ಬಿಜೆಪಿ ಹಣ ಹಂಚಿಕೆಗೆ ಪೊಲೀಸರ ನೆರವು : ಸೊಗಡು ಶಿವಣ್ಣ ಆರೋಪ
ತುಮಕೂರು : ಚುನಾವಣೆಯಲ್ಲಿ ಹಣ ಹಂಚಿ ವಾಮಮಾರ್ಗದಲ್ಲಿ ಗೆಲ್ಲಲ್ಲು ಬಿಜೆಪಿ ಅಭ್ಯರ್ಥಿ ಯತ್ನಿಸುತ್ತಿದ್ದಾರೆ ಎಂದು ಸೊಗಡು ಶಿವಣ್ಣ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಡರಾತ್ರಿ ಖಾಸಗಿ ಹೋಟೇಲ್‌ಗೆ ಕಾರಿನಲ್ಲಿ ಹಣವನ್ನು ತಂದ ಬಗ್ಗೆ ಮಾಹಿತಿಯನ್ನು ಪೊಲೀಸರಿಗೆ ನೀಡಿದವರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿ,ಬಂಧಿಸಿದ್ದಾರೆ ಎಂದು ದೂರಿದರು.
ಸ್ಮಾರ್ಟ್ಸಿಟಿಯಿಂದ ಕೊಳ್ಳೆ ಹೊಡೆದಿರುವ ಹಣವನ್ನು ಹಂಚಲು ಖಾಸಗಿ ಹೋಟೇಲ್ ನಲ್ಲಿ ಬೇನಾಮಿಯಾಗಿ ರೂಂ ಮಾಡಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ರವಿಹೆಬ್ಬಾಕ, ಸಂಸದ ಜಿ.ಎಸ್.ಬಸವರಾಜು ಆಪ್ತ ಕುಂದರನಹಳ್ಳಿ ರಮೇಶ್ ರೂಂನಲ್ಲಿದ್ದರು.ಹಣ ಹಂಚಿಕೆ ಮಾಹಿತಿ ದೊರೆತ ನನ್ನ ಅಭಿಮಾನಿಗಳು ಹಾಗೂ ಜೆಡಿಎಸ್ ಕಾರ್ಯಕರ್ತರು ಮಾಹಿತಿ ನೀಡಿದ್ದರು ಪೊಲೀಸರು ಕುಂದರನಹಳ್ಳಿ ರಮೇಶ್ ಅವರನ್ನು ಪೊಲೀಸರು ಕರೆದುಕೊಂಡು ಹೋಗಿದ್ದಾರೆ,ಅವರನ್ನು ಸಂಸದ ಜಿ.ಎಸ್.ಬಸವರಾಜು ಠಾಣೆಯಿಂದ ಕರೆದುಕೊಂಡು ಬಂದಿದ್ದಾರೆ ಎಂದು ದೂರಿದರು.
ಪಕ್ಕದ ರೂಮಿನಲ್ಲಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ರವಿ ಹೆಬ್ಬಾಕ ಪರಾರಿಯಾಗಿದ್ದ, ಹಣದ ವಹಿವಾಟು ತಡೆಯಲು ಹೋದ ಮುಸ್ಲಿಂ ಹಾಗೂ ಹಿಂದೂ ಹುಡುಗರ ಮೇಲೆ ದರೋಡೆ ಪ್ರಕರಣ ದಾಖಲಿಸಿ, ಚುನಾವಣಾ ವ್ಯವಸ್ಥೆಯನ್ನು ಹಾಳುಗೆಡವಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಪ್ಪ-ಮಕ್ಕಳು ನಗರದಲ್ಲಿ ಲೂಟಿ ಹೊಡೆದಿರುವ ಹಣವನ್ನು ಹಂಚಿ ಚುನಾವಣೆಯಲ್ಲಿ ಗೆಲ್ಲುವ ಕನಸು ಕಾಣುತ್ತಿದ್ದಾರೆ, ನಗರದಲ್ಲಿ ಮನೆಗಳಿದ್ದರೂ ಕುಂದರನಹಳ್ಳಿ ರಮೇಶ್,ರವಿಹೆಬ್ಬಾಕ ಹೊಟೇಲ್ ರೂಂನಲ್ಲಿ ಏಕಿದ್ದರು? ಉಪಮೇಯರ್, ನಗರಸಭೆ ಮಾಜಿ ಸದಸ್ಯನನ್ನು ಪೊಲೀಸ್ ಠಾಣೆಗೆ ಬಿಟ್ಟುಕೊಳ್ಳದೇ ಠಾಣೆ ಒಳಗೆ ಸಂಸದರು ಸಭೆ ನಡೆಸುವ ಅಗತ್ಯವೇನಿತ್ತು ಎಂದು ಸೊಗಡು ಶಿವಣ್ಣ ಪ್ರಶ್ನಿಸಿದರು.
ಅಪ್ಪ ಮಕ್ಕಳು ಚುನಾವಣಾ ಆಯೋಗ, ಪೊಲೀಸ್ ವ್ಯವಸ್ಥೆಯನ್ನು ಹೈಜಾಕ್ ಮಾಡಿದ್ದಾರೆ, ಚುನಾವಣಾ ಆಯೋಗದ ನೀತಿ ಸಂಹಿತೆ ಉಲ್ಲಂಘಿಸಿರುವ ಕುಂದರಹನಹಳ್ಳಿ ರಮೇಶ್ ಹಾಗೂ ರವಿ ಹೆಬ್ಬಾಕ ಮೇಲೆ ಪ್ರಕರಣ ದಾಖಲಿಸಿ ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.
ಹಣದ ವಹಿವಾಟಿನ ಬಗ್ಗೆ ರಾತ್ರಿ 1.30ಕ್ಕೆ ಪೊಲೀಸರಿಗೆ ಮಾಹಿತಿ ನೀಡಿದ್ದು ರಾತ್ರಿ 3.30ಕ್ಕೆ ಪ್ರಕರಣ ದಾಖಲಿಸಲಾಗಿದೆ, ಪೊಲೀಸ್ ವರಿಷ್ಠಾಧಿಕಾರಿ,ಡಿವೈಎಸ್ಪಿ ಠಾಣೆಗೆ ಬಂದಿದ್ದಾರೆ,ಪ್ರಕರಣವನ್ನು ಪೊಲೀಸರು ದಿಕ್ಕು ತಪ್ಪಿಸಿದ್ದು,ವಕೀಲರಾದ ಎಂ.ಎಂ.ಮಲ್ಲಿಕಾರ್ಜುನಯ್ಯ ಅವರು ಬರೆದುಕೊಟ್ಟಂತೆ ಪ್ರಕರಣ ದಾಖಲಿಸಲಾಗಿದೆ ಎಂದರು.
ಪೊಲೀಸರು ದಾಖಲಿಸಿರುವ ಪ್ರಕರಣದಲ್ಲಿ ಸಾಧಿಕ್, ನಾಸೀರ್, ರಕ್ಷಿತ್ ಸೇರಿದಂತೆ ನಾಲ್ಕೈದು ಜನರ ಮಾಹಿತಿ ನೀಡಿದ್ದು, ರವಿ ಹೆಬ್ಬಾಕ ಅವರೊಂದಿಗೆ ಇದ್ದವರ ಹೆಸರನ್ನು ಎಫ್ ಐ ಆರ್ ನಲ್ಲಿ ಉಲ್ಲೇಖಿಸಿಲ್ಲ,ಪೊಲೀಸರು ಪಕ್ಷಪಾತವಾಗಿ ಕಾರ್ಯನಿರ್ವ ಹಿಸುತ್ತಿದ್ದು, ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.