ತುಮಕೂರು : ಉಡುಪಿ ಜಿಲ್ಲೆಯ ಮೂಡಬಿದಿರೆಯಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಸಾಂಸ್ಕೃತಿಕ ಜಾಂಬೂರಿ ವಿಜ್ಞಾನ ಮೇಳ-ಸ್ಪೆöÊಸ್ ಕಾರ್ಯಕ್ರಮದ ಪ್ರಾಜೆಕ್ಟ್ಗಳ ಪ್ರದರ್ಶನ ಸ್ವರ್ಧೆಗಳಲ್ಲಿ ನಗರದ ಶ್ರೀ ಸಿದ್ಧಾರ್ಥ ಇಂಜಿನಿಯರಿಂಗ್ ಕಾಲೇಜು ದ್ವೀತಿಯ ಸ್ಥಾನ ಗಳಿಸಿದೆ.
ನಗರದ ಶ್ರೀ ಸಿದ್ಧಾರ್ಥ ಇಂಜಿನಿಯರಿಂಗ್ ಕಾಲೇಜಿನ 16 ಮಂದಿ ವಿದ್ಯಾರ್ಥಿಗಳ ಆರು ತಂಡಗಳೊAದಿಗೆ ಆರು ವಿವಿಧ ಪ್ರಾಜೆಕ್ಟ್ಗಳೊಂದಿಗೆ ಸ್ವರ್ಧೆಗಳಲ್ಲಿ ಭಾಗವಹಿಸಿದ್ದರು. 6 ತಂಡಗಳಲ್ಲಿ, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದಿಂದ 2, ಸಿವಿಲ್ ವಿಭಾಗ-3 ಮತ್ತು ಕಂಪ್ಯೂಟರ ಸೈನ್ಸ ವಿಭಾಗದ -1 ತಂಡ ಪ್ರಾಜೆಕ್ಟ್ಗಳ ಸ್ವರ್ಧೆಗಳಲ್ಲಿ ಪಾಲ್ಗೊಂಡಿದ್ದವು. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ದೇಶದ ವಿವಿಧ ಭಾಗಗಳಿಂದ 35 ಕಾಲೇಜುಗಳ ವಿದ್ಯಾರ್ಥಿಗಳ ಪ್ರಾಜೆಕ್ಟ್ಗಳು ಪ್ರದರ್ಶನಗೊಂಡವು.
ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ’ರೋಬೋಟಿಕ ನರ್ಸ್ ಫಾರ್‌ರಿಮೋಟ್ ಪ್ಲೇಸ್’ಪ್ರಾಜೆಕ್ಟ್ಗೆ ದ್ವೀತೀಯ ಸ್ಥಾನ ಪ್ರಶಸ್ತಿ ಲಭಿಸಿದೆ. ರೋಬೋ ಅಂಬ್ಯು (ರೋಬೋಟಿಕ್‌ಅಂಬುಲೆನ್ಸ್) ಮಾಡೆಲ್ ರೂಪಿಸಿದ ವಿದ್ಯಾರ್ಥಿಗಳಾದ ಅಭಿಷೇಕ್, ಅನುಷಾ, ಅಮೃತವಾಣಿ, ಅಬ್ದುಲ್‌ಗಫೂರ್‌ಅವರು ಕೋವಿಡ್-19 ಸಂದರ್ಭದಲ್ಲಿ ಡಾಕ್ಟರ್, ನರ್ಸ್ಗಳ ಕೊರತೆಯನ್ನು ಗಮನಿಸಿ ಪ್ರಾಧ್ಯಾಪಕ ಪ್ರೊ. ಪ್ರವೀಣ್‌ಕುಮಾರ್ ಸಿ. ಅವರ ಮಾರ್ಗದರ್ಶನದಲ್ಲಿ ‘ರೋಬೋಟಿಕ್ ನರ್ಸ್’ ಎಂಬ ಹೊಸ ಪರಿಕಲ್ಪನೆಯಿಂದ, ನರ್ಸ್ಗಳಿಲ್ಲದೆ ಕೇವಲ ರೊಬೋಟ್ ಮೂಲಕ ಚಿಕಿತ್ಸೆ ನೀಡುವ ತಾಂತ್ರಿಕ ಕೌಶಲ್ಯವನ್ನು ಒಳಗೊಂಡಂತೆ ಈ ಆವಿಷ್ಕಾರ ಮಾಡಿದ್ದಾರೆ. ಇದು ವಿಜ್ಞಾನ ಮೇಳದಲ್ಲಿ ಪ್ರದರ್ಶನಗೊಂಡು ವಿಶೇಷ ಗಮನ ಸೆಳೆಯಿತು.
ಈ ಅಂತಾರಾಷ್ಟ್ರೀಯ ಮಟ್ಟದ ವಿಜ್ಞಾನ ಮೇಳದಲ್ಲಿ ಭಾಗವಹಿಸಿ ಪ್ರಶಸ್ತಿ ಗೆದ್ದ ತಂಡಕ್ಕೆ ಪ್ರಮಾಣ ಪತ್ರ ನೀಡಿ ಅಭಿನಂದಿಸಿ ಈ ಪ್ರಾಜೇಕ್ಟ್ಗಳನ್ನು ಸಮಾವೇಶಕ್ಕೆ ಆಗಮಿಸಿದ್ದ 50 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ವಿಕ್ಷಿಸಿದಾರೆಂದು ಆಯೋಜಕರು ಕಾರ್ಯಕ್ರಮದಲ್ಲಿ ತಿಳಿಸಿದರು.
ಅಭಿನಂದನೆ:
ವಿದ್ಯಾರ್ಥಿಗಳು ಕಲಿಕೆಯ ಹಂತದಲ್ಲಿಯೇ ಸಂಶೋಧನೆಯಲ್ಲಿ ತೊಡಗಿ, ಸಾರ್ವಜನಿಕ ವೇದಿಕೆಗಳಲ್ಲಿ-ಸ್ಪರ್ಧೆಗಳಲ್ಲಿ ತಮ್ಮ ಸಾಧನೆಗೆ ಮುಂದಾಗಿರುವುದ ಅವರ ಕ್ರೀಯಾಶೀಲತೆ ಹಿಡಿದ ಕನ್ನಡಿ. ಆ ವಿದ್ಯಾರ್ಥಿಗಳ ಪ್ರಗತಿಪರವಾದ ಸಾಧನೆಗೆ ಪ್ರಶಸ್ತಿ ಬಂದಿರುವುದು ಸಂತಸ ತಂದಿದೆ. ಪ್ರಶಸ್ತಿ ಪಡೆದ ಮತ್ತು ವಿಜ್ಞಾನ ಮೇಳ ದಲ್ಲಿ ಪಾಲ್ಗೊಂಡ ಎಲ್ಲರಿಗೂ ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಡಾ.ಜಿ.ಪರಮೇಶ್ವರ ಅವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಅದೇ ರೀತಿ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ಪ್ರಯುಕ್ತ ಆಯೋಜಿಸಿದ್ದ ವಿಜ್ಞಾನ ಮೇಳದಲ್ಲಿ ವಿದ್ಯಾರ್ಥಿಗಳ ಕ್ರಿಯಾಶೀಲತೆ ಮತ್ತು ಸೃಜನಶೀಲತೆ ಅನಾವರಣಗೊಂಡಿರುವುದಕ್ಕೆ ಪ್ರಾಂಶುಪಾಲರಾದ ಡಾ.ಎಂ.ಎಸ್.ರವಿಪ್ರಕಾಶ ಹರ್ಷ ವ್ಯಕ್ತಪಡಿಸಿದ್ದಾರೆ.