ಪಠ್ಯಪುಸ್ತಕ ಪರಿಷ್ಕರಣೆಯ ಅವಾಂತರಗಳಿಗೆ ಕಾರಣಾಗಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ರನ್ನು ಸಂಪುಟದಿಂದ ಕೈಬಿಡಿ : ರಾಯಸಂದ್ರ ರವಿಕುಮಾರ್
ತುಮಕೂರು : ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ಕಲಿಸುವ ಪಠ್ಯಪುಸ್ತಕದಿಂದ ಈ ದೇಶದ ಬದಲಾವಣೆಗೆ ಶ್ರಮಿಸಿದ ದಾರ್ಶಾನಿಕರನನ್ನು ಕೈಬಿಟ್ಟು, ಆರ್.ಎಸ್.ಎಸ್.ಪ್ರೇರಿತ ಲೇಖಕರರ ಬರಹಗಳಿಗೆ ಆದ್ಯತೆ ನೀಡಿ, ಕನ್ನಿಡಿಗರಿಗೆ ನೋವುಂಟು ಮಾಡಿರುವ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥನನ್ನು ವಜಾಗೊಳಿಸಬೇಕು ಹಾಗೂ ಇಷ್ಟೆಲ್ಲಾ ಗೊಂದಲಗಳಿಗೆ ಕಾರಣರಾದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರನ್ನು ಸಂಪುಟದಿಂದ ಕೈಬಿಡಬೇಕೆಂದು ಭಾರತೀಯ ಶರಣ ಸೇನಾ ಕರ್ನಾಟಕದ ರಾಜ್ಯ ಸಂಚಾಲಕ ರಾಯಸಂದ್ರ ರವಿಕುಮಾರ್ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,2022-23ನೇ ಸಾಲಿನ ಪಠ್ಯಪುಸ್ತಕಗಳಲ್ಲಿ ಹಲವಾರು ಲೋಪದೋಷಗಳನ್ನು ಈ ಸಮಿತಿ ಮಾಡಿದೆ.ಆರ್ಹತೆ ಮತ್ತು ಅನುಭವ ಎರಡು ಇಲ್ಲದ, ಕೇವಲ ಟೂಷನ್ ಸೆಂಟರನ ಮಾಲೀಕನನ್ನು ತಂದು ಪಠ್ಯಪುಸ್ತಕ ಪರಿಷ್ಕರಣೆ ಮಾಡಿಸುವ ಮೂಲಕ ಬಿಜೆಪಿ ಸರಕಾರ ಆರ್.ಎಸ್.ಎಸ್. ಅಣತಿಯಂತೆ ನಡೆದುಕೊಳ್ಳುತ್ತಿದೆ. ಇದು ಖಂಡನೀಯ. ಕೂಡಲೇ ಪಠ್ಯಪುಸ್ತಕಗಳಲ್ಲಿನ ಲೋಪದೋಷಗಳನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಪಠ್ಯಪುಸ್ತಕದಲ್ಲಿ ಈ ನಾಡಿನ ಸಾಕ್ಷಿ ಪ್ರಜ್ಞೆಗಳಾದ ಬಸವಣ್ಣ,ರಾಷ್ಟçಕವಿ ಕುವೆಂಪು,ಭಗತ್‌ಸಿಂಗ್,ನಾರಾಯಣಗುರು,ಪೆರಿಯಾರ್ ರಾಮುಸ್ವಾಮಿ,ಮಹಿಳಾ ಸಮಾಜ ಸುಧಾರಕರಾದ ಸಾವಿತ್ರಿ ಬಾಯಿ ಪುಲೆ, ತಾರಾಬಾಯಿ ಶಿಂಧೆ,ಪಂಡಿತ್ ರಮಾಬಾಯಿ ಸೇರಿದಂತೆ ಹಲವಾರು ಹಿರಿಯ ದಾರ್ಶಾನಿಕರನ್ನು ಪಠ್ಯದಿಂದ ಕೈಬಿಡಲಾಗಿದೆ.9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ಬಸವಣ್ಣನವರ ಜೀವನ ಚರಿತ್ರೆಯಲ್ಲಿ ಹಲವಾರು ತಪ್ಪುಗಳನ್ನು ಮಾಡಿದ್ದಾರೆ. ಯಾರಿಂದಲೂ ದೀಕ್ಷೆ ಪಡೆಯದ ಬಸವಣ್ಣನವರನ್ನು ಶೈವ ಗುರುಗಳಿಂದ ದೀಕ್ಷೆ ಪಡೆದರು ಎಂದು ಹೇಳಿ ಇಡೀ ಪಾಠವನ್ನು ತಿರುಚಲಾಗಿದೆ. ಇದೇ ರೀತಿಯ ಹಲವಾರು ತಪ್ಪುಗಳನ್ನು ಮಾಡಲಾಗಿದೆ.ಆದ್ದರಿಂದ ಮುಖ್ಯಮಂತ್ರಿಗಳು ಕೂಡಲೇ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯನ್ನು ವಜಾಗೊಳಿಸಬೇಕು ಹಾಗೂ ಈ ಎಲ್ಲಾ ಅವಾಂತರಗಳಿಗೆ ಕಾರಣಾಗಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರನ್ನು ಸಂಪುಟದಿಂದ ಕೈಬಿಡಬೇಕು.ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ರಾಯಸಂದ್ರ ರವಿಕುಮಾರ್ ಎಚ್ಚರಿಸಿದರು.
ಎನ್.ಎಸ್.ಯು.ಐ ಕಾರ್ಯಕರ್ತರು ಸಂವಿಧಾನಾತ್ಮಕವಾಗಿ ಪ್ರತಿಭಟನೆ ನಡೆಸುತಿದ್ದವರ ಮೇಲೆ ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರು ಷಡ್ಯಂತ್ರ ರೂಪಿಸಿ,ಕೇಸು ದಾಖಲಿಸುವ ಮೂಲಕ ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸ ಮಾಡಿದ್ದಾರೆ. ಇದು ಖಂಡನೀಯ. ಬಿಜೆಪಿ ಸಹ ಅಧಿಕಾರಕ್ಕೆ ಬಂದಿರುವುದು ಹೋರಾಟದಿಂದಲೇ. ನಾಗೇಶ್ ಮನೆಯ ಮುಂದೆ ಪ್ರತಿಭಟನೆ ಮಾಡಿರುವುದು ತಪ್ಪು ಎನ್ನುವುದಾದರೆ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಮನೆಯ ಮೇಲೆ ಸಂಸದರ ನೇತೃತ್ವದಲ್ಲಿ ನಡೆದ ದಾಳಿಯನ್ನು ಎನ್ನನ್ನ ಬೇಕು. ಎನ್.ಎಸ್.ಯು.ಐ ಕಾರ್ಯಕರ್ತರ ಮೇಲೆ ಹಾಕಿರುವ ಕೇಸು ವಾಪಸ್ಸ್ ಪಡೆಯದ್ದಿರೆ ಆರ್.ಎಸ್.ಎಸ್.ಕಚೇರಿಯ ಮುಂದೆ ಧರಣಿ ನೆಡಸಲಾಗುವುದು ಎಂದರು.
ಕಳೆದ 15 ದಿನಗಳಿಂದ ಪಠ್ಯದ ವಿಚಾರವಾಗಿ ಸಾಹಿತಿಗಳು, ಪ್ರಗತಿಪರರ ಪತ್ರ ಬರೆದು ತಮ್ಮ ಕೃತಿಗಳಿಗೆ ನೀಡಿದ್ದ ಅನುಮತಿಯನ್ನು ಹಿಂಪಡೆಯುತಿದ್ದರು ಮುಖ್ಯಮಂತ್ರಿಗಳು ಮೌನಕ್ಕೆ ಶರಣಾಗಿರುವುದನ್ನು ನೋಡಿದರೆ ಆರ್.ಎಸ್.ಎಸ್. ಆಣತಿಯಂತೆ ಕೆಲಸ ಮಾಡುತಿದ್ದಾರೆ ಎಂಬ ಅನುಮಾನ ಬಲವಾಗುತ್ತಿದೆ.ನಿಮ್ಮ ವೈದಿಕ, ಬ್ರಾಹ್ಮಣ ಸಂಪ್ರದಾಯ ವೈಭವೀಕರಣಕ್ಕೆ ನಾವು ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ರಾಯಸಂದ್ರ ರವಿಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಭಾರತೀಯ ಶರಣಾ ಸೇನಾ ಕರ್ನಾಟಕದ ತುಮಕೂರು ತಾಲೂಕು ಸಂಚಾಲಕ ಕುಚ್ಚಂಗಿ ರಮೇಶ್, ಕೊರಟಗೆರೆ ಸಂಚಾಲಕ ಶಿವಕುಮಾರ್ ಡಿ,ತುರುವೇಕೆರೆ ಸಂಚಾಲಕ ಕೋಳಘಟ್ಟ ಯೋಗೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.