ತಿಪಟೂರು: ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಮತದಾರರಿಗೆ ನೀಡಲು ತೆಗೆದುಕೊಂಡು ಹೋಗುತ್ತಿದ್ದ ಉತ್ತಮ ಬೆಲೆಬಾಳುವ ವಿವಿಧ ಮಾದರಿಯ ಬಟ್ಟೆಗಳನ್ನು ಚುನಾವಣಾ ಸಂಚಾರಿ ಜಾಗೃತ ದಳದ 5ನೇ ತಂಡದ ಮುಖ್ಯಸ್ಥ ಲೋಕೋಪಯೋಗಿ ಇಲಾಖೆಯ ಉಪವಿಭಾಗದ ಎಇಇ ಎಚ್.ಎನ್. ಹೊನ್ನೇಶಪ್ಪ ವಶ ಪಡಿಸಿಕೊಂಡಿದ್ದಾರೆ.
ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿಯ ರಜತಾದ್ರಿಪುರದ ಟೋಲ್ ಬಳಿ ಶನಿವಾರ ಬೆಳಗಿನ ಜಾವದಲ್ಲಿ ಅನುಮಾನ ಬಂದು ಕೆ.ಎ.04 ಎಮ್.ಜಿ 2337 ಓಮಿನಿ ವಾಹನವನ್ನು ತಪಾಸಣೆ ನೆಡೆಸಿದಾಗ ಮೂರು ಲಕ್ಷದ ಬೆಲೆ ಬಾಳುವ ವಿವಿಧ ಮಾದರಿಯ 191 ತುಣುಕಗಳನ್ನು ವಶಪಡಿಸಿಕೊಂಡಿದ್ದಾರೆ.
ಚಾಲಕ ಅನ್ವರ್ ಭಾಷಾ, ಲೋಕೇಶ ಕುಮಾರ್, ಫಯಾಜ್ ದಾದಾಫೀರ್ ರನ್ನು ವಾಹನ ಸಮೇತ ವಶಕ್ಕೆ ಪಡಿದುಕೊಂಡು ಕಿಬ್ಬನಹಳ್ಳಿ ಪೋಲೀಸ್ ಠಾಣೆಗೆ ಹಾಜರು ಪಡಿಸಿದ್ದಾರೆ. ಆರೋಪಿಗಳ ವಿರುದ್ದ ಕಲಂ 98 ಕೆ.ಪಿ ಆಕ್ಟ್ ರೀತ್ಯಾ ಪ್ರಕರಣವನ್ನು ದಾಖಾಲಿಸಲಾಗಿದೆ.