ಜಿಲ್ಲೆತುಮಕೂರುಸುದ್ದಿ

ಭೂಮಿ ಮತ್ತು ವಸತಿ ವಂಚಿತರ ಬೃಹತ್ ಪ್ರತಿಭಟನಾ ಮೆರವಣಿಗೆ : ಬಗರ್ ಹುಕಂ ಅರ್ಜಿ ವಿಲೇವಾರಿ ಮಾಡಲು ಜಿಲ್ಲಾಧಿಕಾರಿಗಳಿಗೆ ಮನವಿ

ತುಮಕೂರು – ತುಮಕೂರು ಜಿಲ್ಲೆಯ ವಿವಿಧ ತಾಲೂಕಿನಲ್ಲಿ  ಈಗಲೂ ನಮಗೆ  ಸೂರು ಕಟ್ಟಿಕೊಳ್ಳಲು ಜಾಗವಿಲ್ಲದೆ ಬೆಳೆದು ತಿನ್ನಲು ಭೂಮಿ ಇಲ್ಲದೆ ಪರಿತಪಿಸುತ್ತಿದ್ದು  ನಮ್ಮ ತಾತ ಮುತ್ತತಾಂದಿರು  ಅಂಗೈಯಗಲ ಭೂಮಿಗಾಗಿ ಸರ್ಕಾರಕ್ಕೆ ನಮೂನೆ 50,53 57 ಅರ್ಜಿ ಹಾಕಿ ಮನವಿ ಮಾಡಿದ್ದರು ಈವರೆಗೂ ನಮಗೆ  ಯಾವುದೇ ಸರ್ಕಾರಗಳು ಅಧಿಕಾರಿಗಳು ಮನೆ ಕಟ್ಟಿಕೊಳ್ಳಲು ನಿವೇಶನ ಬೆಳಕು ತಿನ್ನಲು ಭೂಮಿಯನ್ನ ನೀಡಿಲ್ಲವೆಂದು  ತುಮಕೂರು ಜಿಲ್ಲೆಯ ಭೂಮಿ ಮತ್ತು ವಸತಿ ವಂಚಿತರ ಹಕ್ಕು ಹೋರಾಟ ಸಮಿತಿ ಹಾಗೂ  ತುಮಕೂರು ಜಿಲ್ಲಾ ಬೀದಿಬದಿ ವ್ಯಾಪಾರಿಗಳ ವಸತಿ ಹಕ್ಕು ಸಂಘದ ವತಿಯಿಂದ  ತುಮಕೂರಿನಲ್ಲಿ ಟೌನ್ ಹಾಲ್  ವೃತ್ತದಿಂದ  ಜಿಲ್ಲಾಧಿಕಾರಿಗಳ ಕಚೇರಿ ವರೆಗೂ  ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ನಡೆಸಲಾಯಿತು.
 ಜಿಲ್ಲೆಯ ವಿವಿಧ ತಾಲೂಕಿನಿಂದ ಆಗಮಿಸಿದ್ದ ನೂರಾರು ಭೂಮಿ ಮತ್ತು ವಸತಿ ವಂಚಿತ ಫಲಾನುಭವಿಗಳು  ಪ್ರತಿಭಟನೆಯಲ್ಲಿ ಹೆಜ್ಜೆ ಹಾಕಿ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿದರು  ಜಿಲ್ಲಾಧಿಕಾರಿಗಳ ಕಚೇರಿ ಬೆಳಿಗೆ ಬಂದ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ  ಬೃಹತ್ ಪ್ರತಿಭಟನಾ ಧರಣಿ ನಡೆಸಿ  ಕೂಡಲೇ ನಮೂನೆ 50 53 57ಕ್ಕೆ  ವಸತಿ ಮತ್ತು ಭೂಮಿಗಾಗಿ ಅರ್ಜಿ ಸಲ್ಲಿಸಿರುವ ಫಲಾನುಭವಿಗಳಿಗೆ ವಿಲವರಿ ಮಾಡುವಂತೆ ಜಿಲ್ಲಾಧಿಕಾರಿ ಕೆ ಶ್ರೀನಿವಾಸ ಅವರಿಗೆ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ  ಭೂಮಿ ಮತ್ತು ವಸತಿ ವಂಚಿತ ಹೋರಾಟ ಹಕ್ಕು ಸಮಿತಿಯ  ರಾಜ್ಯಾಧ್ಯಕ್ಷ ಕುಮಾರ್ ಸಮತಳ ಅವರು ಮಾತನಾಡಿ  ನಮ್ಮ ನಾಡಿನ  ದೀನ ದಲಿತರು, ಶೋಷಿತರು ತಲತಲಾಂತರದಿಂದ ವಸತಿ ಭೂಮಿಗಾಗಿ ಅರ್ಜಿ ಸಲ್ಲಿಸಿ ಕಚೇರಿಗೆ ತಿರುಗಿ ಚಪ್ಪಲಿ  ಸವೆಸುತ್ತಿದ್ದಾರೆ  ಉಳ್ಳವರು ಭೂಮಿ ಮತ್ತು ವಸತಿ ವಂಚಿತರ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದ್ದು ಹಲವು ಸರ್ಕಾರಗಳು ಬಂದು ಆಡಳಿತ ನಡೆಸಿದರು ಇವರಿಗೂ ಸಮನಾದ ನ್ಯಾಯ ಸಿಕ್ಕಿಲ್ಲ ಹೀಗಾಗಿ ಸಮಾಜವಾದಿ ಹಿನ್ನೆಲೆಯಿಂದ ಬಂದ ಸಮಾಜದ ಬಗ್ಗೆ ಕಳಕಳಿ ಇರುವ  ಅಹಿಂದ ಅಸ್ಮಿತೆ ಎನಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು  ಭೂಮಿ ಮತ್ತು ವಸತಿ ಹೋರಾಟಗಾರರ ಮನವಿ ಆಲಿಸಿ ಶೀಘ್ರವಾಗಿ ಭೂಮಿ ಮತ್ತು ವಸತಿಯನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು.
 ಜಿಲ್ಲಾಧಿಕಾರಿಗಳ ಕಚೇರಿ ಬಳಿ ನಡೆಯುತ್ತಿದ್ದ ಪ್ರತಿಭಟನಾ ಧರಣಿ ನಿರತ ಸ್ಥಳಕ್ಕೆ ಆಗಮಿಸಿದ ಪ್ರಗತಿಪರ ಹೋರಾಟಗಾರ ಸಿ ಯತಿರಾಜ್ ಅವರು  ಮಾತನಾಡಿ ಭೂಮಿ ಇಂದು ಮಾರಾಟದ ವಸ್ತುವಾಗಿದ್ದು ಯಾರಿಗೂ ಕೂಡಾ ದಕ್ಕುತ್ತಿಲ್ಲ  ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರ್ ನಲ್ಲಿ  ಸತ್ತವರನ್ನ ಊಳಲು ಕೂಡ ಭೂಮಿ ಇಲ್ಲ ಈಗಲೂ ಆ ಭಾಗದ ಜನರು ಹೋರಾಟ ಮಾಡುತ್ತಲೆ ಇದ್ದಾರೆ  ಇಂದಿನ ಸರ್ಕಾರಗಳು ಮತ್ತು ಆಡಳಿತಗಳು ನಿರಂತರವಾಗಿ ಹೋರಾಟ ಮಾಡುತ್ತಿರುವ ಭೂಮಿ ಮತ್ತು ವಸತಿ ಹೋರಾಟಗಾರರಿಗೆ ಕೇವಲ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿವೆ ಬಂಡವಾಳಗಾರರು ಭೂಮಿಯನ್ನು ಲೂಟಿ ಹೊಡೆಯುತ್ತಿದ್ದರು ಯಾವುದೇ ಕ್ರಮ ಕೈಗೊಳ್ಳದೆ ಲಾಭಕ್ಕಾಗಿ ಇಣುಕುತ್ತಿವೆ ಎಂದು ಟೀಕಿಸಿದರು.
 ಭೂಮಿ ಮತ್ತು ವಸತಿ ಹೋರಾಟ ಹಕ್ಕು ಸಮಿತಿ ನೀಡಿರುವ ಅನೇಕ  ಪ್ರಕರಣಗಳಿಗೆ ಹೈಕೋರ್ಟ್ ನಲ್ಲಿ ವಕಲತ್ತು ವಹಿಸಿ  ಕಾನೂನು ಹೋರಾಟ ನಡೆಸುತ್ತಿರುವ ವಕೀಲರಾದ ಸುಧಾ ಅವರು ಮಾತನಾಡುತ್ತಾ ಕಾನೂನಿನಲ್ಲಿ ಎಲ್ಲರೂ ಕೂಡ ಸಮಾನರು ಸಮಾನತೆ ನಮಗೆಲ್ಲಾ ಕಬ್ಬಿಣದ ಕಡಲೆಯಾಗಿದ್ದು ಶ್ರೀಮಂತರು ಶ್ರೀಮಂತರಾಗುತ್ತಲೇ ಇದ್ದಾರೆ ಬಡವರು ಬಡವರಾಗಿಯೇ ಉಳಿದಿದ್ದಾರೆ ಸಂವಿಧಾನದಲ್ಲಿ ಕೇವಲ ಎಲ್ಲರಿಗೂ ಸಮಾನತೆ ಎಂಬ ಬೋಧನೆ ಇದೆಯಷ್ಟೇ  ಹಾಗಾಗಿ ನ್ಯಾಯ ಸಿಗುವವರೆಗು ಹೋರಾಟ ನಡೆಸೋಣ ಎಂದರು.
 ತುಮಕೂರು ಜಿಲ್ಲಾ ಭೂಮಿ ಮತ್ತು ವಸತಿ ಹೋರಾಟ ಹಕ್ಕು ಸಮಿತಿಯ ಜಿಲ್ಲಾಧ್ಯಕ್ಷ ಹಾಗೂ ಸಾಮಾಜಿಕ ಕಾರ್ಯಕರ್ತ ಅಂದ್ರಾಳು ನಾಗಭೂಷಣ್ ಅವರು ಮಾತನಾಡಿ ಭೂಮಿ ಮತ್ತು ವಸತಿ ವಂಚಿತರಿಂದ ಮತ ಪಡೆದ ಅಯೋಗ್ಯರಿಗೆ ಅವರ ಕಣ್ಮುಂದೆ ತಿರುಗುತ್ತಿದ್ದರೂ ಅವರಿಗೆ ಕಣ್ಣು ಕಾಣುತ್ತಿಲ್ಲ  ಭೂಮಿ ಮತ್ತು ವಸತಿ ವಂಚಿತರು ಅವರ ಬಂಗಲೆಗಳನ್ನು ಕೇಳುತ್ತಿಲ್ಲ ಅವರ ಆಸ್ತಿಗಳನ್ನ ಕೇಳುತ್ತಿಲ್ಲ ಸರ್ಕಾರದ ಅಡಿಯಲ್ಲಿ ಬರುವ ಯೋಜನೆಗಳ ಅಡಿ ಭೂಮಿ ಮತ್ತು ವಸತಿಯನ್ನು  ನಿಯಮಾನುಸಾರ ಕೇಳುತ್ತಿದ್ದೇವೆ ಇದನ್ನ ನೀಡಲು ಅಯೋಗ್ಯರಿಗೆ ಯೋಗ್ಯತೆ ಇಲ್ಲ ಎಂದು ಕಿಡಿಕಾರಿದರು.
ಪ್ರತಿಭಟನಾ ಧರಣಿ ಸಮಯದಲ್ಲಿ ಹೈಕೋರ್ಟ್ ವಕೀಲರಾದ ಉಮಾಪತಿ, ಹಿರಿಯ ವಕೀಲ ಹಾಗೂ ಹೋರಾಟಗಾರ ನರಸಿಂಹಮೂರ್ತಿ, ಭೂಮಿ ಮತ್ತು ವಸತಿ ಹೋರಾಟ ಸಮಿತಿ ರಾಜ್ಯದ್ಯಕ್ಷ ಕುಮಾರ ಸಮತಳ, ಬೆಂಗಳೂರು ಮರಿಯಪ್ಪ, ವಕೀಲರಾದ ಮಾರನಹಳ್ಳಿ ಗಣೇಶ್, ಶಿವಕುಮಾರ್ ಮೇಷ್ಟ್ರು ಮನೆ,  ಪದ್ಮನಾಭ ಮೋಹನ್ ಶಿವಕುಮಾರ್ ಶೇಖರ್ ಚಿನ್ಮಯ್ ಜೆಸಿಬಿ ವೆಂಕಟೇಶ್ ಮಳೆಕಲ್ಲಹಳ್ಳಿ ಯೋಗೇಶ್, ನೇಗಲಾಲ ಸಿದ್ದೇಶ್,  ಬೀದಿಬದಿ ವ್ಯಾಪಾರಿ ಸಂಘಟನೆಯ ಭದ್ರೆಗೌಡ, ಮಂಜುನಾಥ ಸೇರಿದಂತೆ  ಜಿಲ್ಲೆಯ ವಿವಿಧ ತಾಲೂಕಿನ ವಸತಿ ಮತ್ತು ಭೂಮಿ ವಂಚಿತ ಹೋರಾಟಗಾರರು ಫಲಾನುಭವಿಗಳು ಹಾಗೂ ಇತರರು ಉಪಸ್ಥಿತರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker