ಶಿರಾ : ತಾಲ್ಲೂಕಿನ ಮಾಗೋಡು ಸರಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ ಮಂಗಳವಾರ ತಹಶೀಲ್ದಾರ್ ಮಮತ ಅವರು ದಿಡೀರ್ ಭೇಟಿ ನೀಡಿ ಶಾಲೆಯಲ್ಲಿನ ಬಿಸಿಯೂಟದ ಆಹಾರ ಸಾಮಗ್ರಿಗಳು, ದವಸ ಧಾನ್ಯಗಳನ್ನು ಪರಿಶೀಲಿಸಿದರು.
ಶಾಲೆಯಲ್ಲಿನ ಮೂಲಭೂತ ಸೌಲಭ್ಯಗಳ ಬಗ್ಗೆ ಮುಖ್ಯ ಶಿಕ್ಷಕರಿಂದ ಮಾಹಿತಿ ಪಡೆದ ತಹಶೀಲ್ದಾರ್ ಮಮತಾ ಅವರು ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದಲ್ಲಿ ಬಿಸಿಯೂಟ ನೀಡುವಂತೆ ಸೂಚಿಸಿದರು. ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.