ಜಿಲ್ಲೆತುಮಕೂರುಮಧುಗಿರಿರಾಜಕೀಯ

ತುಮಕೂರು ಜಿಲ್ಲೆಯ 11 ಕ್ಷೇತ್ರಗಳಲ್ಲೂ ಜೆಡಿಎಸ್ ಅಭ್ಯರ್ಥಿಗಳ ಗೆಲುವು : ಹೆಚ್.ಡಿ. ಕುಮಾರಸ್ವಾಮಿ

ಕೈಕೊಟ್ಟು... ತೆನೆ ಹೊತ್ತ ಕೊಂಡವಾಡಿ ಚಂದ್ರಶೇಖರ್

ಮಧುಗಿರಿ : ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ತುಮಕೂರು ಜಿಲ್ಲೆಯ 11 ಕ್ಷೇತ್ರಗಳಲ್ಲೂ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಭರವಸೆ ವ್ಯಕ್ತಪಡಿಸಿದರು.

ತಾಲೂಕಿನ ದೊಡ್ಡರಿ ಹೋಬಳಿಯ ಡಿ. ಕೈಮರ ಗ್ರಾಮದ ಶಾಸಕ ಎಂ.ವಿ.ವೀರಭದ್ರಯ್ಯನವರ ಸ್ವಗೃಹದ ಸಮೀಪ ಹಮ್ಮಿಕೊಂಡಿದ್ದ ಜೆಡಿಎಸ್ ಕಾರ್ಯಕರ್ತರ ಸಮಾವೇಶ ಮತ್ತು ವಿವಿಧ ಪಕ್ಷಗಳ ಮುಖಂಡರನ್ನು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿದ ಅವರು ಈ ಬಾರಿ ನನಗೆ ಸ್ಪಷ್ಟ ಬಹುಮತ ನೀಡಿ ಸರ್ಕಾರ ನೀಡುವ ತೀರ್ಮಾನ ಜನತೆ ಕೈಗೊಂಡಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪಕ್ಷಗಳನ್ನು ತಿರಸ್ಕರಿಸಿ ನನಗೆ 5 ವರ್ಷದ ಅಧಿಕಾರ ನನಗೆ ನೀಡಿ ರೈತನ ಮಗ ಯಾವ ರೀತಿ ಅಧಿಕಾರ ನಡೆಸುತ್ತಾನೆ ಎಂಬುದನ್ನು ನೋಡಿ, ರೈತರ, ಮಹಿಳೆಯರ, ಯುವಜನರ ಬದುಕು ಹಸನು ಮಾಡುತ್ತೇನೆ. ವರ್ಷಕ್ಕೆ 5 ಸಿಲಿಂಡರ್ ಉಚಿತವಾಗಿ ನೀಡುತ್ತೇನೆ. ಡಿಗ್ರಿ ಓದುವ ಹೆಣ್ಣು ಮಕ್ಕಳಿಗೆ ಮತ್ತು ಹುಡುಗರಿಗೂ ದ್ವಿಚಕ್ರ ವಾಹನ ಉಚಿತವಾಗಿ ನೀಡುತ್ತೇನೆ. ರಾಜ್ಯದ ಅಭ್ಯುದಯಕ್ಕಾಗಿ ಪಂಚರತ್ನ ಯಾತ್ರೆಯನ್ನು ಹಮ್ಮಿಕೊಂಡಿದ್ದು, ನನಗೆ ಎರಡು ಬಾರಿ ಹೃದಯದ ಶಸ್ತ್ರ ಚಿಕಿತ್ಸೆಯಾಗಿದೆ. ಆದರೂ ಜನತೆಗಾಗಿ, ಬಡವರ ಏಳಿಗೆಗಾಗಿ ಪಂಚರತ್ನ ಯೋಜನೆಯನ್ನು ಜಾರಿಗೆ ತರುವ ಉದ್ದೇಶದಿಂದ ನಿರಂತರ ಶ್ರಮ ವಹಿಸಿ ಕೆಲಸ ಮಾಡುತ್ತಿದ್ದೇನೆ.

ಕಾಂಗ್ರೆಸ್ ನವರು ಕೊಡಬಾರದ ಕಷ್ಟ ಕೊಟ್ಟರು : 14 ತಿಂಗಳಲ್ಲಿ ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ನವರು ಕೊಡಬಾರದ ಕಷ್ಟ ಕೊಟ್ಟರು. ಆದರೂ 25 ಸಾವಿರ ಕೋಟಿ ಹಣ ಹೊಂದಿಸಿ 26 ಲಕ್ಷ ರೈತರ ಸಾಲ ಮನ್ನಾ ಮಾಡುವ ಮೂಲಕ ರೈತರನ್ನು ಋಣಮುಕ್ತರನ್ನಾಗಿಸಿದ್ದೇನೆ ಎಂದರು.‌

ಶಾಸಕ ಎಂ.ವಿ.ವೀರಭದ್ರಯ್ಯ ಮಾತನಾಡಿ ಇದೊಂದು ಐತಿಹಾಸಿಕ ದಿನ ವಾಗಿದ್ದು, ಕಾಂಗ್ರೆಸ್, ಬಿಜೆಪಿ ತೊರೆದು ನೂರಾರು ಜನ ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ನಮ್ಮದು ಪ್ರಾದೇಶಿಕ ಪಕ್ಷವಾದರೂ ದೇಶಕ್ಕೆ ಪ್ರದಾನಿ ನೀಡಿದ ಪಕ್ಷ. ಕುಮಾರಸ್ವಾಮಿಯವರು ಸಿಎಂ ಆಗಿದ್ದ ಸಂದರ್ಭದಲ್ಲಿ ಹಲವಾರು ಜನೋಪಯೋಗಿ ಕೆಲಸ ಮಾಡಿದ್ದಾರೆ. ಈ ಬಾರಿಯೂ ಪಂಚರತ್ನ ಯಾತ್ರೆಯ ಮೂಲಕ ಗ್ರಾಮೀಣ ಬಾಗದ ಬದುಕು ಹಸನುಗೊಳಿಸಲು ಪ್ರಯತ್ನ ನಡೆಸಿದ್ದು, ಆರೋಗ್ಯ, ಶಿಕ್ಷಣ, ಉದ್ಯೋಗ, ಕೃಷಿ, ವಸತಿ ಯೋಜನೆ ಜಾರಿಗೊಳಿಸುವುದೇ. ಪಂಚರತ್ನ ಯಾತ್ರೆಯ ದ್ಯೇಯ ಎಂದರು.‌

ಮಧುಗಿರಿಯು ಜೆಡಿಎಸ್ ಭದ್ರಕೋಟೆಯಾಗಿದ್ದು, ಈ ಹಿಂದೆ ಕ್ಷೇತ್ರದ ಜನತೆ ಅನಿತಾ ಕುಮಾರಸ್ವಾಮಿಯವರನ್ನು ಗೆಲ್ಲಿಸಿದ್ದು, ಮಧುಗಿರಿ ಋಣ ತೀರಿಸುತ್ತೇನೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ. ಅವರು ಈ ಬಾರಿ ಸಿಎಂ ಆಗುವುದು ಖಚಿತ. ಅವರು ಸಿಎಂ ಆದರೆ ಸ್ತ್ರೀ ಶಕ್ತಿ ಸಂಘಗಳ ಸಾಲ ಒಂದೇ ಬಾರಿಗೆ ಮನ್ನಾ ಆಗಲಿದ್ದು,
ಮಧುಗಿರಿ ಜಿಲ್ಲಾ ಕೇಂದ್ರವಾಗಲಿದ್ದು, ಏಕಶಿಲಾ ಬೆಟ್ಟಕ್ಕೆ ಬೆಟ್ಟಕ್ಕೆ ರೋಪ್ ವೇ, ಕೈಗಾರಿಕಾ ವಲಯ ಮಂಜೂರಾಗಲಿದೆ. ಕುಮಾರಸ್ವಾಮಿಯವರ ಸಹಕಾರದೊಂದಿಗೆ ಮಧುಗಿರಿಯನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ ಎಂದು ಭರವಸೆ ನೀಡಿದರು

ತೆನೆ ಹೊತ್ತ ಕೊಂಡವಾಡಿ : ರಾಜಕೀಯ ಗುರುವಿಗೆ ತಿರುಗು ಬಾಣ ನೀಡಿ ತೆನೆ ಹೊತ್ತ ಕೊಂಡವಾಡಿ ಚಂದ್ರಶೇಖರ್ ಮಾತನಾಡಿ ನಾನು ಮಧುಗಿರಿ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಆದರೆ ಹೈಕಮಾಂಡ್ ಸೌಜನ್ಯಕ್ಜಾದರೂ ನನ್ನನ್ನು ಕರೆದು ಮಾತನಾಡಿಸಲಿಲ್ಲ. ಇದರಿಂದ ಮನನೊಂದು ನನ್ನ ಬೆಂಬಲಿಗರೊಂದಿಗೆ ಜೆಡಿಎಸ್ ಗೆ ಸೇರ್ಪಡೆಯಾಗಿದ್ದೇನೆ. ಚುನಾವಣೆಗೆ 30 ದಿನ ಮಾತ್ರ ಬಾಕಿಯಿದ್ದು, ಹಳೆಯ ಕಾರ್ಯಕರ್ತರು ಹೊಸಬರಿಗೆ ಸಹಕಾರ ನೀಡಿಒಟ್ಟಾಗಿ ಹೋದಾಗ ಮಾತ್ರ ವೀರಭದ್ರಯ್ಯನವರ ಗೆಲುವು ಸಾದ್ಯ.
ಇಲ್ಲಿಗೆ ಬಂದಿರುವವರೆಲ್ಲ ಮತ ಹಾಕಿಸುವ ಶಕ್ತಿ ಇರುವವರರಾಗಿದ್ದು, ಮುಂದೆ ಕುಮಾರಸ್ವಾಮಿ ರಾಜ್ಯದ ಸಿಎಂ ಆಗಲಿದ್ದು, ಮಧುಗಿರಿ ಜಿಲ್ಲೆಯಾಗಬೇಕೆಂದರೆ ವೀರಭದ್ರಯ್ಯನವರನ್ನು ಗೆಲ್ಲಿಸಿ ಕಳುಹಿಸುವ ಮೂಲಕ ಮುಂಬರುವ ಚುನಾವಣೆಯಲ್ಲಿ ಎದುರಾಳಿಗಳಿಗೆ ತಕ್ಕ ಉತ್ತರ ನೀಡುವಂತಾಗಬೇಕು ಈಗಾಗಲೇ ಎದುರಾಳಿಗಳಿಗೆ ಭಯ ಉಂಟಾಗಿದ್ದು, ಮಧುಗಿರಿ ಸಾಮಾನ್ಯ ಕ್ಷೇತ್ರ, ಇದರ ಶಕ್ತಿ ಅವರಿಗೆ ತೋರಿಸಬೇಕು ಎಂದರು.

ಇದೇ ವೇಳೆ ಕಾಂಗ್ರೆಸ್ ಪಕ್ಷದ ಮುಖಂಡರಾದ ತಾ.ಪಂ ಮಾಜಿ ಉಪಾಧ್ಯಕ್ಷ ಲಕ್ಷ್ಮಿ ನರಸಪ್ಪ ,ತಾ.ಪಂ ಮಾಜಿ ಸದಸ್ಯ ದೊಡ್ಡಯ್ಯ, ಪಿ ಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಮೂಡ್ಲಪ್ಪ ,ಆನಂದ್ ಜಿ.ಪಂ.ಮಾಜಿ ಸದಸ್ಯ ಎಸ್ ಡಿ ಕೃಷ್ಣಪ್ಪ, ಯುವ ಕಾಂಗ್ರೆಸ್ ಅಧ್ಯಕ್ಷ ಎಸ್ ಡಿ ವೆಂಕಟೇಶ್ ,ಕಾಂತರಾಜು ಸುಮುಖ್ ಕೊಂಡವಾಡಿ ಕಾಂಗ್ರೆಸ್ ಪಕ್ಷ ತೊರೆದು ಮಾಜಿ ಸಿಎಂ ಸಮ್ಮುಖದಲ್ಲಿ ಜೆಡಿಎಸ್’ಗೆ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಕೊರಟಗೆರೆ ಮಾಜಿ ಶಾಸಕ ಸುಧಾಕರ್ ಲಾಲ್, ಪುರಸಭಾ ಅಧ್ಯಕ್ಷ ತಿಮ್ಮರಾಯಪ್ಪ, ಸದಸ್ಯರುಗಳಾದ ಎಂ ಆರ್ ಜಗನ್ನಾಥ್, ಚಂದ್ರಶೇಖರ್ ಬಾಬು, ನಾರಾಯಣ, ತಾಲೂಕು ಜೆಡಿಎಸ್ ಅಧ್ಯಕ್ಷ ಬಸವರಾಜು, ಮುಖಂಡರುಗಳಾದ ವೆಂಕಟಾಪುರ ಗೋವಿಂದರಾಜು, ಬಿಎಸ್ ಶ್ರೀನಿವಾಸ. ಕಂಬತ್ತನಹಳ್ಳಿ ರಘು, ಸಿಡದರಗಲ್ಲು ಶ್ರೀನಿವಾಸ್. ಗ್ರಾ.ಪಂ.ಸದಸ್ಯ ವಿಜಯ ಪ್ರಕಾಶ್ ಇನ್ನಿತರರು ಉಪಸ್ಥಿತರಿದ್ದರು

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker