ತುಮಕೂರು ಮೇಯರ್ ಕಫ್-2023ಗೆ ಚಾಲನೆ : ಕ್ರೀಡೆಯನ್ನು ಹಬ್ಬದ ರೀತಿ ಆಚರಿಸೋಣ : ಮೇಯರ್ ಪ್ರಭಾವತಿ ಸುಧೀಶ್ವರ್
ಹೊನಲು ಬೆಳಕಿನ ಪಂದ್ಯಾವಳಿಗೆ ಶಾಸಕರು,ಜನಪ್ರತಿನಿಧಿಗಳ ಶುಭ ಹಾರೈಕೆ
ತುಮಕೂರು : ನಗರದ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಮೂರನೇಯ ತುಮಕೂರು ಮೇಯರ್ ಕಫ್-2023ಗೆ ಶಾಸಕ ಜಿ.ಬಿ.ಜೋತಿಗಣೇಶ್ ಜೋತಿ ಬೆಳಗಿಸಿ, ವಾಲಿಬಾಲ್ ಸರ್ವ್ ಮಾಡುವ ಮೂಲಕ ಚಾಲನೆ ನೀಡಿದರು
ಪಾಲಿಕೆಯಲ್ಲಿ 2019-20ನೇ ಸಾಲಿನಲ್ಲಿ ಮೇಯರ್ ಆಗಿದ್ದ ಶ್ರೀಮತಿ ಫರೀಧಾಬೇಗಂ ಮೊದಲ ಬಾರಿಗೆ ಪಾಲಿಕೆಯ ಸಿಬ್ಬಂದಿ ಮತ್ತು ಸಾರ್ವಜನಿಕರನ್ನು ಒಳಗೊಂಡ ಮೇಯರ್ ಕಫ್ ಎಂಬ ಕ್ರೀಡಾಕೂಟಕ್ಕೆ ಚಾಲನೆ ನೀಡಿದ್ದರು. ಆ ನಂತರ ಬಿ.ಜಿ.ಕೃಷ್ಣಪ್ಪ ಅವರು ಮೇಯರ್ ಆಗಿದ್ದ ಕಾಲದಲ್ಲಿ ಸಹ ಮೇಯರ್ ಕಫ್ ಕ್ರೀಡಾಕೂಟಗಳು ನಡೆದಿದ್ದು, ಪ್ರಸ್ತುತ ಸಾಲಿನಲ್ಲಿ ಕ್ರೀಡೆಗೆ ಮತ್ತಷ್ಟು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಸ್ಮಾರ್ಟ್ ಸಿಟಿ ಅನುದಾನದ ಸುಮಾರು 3.25 ಕೋಟಿ ರೂಗಳಲ್ಲಿ ನಿರ್ಮಾಣ ಗೊಂಡಿರುವ ಕ್ರೀಡಾಸಂಕೀರ್ಣದಲ್ಲಿ ಈ ಸಾಲಿನ ಅಂದರೆ 2022-23ನೇ ಸಾಲಿನ ಮೇಯರ್ ಕಫ್ ಕ್ರೀಡಾಕೂಟ ಆರಂಭಗೊಂಡಿದ್ದು,ಈ ಭಾರಿ ವಿಶೇಷವಾಗಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಕಬ್ಬಡಿ, ಖೊ-ಖೋ,ಪುಟ್‌ಬಾಲ್,ವಾಲಿಬಾಲ್ ಮತ್ತು ಕುಸ್ತಿ ಪಂದ್ಯಗಳಲ್ಲಿ ಅಹ್ವಾನಿತ ಕ್ರೀಡಾಕ್ಲಬ್‌ಗಳ ಕ್ರೀಡಾಪಟುಗಳಿಗಾಗಿ ಆಯೋಜಿಸಿದ್ದು,ಮೊದಲ ಬಹುಮಾನವಾಗಿ 25 ಸಾವಿರ ರೂ, ಎರಡನೇ ಬಹುಮಾನವಾಗಿ 15 ಸಾವಿರ ರೂಗಳನ್ನು ನೀಡಲಾಗುತ್ತಿದೆ.
ಮೇಯರ್ ಕಫ್-2023ಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಜಿ.ಬಿ.ಜೋತಿಗಣೇಶ್,ಪಾಲಿಕೆ ಎಂದರೆ ಇದುವರೆಗೂ ಬೀದಿ ದೀಪ ನಿರ್ವಹಣೆ, ಸ್ವಚ್ಚತೆ ಕಾಪಾಡುವುದು ಎಂಬ ಮಾತಿದೆ.ಆದರೆ ಕ್ರೀಡೆಗೂ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಳೆದ ಮೂರು ವರ್ಷಗಳಿಂದ ಕ್ರೀಡಾಕೂಟ ನಡೆಸಲಾಗುತ್ತಿದೆ.ವರ್ಷದಿಂದ ವರ್ಷಕ್ಕೆ ಹೆಚ್ಚ ಹೆಚ್ಚು ಸಾರ್ವಜನಿಕರು ಪಾಲ್ಗೊಳ್ಳುತ್ತಿರುವುದು ಸಂತೋಷದ ವಿಚಾರವಾಗಿದೆ.ಕ್ರೀಡೆಗಳು ಮನರಂಜನೆಯ ಜೊತೆಗೆ,ದೈಹಿಕ ಮತ್ತು ಮಾನಸಿಕ ಸದೃಢತೆಯನ್ನು ತಂದುಕೊಡಲು ಸಹಕಾರಿಯಾಗುವುದರಿಂದ ಕ್ರೀಡಾಪಟುಗಳಿಗಾಗಿ ಶಾಶ್ವಾತ ಕ್ರೀಡಾಸಂಕೀರ್ಣವನ್ನು ನಿರ್ಮಿಸಲಾಗಿದೆ.ಇಲ್ಲಿ ಆಟವಾಡುವ ಕ್ರೀಡಾಪುಟಗಳು ದೇಶದಲ್ಲಿ ಹೆಸರು ಮಾಡಲಿ ಎಂದು ಶುಭ ಹಾರೈಸಿದರು.
ಉಪಮೇಯರ್ ಟಿ.ಕೆ.ನರಸಿಂಹಮೂರ್ತಿ ಮಾತನಾಡಿ,ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಕ್ರೀಡೆ ಅತಿ ಅವಶ್ಯಕ. ಓದು ಮನುಷ್ಯನನ್ನು ಬೌದ್ದಿಕವಾಗಿ ಬೆಳೆಸಿದರೆ, ಕ್ರೀಡೆ ಬೌತಿಕವಾಗಿ ಬೆಳೆಯಲು ಸಹಕಾರಿಯಾಗಿದೆ.ಈ ದೃಷ್ಟಿಯಿಂದಲೇ ಪಾಲಿಕೆಯ ಅನುದಾನದಲ್ಲಿ ಸುಮಾರು 21 ಲಕ್ಷ ರೂಗಳನ್ನು ಖರ್ಚು ಮಾಡಿ, ಹೊನಲು ಬೆಳೆಕಿನ ಈ ಪಂದ್ಯಾವಳಿಗಳನ್ನು ಆಯೋಜಿಸಲಾಗಿದೆ.ಅಲ್ಲದೆ ಶೇ1ರ ಅನುದಾನದಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಕ್ರೀಡಾಪುಟಗಳಿಗೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ.ಈ ಸಾಲಿನಲ್ಲಿ ಪರಿಶಿಷ್ಟ ಜಾತಿಗೆ 29.80ಲಕ್ಷ ರೂ ಮತ್ತು ಪರಿಶಿಷ್ಟ ಪಂಗಡಕ್ಕೆ 9.50 ಲಕ್ಷರೂಗಳನ್ನು ಪ್ರೋತ್ಸಾಹ ಧನವಾಗಿ ನೀಡಲಾಗಿದೆ. ಕ್ರೀಡಾಪಟುಗಳು ಇದರ ಲಾಭ ಪಡೆದುಕೊಳ್ಳುವಂತೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೇಯರ್ ಶ್ರೀಮತಿ ಪ್ರಭಾವತಿ ಸುಧೀಶ್ವರ್ ಮಾತನಾಡಿ,ಶ್ರೀಮತಿ ಫರೀಧಾ ಬೇಗಂ ಅವರ ಕಾಲದಲ್ಲಿ ಆರಂಭಗೊಂಡ ಮೇಯರ್ ಕಫ್ ನನ್ನ ಅವಧಿಯಲ್ಲಿಯೂ ಮುಂದುವರೆದಿದೆ.ಸುಮಾರು 3.50 ಲಕ್ಷ ಜನಸಂಖ್ಯೆ ಇರುವ ನಗರದ ಜನತೆಗೆ ಒಂದು ಕ್ರೀಡೆಯನ್ನು ಹಬ್ಬವಾಗಿ ಆಚರಿಸುವ ಮೂಲಕ ಮೇಯರ್ ಕಫ್ ನ್ನು ಪಾಲಿಕೆ ಸಮರ್ಪಿಸುತ್ತಿದೆ ಎಂದರು. ಕೇವಲ ಮನರಂಜನೆಗಾಗಿ ಬಳಸಿಕೊಳ್ಳದೆ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಕಬ್ಬಡಿ, ಖೋಖೋ, ಪುಟ್‌ಬಾಲ್,ವಾಲಿಬಾಲ್ ಮತ್ತು ಕುಸ್ತಿಯನ್ನು ಕ್ರೀಡಾಪಟುಗಳಿಗಾಗಿಯೇ ಆಯೋಜಿಸಲಾಗಿದೆ. ಇಲ್ಲಿ ಆಟವಾಡುವ ಮಕ್ಕಳು ಅಂತರರಾಷ್ಟಿçÃಯ ಮಟ್ಟದಲ್ಲಿ ಹೆಸರು ಮಾಡುವಂತಾಗಲಿದೆ ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ಪಾಲಿಕೆಯ ಸದಸ್ಯರುಗಳಾದ ಕುಮಾರ್,ಸಿ.ಎನ್.ರಮೇಶ್,ಮಹೇಶ್,ಲಕ್ಷಿö್ಮನರಸಿಂಹರಾಜು, ಶ್ರೀಮತಿ ಗಿರಿಜಾ ಧನಿಯಕುಮಾರ್,ರೂಪಶ್ರೀ ಶೆಟ್ಟಾಳಯ್ಯ,ಶ್ರೀಮತಿ ಲಲಿತಾ ರವೀಶ್,ಶ್ರೀಮತಿ ನೂರನ್ನೀಸಾ,ಶ್ರೀಮತಿ ಫರೀಧಾ ಬೇಗಂ, ಬಿ.ಎಸ್.ಮಂಜುನಾಥ್,ನಯಾಜ್‌ಅಹಮದ್,ಶಿವರಾಮ್,ವಿರೋಧಪಕ್ಷದ ನಾಯಕ ವಿಷ್ಣುವರ್ಧನ್,ಆಯುಕ್ತರಾದ ಯೋಗಾನಂದ, ಕ್ರೀಡಾ ಅಧಿಕಾರಿಗಳಾದ ಇಸ್ಮಾಯಿಲ್,ಕ್ರೀಡಾ ಪೋತ್ಸಾಹಕರಾದ ರಾಕ್‌ಲೈನ್ ರವಿಕುಮಾರ್ ಸೇರಿದಂತೆ ಪಾಲಿಕೆಯ ಅಧಿಕಾರಿಗಳು ಸಿಬ್ಬಂದಿ ವರ್ಗದವರು, ಕ್ರೀಡಾಪುಟಗಳು ಉಪಸ್ಥಿತರಿದ್ದರು.