ತಿಪಟೂರು : ಚಲಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್‌ನಲ್ಲಿ ಮೂರ್ಛೇ ಬಿದ್ದ ರಕ್ತ ಸ್ರಾಮವಾದ ವ್ಯಕ್ತಿಯನ್ನು ವಾಪಸ್ಸು ಬಸ್ ತಿರುಗಿಸಿ ಆಸ್ವತ್ರೆಗೆ ದಾಖಾಲಿಸಿ ಚಿಕಿತ್ಸೆ ನೀಡಿ ಮಾನವೀಯತೆ ತೋರಿದ ಬಸ್‌ನ ಚಾಲಕ ಹಾಗೂ ನಿರ್ವಾಹಕರು.
ಶಿವಮೋಗ್ಗದಿಂದ ಬೆಂಗಳೂರಿಗೆ ತೆರಳುತ್ತಿದ್ದ ( ಕೆ.ಎ 17 ಎಫ್ 1647 ) ಭದ್ರಾವತಿ ಘಟಕದ ಬಸ್ ತಿಪಟೂರು ಬಸ್ ನಿಲ್ದಾಣದಲ್ಲಿ ಪ್ರಯಾಣೀಕರನ್ನು ತಿಪಟೂರು ಬಸ್ ನಿಲ್ದಾಣದಲ್ಲಿ ಹತ್ತಿಸಿಕೊಳ್ಳುವ ಸಂಧರ್ಭದಲ್ಲಿ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಈಶ್ವರ್‌ರೆಡ್ಡಿಯವರಿಗೆ ಬಸ್‌ನಲ್ಲಿ ಉಸಿರಾಟ ಮಾಡಲು ಆಗದೆ ಬಸ್‌ನಲ್ಲಿಯೇ ಕುಸಿದು, ಮೂರ್ಛೆ ಬಂದು ನಾಲಿಗೆಯಲ್ಲಿ ನೊರೆ ಹಾಗೂ ರಕ್ತ ಬರುತ್ತಿರುವುದನ್ನು ಗಮನಿಸಿದ ನಿರ್ವಾಹಕ ಓಂಕಾರ್ ತಕ್ಷಣ ಚಾಲಕ ಪ್ರಕಾಶ್‌ಗೆ ಮಾಹಿತಿ ತಿಳಿಸಿ ಬಸ್‌ನಲ್ಲಿಯೇ ತುರ್ತುವಾಹನದ ರೀತಿಯಲ್ಲಿ ತಿಪಟೂರಿನ ಸಾರ್ವಜನಿಕ ಆಸ್ವತ್ರೆಗೆ ಕರೆದು ತಂದು ತಕ್ಷಣ ಚಿಕಿತ್ಸೆ ನೀಡಿ ಮಾನವೀಯತೆ ಹಾಗೂ ಮನುಷ್ಯತ್ವವನ್ನು ಮೆರೆದಿದ್ದು ಒಬ್ಬ ವ್ಯಕ್ತಿಯನ್ನು ಪ್ರಾಣಾಪಾಯದಿಂದ ಪಾರು ಮಾಡಿದ ಘಟನೆಯು ತಿಪಟೂರು ನಗರದಲ್ಲಿ ನೆಡೆಯಿತು.
ಚಿಕಿತ್ಸೆಗೆ ಒಳಗಾದ ಪ್ರಯಾಣಿಕನ್ನು ಆಟೋದಲ್ಲಿ ಆಸ್ವತ್ರೆಗೆ ಹೋಗಿ ಎಂದು ಹೇಳಬಹುದಿತ್ತು ಆದರೆ ಪ್ರಯಾಣಿಕರಿಂದ ಇಂದು ನಮ್ಮಗಳ ಪುಟ್ಟ ಜೀವನವು ನಡೆಯುತ್ತಿದೆ ಹಾಗೂ ಕಷ್ಟದಲ್ಲಿರುವಾಗ ಸಹಾಯ ಮಾಡುವುದು ಸಹ ನಮ್ಮ ಕರ್ತವ್ಯವಾಗಿರಬೇಕು ಓಂಕಾರ್ ಹಾಗೂ ಪ್ರಕಾಶ್, ಚಾಲಕ ನಿರ್ವಾಹಕ.
ತುರ್ತು ಸಂಧರ್ಭದಲ್ಲಿ ನನ್ನನ್ನು ಬಸ್‌ನಲ್ಲಿಯೇ ಕರೆದು ತಂದು ಸಾರ್ವಜನಿಕ ಆಸ್ವತ್ರೆಗೆ ದಾಖಾಲು ಮಾಡಿ ಪ್ರಾಣಾಪಾಯದಿಂದ ನನ್ನನ್ನು ತಪ್ಪಿಸಿದ್ದಾರೆ, ಸಾರ್ವಜನಿಕ ಆಸ್ವತ್ರೆಯಲ್ಲಿ ಉತ್ತಮ ಚಿಕಿತ್ಸೆಯನ್ನು ನೀಡಿದ್ದಾರೆ. ಈಶ್ವರ್‌ರೆಡ್ಡಿ ಚಿಕಿತ್ಸೆಯ ಪ್ರಯಾಣೀಕ
ವರದಿ : ಪ್ರಶಾಂತ್‌ಕರೀಕೆರೆ