಮುಸ್ಲಿಂ ಸಮುದಾಯದ ಡ್ಯಾನ್ಸ್ ಕೋರಿಯೋಗ್ರಾಫರ್ ಆಗಿದ್ದು ಕಳ್ಳತನ ಡಕಾಯಿತಿ ಹೀಗೆ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದ , ಗುಬ್ಬಿ ಪೋಲಿಸ್ ಠಾಣೆಯ ಮೊಕದ್ದಮೆ ಸಂಖ್ಯೆ ೧೩/೨೦೨೪ ಪ್ರಕರಣದಲ್ಲಿ ಬೇಕಾಗಿದ್ದ ಆರೋಪಿಯಾದ್ದರಿಂದ ನ್ಯಾಯಾಲಯದ ಅನುಮತಿ ಮೇರೆಗೆ ಗುಬ್ಬಿ ಪೋಲೀಸ್ ಠಾಣೆ ಪಿಎಸ್ಐ ದೇವಿಕಾದೇವಿರವರು ತಮ್ಮ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದರು ಎಂದು ತಿಳಿಯಲಾಗಿದೆ.