ಕುಣಿಗಲ್ : ರಾಜ್ಯದಲ್ಲಿ ಜೆಡಿಎಸ್ ಪಕ್ಷದ ಪೂರ್ಣಾವಧಿ ಸರ್ಕಾರ ತರಲು 123 ಹೆಚ್ಚಿನ ಶಾಸಕರನ್ನ ಗೆಲ್ಲಿಸುವ ಮೂಲಕ ಹೆಚ್‍ಡಿ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡಲು ಮುಖಂಡರು ಹಾಗೂ ಕಾರ್ಯಕರ್ತರು ತಮ್ಮಲ್ಲಿರುವ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ತೊರೆದು ಜೆಡಿಎಸ್ ಸರ್ಕಾರವನ್ನು ಅಧಿಕಾರಕ್ಕೆ ತರಬೇಕೆಂದು ಮಾಜಿ ಮಂತ್ರಿ ಡಿ ನಾಗರಾಜಯ್ಯ ಮನವಿ ಮಾಡಿದರು.
ಪಟ್ಟಣದ ನಕ್ಷತ್ರ ಪ್ಯಾಲೇಸಿನಲ್ಲಿ ತಾಲೂಕು ಜಾತ್ಯಾತೀತ ಜನತಾದಳ ಪಂಚರತ್ನ ಯಾತ್ರೆ ಬರುವ 30 ರಂದು ಆಗಮಿಸುವುದರಿಂದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪೂರ್ಣಾವಧಿ ಮುಖ್ಯಮಂತ್ರಿ ಯಾಗಿ ಪ್ರಧಾನಮಂತ್ರಿಯಾಗಿ ಅಧಿಕಾರ ಮಾಡಲಿಲ್ಲ ಆದರೂ ಸಹ ಸಿಕ್ಕಿದ ಕಾಲಾವಕಾಶದಲ್ಲಿ ರೈತರು, ಹಿಂದುಳಿದ ವರ್ಗದವರು, ದೀನದಲಿತರ ಅಲ್ಪಸಂಖ್ಯಾತರ ಏಳಿಗೆಗೆ ಹಲವಾರು ಜನಪ್ರಿಯಯೋಜನೆಗಳನ್ನ ಜಾರಿಗೆ ತಂದಂತಹ ಅವುಗಳು ಪೂರ್ಣ ಯಶಸ್ಸು ಸಿಗದೇ ಇರುವುದರಿಂದ ರಾಜ್ಯದಲ್ಲಿ ಜಾತ್ಯಾತೀತ ಜನತಾದಳ ಪಕ್ಷವನ್ನ ಐದು ವರ್ಷಗಳ ಕಾಲ ಪೂರ್ಣ ಅಧಿಕಾರ ಮಾಡಲು 123ಕ್ಕೂ ಹೆಚ್ಚು ಸ್ಥಾನ ಗೆಲ್ಲಿಸುವ ಮೂಲಕ ಎಚ್ ಡಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಬೇಕು ಇವರ ಆಡಳಿತ ಅವಧಿಯಲ್ಲಿ 26 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದ ಶ್ರೀ ಶಕ್ತಿ ಸಂಘಗಳು ಸಾಲಮನ್ನಾ ಪರಿಶಿಷ್ಟ ಜಾತಿ ಜನಾಂಗದವರ ಅಭಿವೃದ್ಧಿ ಕೈಗೊಳ್ಳಲು ಕುಮಾರಸ್ವಾಮಿ ಅವರ ಕೈ ಬಲಪಡಿಸಬೇಕು ಬಿಜೆಪಿ ಪಕ್ಷವು ಗ್ಯಾಸ್ ಸಿಲಿಂಡರ್ ಗೊಬ್ಬರ ಸಬ್ಸಿಡಿ ನೀಡುವ ಮೂಲಕ ಜನರಿಗೆ ಮಹಿಳೆಯರಿಗೆ ದ್ರೋಹ ಬಗೆದು ನಾಟಕವಾಡಿ ಇದನ್ನು ಈಗ ತೆಗೆದು ಹಾಕಿದೆ ಎಂದು ಆರೋಪಿಸಿದವರು ಮುಂದಿನ ದಿನಗಳಲ್ಲಿ ಬೆಸ್ಕಾಂ ಇಲಾಖೆಯನ್ನು ಖಾಸಗಿಕರಣ ಗೊಳಿಸಿ ರೈತರ ಕೊಳವೆಬಾವಿ ಗಳಿಗೆ ವಿದ್ಯುತ್ ಮೀಟರ್ ಅಳವಡಿಸುತ್ತಾರೆ ಎಂದು ಎಚ್ಚರಿಸಿ ಶಾಸಕ ಡಾ ರಂಗನಾಥ್ ಹಾಗೂ ಲೋಕಸಭಾ ಸದಸ್ಯ ಡಿಕೆ ಸುರೇಶ್ ಕ್ಷೇತ್ರದ ಅಭಿವೃದ್ಧಿಯನ್ನು ಕಡೆಗಣಿಸಿ ಮಹಿಳೆಯರನ್ನು ಚುನಾವಣೆ ಹತ್ತಿರವಾದಂತೆ ಗುಡಿಗೋಪರ ದರ್ಶನ ಮಾಡಿಸಿ ಆಣೆ ಪ್ರಮಾಣ ಮಾಡಿಸಿ ಜನರ ಮತಗಳಿಸಲು ಅಂಗಲಾಚುತಿದ್ದಾರೆ ಹಾಲಿ ಶಾಸಕರನ್ನ ಶಾಶ್ವತವಾಗಿ ಮನೆಗೆ ಕಳುಹಿಸಿ ಎಂದ ಅವರು ಇನ್ನು ಬಿಜೆಪಿ ಮುಖಂಡ ಡಿ ಕೃಷ್ಣಕುಮಾರ್ ತಮ್ಮನಾಗಿ ಎಲ್ಲಾ ರೀತಿಯ ಅಧಿಕಾರವನ್ನು ಜೆಡಿಎಸ್ ಪಕ್ಷದಿಂದ ಅನುಭವಿಸಿ ರಾಜಕೀಯವಾಗಿ ಬೆಳೆಸಿದ ಸ್ವಂತ ಅಣ್ಣನಿಗೆ ದ್ರೋಹ ಮಾಡಿ ವಿಧಾನಸಭಾ ಚುನಾವಣೆಯಲ್ಲಿ ಮೂರು ಬಾರಿ ಸೋತಿ ಸುಣ್ಣವಾದರೂ ಬುದ್ಧಿ ಬಂದಿಲ್ಲ ಎಂದ ಅವರು ಜೆಡಿಎಸ್ ಪಕ್ಷವನ್ನ ಕಾರ್ಯಕರ್ತರು ಹಗಲಿರುಳು ಎನ್ನದೆ ಶ್ರಮಪಟ್ಟು ತಮ್ಮ ಸಣ್ಣಪುಟ್ಟ ವೈಶಮ್ಗಳು ಏನಾದರೂ ಇದ್ದರೆ ಅವುಗಳನ್ನು ಬದಿಗೊತ್ತಿ ಪಕ್ಷಕ್ಕಾಗಿ ದುಡಿದು ರಾಜ್ಯದ ಏಳಿಗೆಗೆ ಕುಮಾರಸ್ವಾಮಿಯವರನ್ನು ಪೂರ್ಣಾವಧಿ ಮುಖ್ಯಮಂತ್ರಿ ಯನ್ನಾಗಿ ಮಾಡಬೇಕೆಂದರು.
ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಡಾ, ರವಿಬಾಬು ಮಾತನಾಡಿ ತಾಲೂಕಿನ ರೈತರ ರೇಷ್ಮೆ ಸಮಸ್ಯೆ ಕಾಡುತ್ತಿದೆ ರೈತರ ಕಡೆ ಗಮನಹರಿಸಿ ಅವರ ಕಷ್ಟ ಸುಖಗಳನ್ನು ನೋಡದೆ ಶಾಸಕರು ಅಭಿವೃದ್ಧಿ ಕಾರ್ಯಗಳನ್ನು ಕೈ ಬಿಟ್ಟು ಪಟ್ಟಣದಲ್ಲಿ ಉತ್ಸವ ಮೂರ್ತಿಗಳನ್ನು ಮೆರವಣಿಗೆ ಮಾಡುತ್ತಾ ಕುಣಿದು ಕುಪ್ಪಳಿಸುತ್ತಿದ್ದಾರೆ ಮುಂದಿನ ದಿನಗಳಲ್ಲಿ ಜನರು ಇದಕ್ಕೆಲ್ಲ ತಕ್ಕ ಉತ್ತರ ನೀಡುತ್ತಾರೆ ಎಂದು ದೂರುತ್ತಾ
ಹಾಲಿ ಶಾಸಕರು ಎಷ್ಟೇ ಹಣ ಖರ್ಚು ಮಾಡಿ ಪಲ್ಟಿ ಹೊಡೆದರು ಮುಂದಿನ ಚುನಾವಣೆಯಲ್ಲಿ ಹಾಲಿ ಶಾಸಕರ ಗೆಲುವು ಸಾಧ್ಯವಿಲ್ಲ ಎಂದು ಭವಿಷ್ಯ ನುಡಿದರು.
ಈ ಸಂದರ್ಭದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಜಗದೀಶ್ ನಾಗರಾಜಯ್ಯ. ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಅಣ್ಣಯ್ಯ, ಶಿವಣ್ಣ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕಾಮನಹಳ್ಳಿ ರಾಮಣ್ಣ,ಜಿಯ ಉಲ್ಲಾ,ಅನ್ಸರ್ ಪಾಷಾ,ದಲಿತ ಮುಖಂಡ ವರದರಾಜು,ಪುರಸಭಾ ಮಾಜಿ ಅಧ್ಯಕ್ಷರಾದ ಕೆ ಎಲ್ ಹರೀಶ್ ಮತ್ತು ಐಷಾಬಿ, ಜೆಡಿಎಸ್ ಪಕ್ಷದ ವಕ್ತಾರ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ತರೀಕೆರೆ ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ಕಾಂಗ್ರೆಸ್ ಪಕ್ಷದ ನೂರಾರು ಕಾರ್ಯಕರ್ತರು ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು.