ತುಮಕೂರು : ಅಧಿಕಾರ ಇರಲಿ ಬಿಡಲಿ, ಸಾಮಾಜಿಕ ನ್ಯಾಯದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ,
ನಾನು ಏನಾಗಿದ್ದರೂ ಸಹ ಸಾಮಾಜಿಕ ನ್ಯಾಯಕ್ಕೆ ಬದ್ಧನಾಗಿರುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ
ಸಿದ್ದರಾಮಯ್ಯ ತಿಳಿಸಿದರು.ಸ್ವಾಮಿ ವಿವೇಕಾನಂದ ಸಹಕಾರ ಸಂಘದ ರಜತ ಮಹೋತ್ಸವ ಹಾಗೂ ಮಾಜಿ ಸಚಿವ ಲಕ್ಷ್ಮೀ ನರಸಿಂಹಯ್ಯ ಸಂಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಹಿಂದುಳಿದ ಜಾತಿಗೆ, ಮಹಿಳೆಯರಿಗೆ, ಅಲ್ಪಸಂಖ್ಯಾತರಿಗೆ ರಾಜಕೀಯ ಮೀಸಲಾತಿ ದೊರಕಿದ್ದು 1995ರಲ್ಲಿ,26.4 ರಷ್ಟು ಹಿಂದುಳಿದ ಜಾತಿಗಳಿಗೆ 26.4, ಮಹಿಳೆಯರಿಗೆ 33ರಷ್ಟು ಮೀಸಲಾತಿ ನೀಡಲು ನಮ್ಮ ಸಮಿತಿ ಶಿಫಾರಸ್ಸು ಮಾಡಿತ್ತು ಎಂದರು.
ಹಿಂದುಳಿದವರಿಗೆ ಮೀಸಲಾತಿ ನೀಡಲು ಬಿಜೆಪಿ ವಿರೋಧಿಸಿತ್ತು, ಹಿಂದುಳಿದವರಿಗೆ ಅಧ್ಯಕ್ಷ ಸ್ಥಾನ
ನೀಡುವುದು ಸಂವಿಧಾನ ಬಾಹಿರ ಎಂದು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು, ಆದರೆ
ಸುಪ್ರೀಂ ಕೋರ್ಟ್ ಅರ್ಜಿ ವಜಾಗೊಳಿಸಿತ್ತು,ಬಿಜೆಪಿ ಅಂದಿಗೂ ಇಂದಿಗೂ ಸಾಮಾಜಿಕ ನ್ಯಾಯಕ್ಕೆ ವಿರೋಧಿ ಎಂದು ಹೇಳಿದರು.
ಸಂವಿಧಾನ, ಸಮಾನತೆ, ಸಮಾನ ಅವಕಾಶ, ಸಮ ಸಮಾಜಕ್ಕೆ ಒತ್ತು ನೀಡುತ್ತದೆ, ನಾನು ಮುಖ್ಯ
ಮಂತ್ರಿಯಾಗಿದ್ದಾಗ ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸಿದ್ದೆ, ಹಿಂದೆ ಯಾವ ಸರ್ಕಾರ
ಮಾಡದ ಅಭಿವೃದ್ಧಿ ಕೆಲಸವನ್ನು ನಮ್ಮ ಸರ್ಕಾರ ಮಾಡಿತ್ತು, ಕೆಂಪೇಗೌಡರ ಜಯಂತಿ ಪ್ರಾರಂಭಿಸಿದ್ದು,
ಕಾಂಗ್ರೆಸ್ ಸರ್ಕಾರ ಎಂದು ಹೇಳಿದರು.
ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಾಮಾಜಿಕ ಜಾತಿ ಗಣತಿಯ ವರದಿಯನ್ನು ಕುಮಾರಸ್ವಾಮಿ
ಸ್ವೀಕರಿಸಲಿಲ್ಲ, ಅದು ಮುಗಿದ ಹೋದ ಕಥೆ ಎಂದರು, ಬಿಜೆಪಿ ನನ್ನ ಮೇಲೆ ಆರೋಪ
ಮಾಡುತ್ತಾರೆ, ನಾನು ಸಿಎಂ ಆಗಿದ್ದಾಗ ವರದಿ ಬಂದಿದ್ದರೆ ಒಂದು ಕ್ಷಣವೂ ತಂಡ ಮಾಡದೇ
ಸ್ವೀಕರಿಸುತ್ತಿದ್ದೇ ಎಂದರು. ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಎಲ್ಲ ರಾಜ್ಯಗಳಲ್ಲಿ ಇರಬೇಕೆಂದು ಸುಪ್ರೀಂಕೋರ್ಟ್
ಆದೇಶ ನೀಡಿತ್ತು, ಸ್ವಾತಂತ್ರ್ಯ ಬಂದ ನಂತರ ದೇಶದಲ್ಲಿ ಜಾತಿಗಣತಿಯೇ ನಡೆದಿಲ್ಲ, ಶೇ.4ರಷ್ಟು
ಜನರಿಗೆ 10ರಷ್ಟು ಮೀಸಲಾತಿ ನೀಡಿದ್ದಾರೆ, ಶೇ. 52ರಷ್ಟಿರುವ ಹಿಂದುಳಿದವರಿಗೆ 27ರಷ್ಟು
ಮೀಸಲಾತಿ ಎಲ್ಲಿದೆ ಸಾಮಾಜಿಕ ನ್ಯಾಯ ಎಂದರು. ಅಂಬೇಡ್ಕರ್ ಅವರು ಸಾಮಾಜಿಕವಾಗಿ, ಶೈಕ್ಷ
ಣಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಿ ಎಂದರೆ ಇವರು ಹಿಂದುತ್ವದ ಹೆಸರಿನಲ್ಲಿ ಸಾಮಾ
ಜಿಕ ನ್ಯಾಯವನ್ನು ಧಿಕ್ಕರಿಸಲಾಗಿದೆ, ಈ ದೇಶದಲ್ಲಿಸಮಾನತೆ, ಸಹಬಾಳ್ವೆಯನ್ನು ತೆಗೆಯಲು ಯಾರಿಂದಲೂ ಸಾಧ್ಯವಿಲ್ಲ, ಸಂವಿಧಾನ ಮರೆತರೆ, ಪ್ರಜಾಪ್ರಭುತ್ವ ಹೋದರೆ ಯಾರು ಉಳಿಯುವುದಿಲ್ಲ
ಎಂದು ಆತಂಕ ವ್ಯಕ್ತಪಡಿಸಿದರು.
ಅಜಾತಶತ್ರು ಲಕ್ಷ್ಮೀ ನರಸಿಂಹಯ್ಯ: 1988ರಲ್ಲಿ ನಾನು ಸೋತು ಮನೆಯಲ್ಲಿದ್ದೆ, ಆಗ ಪ್ರತಿ
ಭಾನುವಾರ ಲಕ್ಷ್ಮೀ ನರಸಿಂಹಯ್ಯ ಅವರ ಮನಗೆ ಹೋಗುತ್ತಿದೆ, ಸ್ನೇಹಕ್ಕೆ, ಪ್ರೀತಿಗೆ ಲಕ್ಷ್ಮೀ ನರಸಿಂಹಯ್ಯ ಹೇಳಿ ಮಾಡಿಸಿದ ವ್ಯಕ್ತಿ ಎಲ್ಲ ಸಮುದಾಯದೊಂದಿಗೆ ಬಾಂಧವ್ಯ ಹೊಂದಿದ್ದ ಲಕ್ಷ್ಮೀ ನರಸಿಂಹಯ್ಯ ಅವರು, ಅನೇಕ ಜನರನ್ನು ರಾಜಕಾರಣದಲ್ಲಿ ಬೆಳೆಸಿದರು, ಮಾಧುಸ್ವಾಮಿ ಅವರನ್ನು ತುಮುಲ್ ಅಧ್ಯಕ್ಷರನ್ನಾಗಿ ಮಾಡಿದರು, ಕೆಎಂಎಫ್ ಅಧ್ಯಕ್ಷರನ್ನಾಗಿಸಿದರು, ಮಾಧುಸ್ವಾಮಿ ಬೆಳವಣಿಗೆಗೆ ಲಕ್ಷ್ಮೀ ನರಸಿಂಹಯ್ಯ ಅವರೇ ಕಾರಣ ಎಂದರು.ಆರೋಗ್ಯವನ್ನು ಲೆಕ್ಕಿಸಿದೆ ಜನಸೇವೆಯಲ್ಲಿ ತೊಡಗಿಸಿಕೊಂಡ ರಾಜಕಾರಣಿ, ಹೆಚ್‌ಎಂಟಿ ತುಮಕೂರಿನಲ್ಲಿ ಸ್ಥಾಪನೆಯಾಗಲು ಲಕ್ಷ್ಮೀ ನರಸಿಂಹಯ್ಯ ಅವರೇ ಕಾರಣ, ಜನತಾ ಪಕ್ಷದ ಅಧ್ಯಕ್ಷರಾಗಿ ತುರ್ತು ಪರಿಸ್ಥಿತಿಯಲ್ಲಿ ಜೈಲುಶಿಕ್ಷೆ ಅನುಭವಿಸಿದರು, ಲಕ್ಷ್ಮೀ ನರಸಿಂಹಯ್ಯ ಅವರಿಂದಲೇ ತುಮಕೂರು ಜಿಲ್ಲೆಯಲ್ಲಿ ಜನತಾಪಕ್ಷ ಬೆಳೆಯಿತು ಎಂದರು.
ರಾಮಕೃಷ್ಣ ಹೆಗಡೆ, ಬೊಮ್ಮಾಯಿ, ಎಚ್.ಡಿ.ದೇವೇಗೌಡ ಅವರೊಂದಿಗೆ ಉತ್ತಮ ಒಡನಾಟ
ಹೊಂದಿದ್ದರು, ಜಾಲಪ್ಪ, ನನ್ನ ಮೇಲೆ ಪ್ರೀತಿ ಹೊಂದಿದ್ದರು ಅದಕ್ಕೆ ಕಾರಣ ಹಿಂದುಳಿದ
ಜಾತಿಯವರು ಎನ್ನುವುದು, ಹಿಂದುಳಿದ ಜಾತಿಯವರಿಗೆ ಸಾಮಾಜಿಕ ನ್ಯಾಯ ಕೊಡಿಸಲು
ಶ್ರಮಿಸಿದರು, ಹಿಂದುಳಿದ ಜಾತಿಗಳಿಗೆ ಅನ್ಯಾಯವಾದರೆ ಕ್ಷಮಿಸೋಲ್ಲ ಎಂಬ ಬದ್ಧತೆಯನ್ನು ಹೊಂದಿದ್ದರು, ಅದರಲ್ಲಿ ರಾಜೀಯಾಗಲಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಕಾನೂನು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ
ಕೆ.ಎನ್.ರಾಜಣ್ಣ, ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್, ಮುಖ್ಯಮಂತ್ರಿ ಚಂದ್ರು,ಗೋವಿಂದರಾಜು, ಬಲರಾಮೇಗೌಡ, ಪಿ.ಮೂರ್ತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
¸