ತೋಟದಲ್ಲಿ ಗಾಂಜಾ ಗಿಡ ಬೆಳೆದ ಭೂಪ..!! : ಮಾಲು ಸಮೇತ ಆರೋಪಿಯ ಬಂಧನ

ಗುಬ್ಬಿ: ತೋಟದಲ್ಲಿ ಗಾಂಜಾ ಗಿಡಗಳನ್ನು ಬೆಳೆದ ಆರೋಪಿ ಬಗ್ಗೆ ಖಚಿತ ಮಾಹಿತಿ ಆಧರಿಸಿದ ಗುಬ್ಬಿ ಪೊಲೀಸರು ತಾಲ್ಲೂಕಿನ ಸುರಿಗೇನಹಳ್ಳಿ ಗ್ರಾಮದಲ್ಲಿ ದಾಳಿ ನಡೆಸಿ 10 ಗಾಂಜಾ ಗಿಡಗಳ ಪೈಕಿ 400 ಗ್ರಾಂ ಗಾಂಜಾ ಮಾಲು ಸಮೇತ ಆರೋಪಿಯನ್ನು ಬಂಧಿಸಿದರುವ ಘಟನೆ ನಡೆದಿದೆ.
ಆರೋಪಿ ನಲ್ಲೂರಯ್ಯ (40) ಸುರಿಗೇನಹಳ್ಳಿ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ. ತೋಟದಲ್ಲಿ ಬೆಳೆದ ಜೋಳದ ಗಿಡಗಳ ಮಧ್ಯೆ ಸೊಂಪಾಗಿ ಗಾಂಜಾ ಗಿಡಗಳನ್ನು ಬೆಳೆದ ಆರೋಪಿ ಬಹಳ ದಿನಗಳಿಂದ ಈ ಕೃತ್ಯದಲ್ಲಿ ಬಾಗಿಯಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಗಾಂಜಾ ಗಿಡಗಳನ್ನು ಬೆಳೆದು ಅದರಲ್ಲಿನ 400 ಗ್ರಾಂ ಗಾಂಜಾ ಸೊಪ್ಪನ್ನು ಸಿದ್ಧಪಡಿಸಿ ಮಾರಾಟಕ್ಕೆ ಸಜ್ಜಾಗಿಸಿದ್ದ ಖಚಿತ ಮಾಹಿತಿ ಪಡೆದ ಗುಬ್ಬಿ ಪೊಲೀಸರು ಶಿರಾ ಡಿವೈಎಸ್ಪಿ ಶೇಖರ್ ಅವರ ನೇತೃತ್ವದಲ್ಲಿ ಸಿಪಿಐ ರಾಘವೇಂದ್ರ, ಪಿಎಸ್ಐ ಸುನೀಲ್ ಕುಮಾರ್ ಅವರ ತಂಡ ದಾಳಿ ಮಾಡಿ ಆರೋಪಿಯನ್ನು ಮಾಲು ಸಮೇತ ಬಂಧಿಸಿದ್ದಾರೆ.
ವಿಷಯ ತಿಳಿದ ತಹಶೀಲ್ದಾರ್ ಆರತಿ.ಬಿ ಸ್ಥಳ ಮಹಜರು ನಡೆಸಿ ಆರೋಪಿಯ ವಿರುದ್ಧ ಕಾನೂನು ಕ್ರಮಕ್ಕೆ ಸೂಚಿಸಿದರು. ದಾಳಿ ಮಾಡಿದ ಪೊಲೀಸರ ತಂಡದಲ್ಲಿ ನವೀನ್, ಶಶಿಧರ್, ಹನುಮಂತ, ವಿಶ್ವನಾಥ್, ನಟರಾಜ್ ಇತರರು ಇದ್ದರು.



