ಕುಣಿಗಲ್ : ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ಜನವರಿ 16ರ ರಾತ್ರಿ ಗಸ್ತಿನಲ್ಲಿದ್ದ ಇಬ್ಬರು ಪೊಲೀಸರ ಮೇಲೆ ಹಲ್ಲೆ ನಡೆದಿರುವ ಘಟನೆ ಜರುಗಿದೆ.
ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ಸ್ಟೆಲ್ಲಾ ಮೇರಿ ಖಾಸಗಿ ಶಾಲೆಯ ರಸ್ತೆಯಲ್ಲಿರುವ ಮೋದಿಕೇರ್ ಅಂಗಡಿ ಬಳಿ ಜನವರಿ16 ರಾತ್ರಿ ಸುಮಾರು 3 ಗಂಟೆ ಸಮಯದಲ್ಲಿ ಗಸ್ತಿನಲ್ಲಿದ್ದ ಇಬ್ಬರು ಪೊಲೀಸರ ಮೇಲೆ ಹೌಸಿಂಗ್ ಬೋರ್ಡ್ ನಿವಾಸಿಗಳಾದ ವೆಂಕಟೇಶ್ (ಗ್ರಾಮ ಲೆಕ್ಕಿಗ ) ಮತ್ತು ರಾಮಚಂದ್ರ ಎಂಬ ಇಬ್ಬರು ವ್ಯಕ್ತಿಗಳು ಗಸ್ತಿನಲ್ಲಿದ್ದ ಪೊಲೀಸರ ಲಾಠಿಯನ್ನು ಕಿತ್ತುಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಮೊಬೈಲನ್ನು ಕಸಿದುಕೊಂಡು ಹಾಳು ಮಾಡಿದ್ದಾರೆ ಎಂದು ಮಿಥುನ್ ಎಸ್ ಡಿ ಎಂಬ ಪೊಲೀಸ್ ಕೊಟ್ಟ ದೂರಿನ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿ ಕುಣಿಗಲ್ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ವರದಿ : ರೇಣುಕಾ ಪ್ರಸಾದ್