ತುಮಕೂರು ಗ್ರಾಮಾಂತರ ಕ್ಷೇತ್ರದ ಅಬ್ಯುದಯಕ್ಕೆ ದುಡಿಯುತ್ತಿರುವ ಶಾಸಕ ಡಿ.ಸಿ.ಗೌರಿಶಂಕರ್ ಗೆ ಸಹಕಾರ ನೀಡಿ : ಶ್ರೀನಿರ್ಮಲಾನಂದಸ್ವಾಮೀಜಿ
ತುಮಕೂರು : ರಾಜ್ಯದಲ್ಲಿ ಹಾಗೂ ದೇಶದಲ್ಲಿ ಯಾವುದೇ ರಾಜಕೀಯ ಪಕ್ಷ ಸುಧೀರ್ಘವಾಗಿ ಆಡಳಿತ ನಡಸಿಲ್ಲ. ಹಾಗಾಗಿ ಪ್ರಾದೇಶಿಕ ಪಕ್ಷಗಳೆಲ್ಲಾ ಒಗ್ಗೂಡಿ ಆಡಳಿತ ನಡೆಸುವ ಕಾಲ ಒಂದಲ,ಒಂದು ದಿನ ಬಂದೇ ಬರುತ್ತದೆ ಎಂದು ಹೇಳುವ ಮೂಲಕ ಜೆಡಿಎಸ್ ವರಿಷ್ಸ ಹೆಚ್.ಡಿ.ದೇವೇಗೌಡ ತೃತೀಯ ರಂಗದ ಸುಳಿವನ್ನು ಬಿಚ್ಚಿಟ್ಟಿದ್ದಾರೆ.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬಳ್ಳಗೆರೆ ಗ್ರಾಮದ ಶ್ರೀಚಿಕ್ಕಮ್ಮದೇವಿ ಅಮ್ಮನವರ ನೂತನ ದೇವಾಲಯ ಮತ್ತು ಮೂಲಶಿಲಾಬಿಂಬ ಪ್ರತಿಷ್ಟಾಪನೆ ಹಾಗೂ ವಿಮಾನಗೋಪುರ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮದಲ್ಲಿ ದೇವಾಲಯದ ಲೋಕಾರ್ಪಣೆ ಮಾಡಿ ಮಾತನಾಡುತಿದ್ದ ಅವರು,
ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಇದೆ.ರಾಜಧಾನಿಯಲ್ಲಿ ಏನೇನು ನಡೆಯುತ್ತಿದೆ ಎಂಬ ವಿದ್ಯಾಮಾನಗಳ ಅರಿವಿದೆ.ಇದುವರೆಗೂ ರಾಜ್ಯದ ಮತದಾರರು ನಮಗೆ ಪೂರ್ಣ ಬಹುಮತ ನೀಡಿಲ್ಲ. ಹಾಗಿದ್ದೂ ಸಹ ಸಿದ್ದರಾಮಯ್ಯನ ವಿರೋಧದ ನಡುವೆಯೂ 25 ಸಾವಿರ ಕೋಟಿ ಸಾಲ ಮನ್ನಾ ಮಾಡುವ ಮೂಲಕ ಈ ರಾಜ್ಯದ ರೈತರ ಬೆನ್ನಿಗೆ ನಿಂತಿದ್ದೇವೆ ಎಂದರು.
ಸಿದ್ದರಾಮಯ್ಯ ಅಹಿಂದ ಸೋಗಿನಲ್ಲಿ ಜನರಲ್ಲಿ ವಿಷ ಬೀಜ ಬಿತ್ತುತಿದ್ದಾರೆ.ನಾವು ಎಲ್ಲಾ ಜನಾಂಗದವರಿಗೂ ಒಳ್ಳೆಯ ಕೆಲಸವನ್ನೇ ಮಾಡಿದ್ದೇವೆ.ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದವರಿಗೆ ಮೀಸಲಾತಿ ಕೊಟ್ಟಿದು ನಾನು ಪ್ರಧಾನಿಯಾಗಿದ್ದಾಗ. ಸಿದ್ದರಾಮಯ್ಯ ಅದನು ತಿರುಚಿ ಹಿಂದುಳಿದವರನ್ನು ನಮ್ಮ ವಿರುದ್ಧ ಎತ್ತಿ ಕಟ್ಟುತ್ತಿದ್ದಾರೆ.ಹಿಂದುಳಿದವರಿಗೂ ಮಹಿಳೆಯರಿಗೂ ಮೀಸಲಾತಿ ಕಲ್ಪಸಿದು ಇದೇ ದೇವೇಗೌಡರು ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಗೆ ತಿರುಗೇಟು ನೀಡಿದರು.
ರಾಜ್ಯದಿಂದ 16 ಸೀಟು ಗೆದ್ದು ರಾಷ್ಟçದ ಪ್ರಧಾನಿಯಾದೆ ,ಪ್ರಧಾನಿ ಹಾಗೂ ರಾಜ್ಯದ ಮುಖ್ಯಮಂತ್ರಿಯಾದಾಗ ನೀರಿನ ವಿಚಾರದಲ್ಲಿ ಹಲವು ಕೆಲಸಗಳನ್ನು ರಾಜ್ಯದ ಪರ ಮಾಡಿದೇನೆ,ಅಲಮಟ್ಟಿ,ನಾರಾಯಣಪುರ ಬಲ್ದಂಡೆ,ಕೆ ಆರ್ ಎಸ್ ನೀರಿನ ಬಗ್ಗೆ ಹೋರಾಟ ಮಾಡಿದೇನೆ.ಕಾಂಗ್ರೆಸ್‌ನ ಮೇಕಾದಾಟು ಹೋರಾಟ ರಾಜಕೀಯ ಲಾಭಕಷ್ಠೇ ,ಅವರಿಗೆ ಬದ್ದತೆ ಇಲ್ಲ ಎಂದರು.
ಪಕ್ಕದ ತಮಿಳುನಾಡಿನಲ್ಲಿ ಐಕ್ಯತೆ ಇದೇ ಪ್ರಧಾನಿಗಳು ಅಲ್ಲಿಗೆ ಹೋಗಿ ಸೇಲಂ ನಲ್ಲಿ ಏತನೀರಾವರಿಗೆ ಚಾಲನೆ ಕೋಟ್ಟು ಬರುತ್ತಾರೆ.ಅಲ್ಲಿನ ಜನ ಡಿ ಎಮ್ ಕೆ ಮತ್ತು ಅಣ್ಣ ಡಿಎಮ್ ಕೆ ಪ್ರಾದೇಶಿಕ ಪಕ್ಷಗಳಿಗೆ ಮತ ನೀಡಿ ರಾಷ್ಟಿçÃಯ ಪಕ್ಷಗಳನ್ನು ತೆರೆಯ ಮರೆಗೆ ಸರಿಸಿದ್ದಾರೆ.ಈ ರೀತಿಯ ಐಕ್ಯತೆ ನಮ್ಮರಾಜ್ಯದಲ್ಲೂ ಬರಬೇಕು ಎಂದರು.
ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ್ದ ವಹಿಸಿದ್ದ ಆದಿಚುಂಚನಗಿರಿ ಮಠದ ಶ್ರೀಶ್ರೀನಿರ್ಮಲಾನಂದಸ್ವಾಮೀಜಿ ಮಾತನಾಡಿ,ರಾಜ್ಯದ ರೈತರು, ಬಡವರ ಪರವಾಗಿ ನಿರಂತರವಾಗಿ ಕೆಲಸ ಮಾಡುತ್ತಿರುವ ಜೆಡಿಎಸ್ ವರಿಷ್ಠರಾದ ಹೆಚ್.ಡಿ.ದೇವೇಗೌಡ ರಾಜ್ಯಕ್ಕಾಗಿ ಎಲ್ಲವನ್ನು ತ್ಯಾಗ ಮಾಡಿದ್ದಾರೆ. ರಾಜ್ಯದ ಜನತೆ ಅವರ ಪರವಾಗಿ ನಿಲ್ಲಬೇಕಿದೆ.ಹಾಗೆಯೇ ಹಲವಾರು ಯೋಜನೆಗಳ ಮೂಲಕ ತುಮಕೂರು ಗ್ರಾಮಾಂತರ ಕ್ಷೇತ್ರ ಅಬ್ಯುದಯಕ್ಕೆ ದುಡಿಯುತ್ತಿರುವ ಚನ್ನಿಗಪ್ಪ ಅವರ ಪುತ್ರ ಶಾಸಕ ಡಿ.ಸಿ.ಗೌರಿಶಂಕರ್ ಎತ್ತರಕ್ಕೆ ಬೆಳೆಯಲು ನೀವುಗಳು ಸಹಕಾರ ನೀಡಬೇಕೆಂದರು.
ವಿದ್ಯಾ ಚೌಡೇಶ್ವರಿ ಸಂಸ್ಥಾನ ಮಠದ ಶ್ರೀಬಾಲಮಂಜುನಾಥ ಮಹಾಸ್ವಾಮಿಗಳು ಉಪಸ್ಥಿತರಿದ್ದರು.ವೇದಿಕೆಯಲ್ಲಿ ಶಾಸಕ ಗೌರಿಶಂಕರ್,ಮಾಜಿ ಶಾಸಕ ಎಮ್ ಟಿ ಕೃಷ್ಣಪ್ಪ,ಜಿಲ್ಲಾಧ್ಯಕ್ಷ ಆರ್ ಸಿ ಅಂಜನಪ್ಪ,ಗೌರವಾಧ್ಯಕ್ಷ ಟಿ.ಆರ್. ನಾಗರಾಜು, ಮುಖಂಡರಾದ ಕೃಷ್ಣಪ್ಪ, ನರಸೇಗೌಡ ಮತ್ತಿತರರು ಹಾಜರಿದ್ದರು.