ತುಮಕೂರುತುಮಕೂರು ನಗರ

ವಿದ್ಯಾರ್ಥಿಗಳ ಮನತಣಿಸಿದ ಸಾಂಸ್ಕೃತಿಕ ಹಬ್ಬ ‘ಕಲೋತ್ಸವ-2022’

ತುಮಕೂರು : ಮುಂಜಾನೆಯ ಮಂಜಿಗೆ ನೇಸರನ ಕಿರಣಗಳು ತಾಕಿದಾಗ ಹೊಳಪಿನಂದ ಹೆಚ್ಚಿದಂತೆ, ಸಾಂಸ್ಕೃತಿಕ ಉಡುಗೆ ತೊಡುಗೆ ತೊಟ್ಟು ಸಿಂಗಾರಗೊಂಡ ಮುಖಗಳ ನೋಡಿದಾಗ ಸ್ವರ್ಗಲೋಕವೇ ಧರೆಗಿಳಿದ ಅನುಭವವಾಯಿತು. ಸೂರ್ಯೋದಯದಿಂದ ಸೂರ್ಯಾಸ್ತದ ವರೆಗೂ ಕಲಾ ವೈಭವದ ಮೆರುಗು ಜಿನುಗುತ್ತಿತ್ತು, ಸಂಜೆಗತ್ತಲ ಸರದಿಗೆ ಇಂಬು ತಂದ ಕೃತಕ ಬೆಳಕಿನ ವಿದ್ಯುತ್ ದೀಪಗಳ ಭವ್ಯ ರಂಗಸಜ್ಜಿಕೆಯಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಖ್ಯಾತಿ ಪಡೆದ ಕಲಾವಿದರ ಸಮುಖದಲ್ಲಿ ವಿವಿಧ ನೃತ್ಯ ಪ್ರದರ್ಶನಗಳು ನೇರದ ಪ್ರೇಕ್ಷಕರ ಮನ ತಣಿಸಿದವು.
ಈ ದೃಶ್ಯ ಕಂಡು ಬಂದಿದ್ದು, ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಎರಡು ದಿನಗಳ ಸಾಂಸ್ಕೃತಿಕ ಹಬ್ಬ ‘ಕಲೋತ್ಸವ-2022’ ಸಂಭ್ರಮದ ಕ್ಯಾಂಪಸ್ ಝಲಕ್. ಪವರ್‌ಸ್ಟಾರ್ ಪುನಿತ್ ರಾಜ್‌ಕುಮಾರ್ ಅವರಿಗೆ ಈ ಬಾರಿಯ ಕಲೋತ್ಸವವನ್ನು ಸಮರ್ಪಿಸಲಾಯಿತು.

ಎರಡು ದಿನಗಳ ಕಲೋತ್ಸವ ಕಾರ್ಯಕ್ರಮವನ್ನು ಪ್ರಾಂಶುಪಾಲರಾದ ಡಾ.ಎಂ.ಎಸ್.ರವಿಪ್ರಕಾಶ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಕಾಲೇಜು ಪಾಠಗಳ ಜೊತೆಗೆ ವಿದ್ಯಾರ್ಥಿಗಳ ಕೌಶಲ್ಯ ಹೆಚ್ಚಿಸಿ ಅವರ ಕಲೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಸಲುವಾಗಿ ಪ್ರತಿ ವರ್ಷವೂ ಕಲೋತ್ಸವ ಕಾರ್ಯಕ್ರಮ ಆಯೋಜಿಸಲಾಗುತಿತ್ತು, ಕೋವಿಡ್ ಕಾರಣದಿಂದಾಗಿ ಮೂರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಈ ಕಾರ್ಯಕ್ರಮ ಈ ವರ್ಷ ಬಹಳಷ್ಟು ಸದಾಭಿರುಚಿಯ ಕಲೆಗಳ ಸಮ್ಮಿಲನದೊಂದಿಗೆ ರೂಪುಗೊಳ್ಳುವ ಮೂಲಕ ವಿದ್ಯಾರ್ಥಿಗಳ ಹಾಗೂ ಉಪನ್ಯಾಸಕರ ಮುಖದಲ್ಲಿ ಹಸನಾದ ನಗು ತಂದಿದೆ ಎಂದು ಸಂತಸ ವ್ಯಕ್ತ ಪಡಿಸಿದರು.

ಸರಿಗಮ ಸ್ಪರ್ಧೆಯ ಬೆಸ್ಟ್ ಎಂಟಟ್ರೆöÊನರ್ ಪ್ರಶಸ್ತಿ ವಿಜೇತರಾದ ಕಂಬದ ರಂಗಯ್ಯ ಅವರ ಸ್ವರಗಾನ ಸಂಗೀತದ ರಸದೌತಣ ನೀಡುವ ಮೂಲಕ ಎಲ್ಲರನ್ನೂ ಹುಚ್ಚೆದು ಕುಣಿಸಿದರು. ಖ್ಯಾತ ನೃತ್ಯಪಟು ಹಾಗೂ ಪ್ರಸಿದ್ಧ ನಟರಾದ ಸಂಜಯ್ ರವರ ನೃತ್ಯ ಎಲ್ಲರ ಮುಖದಲ್ಲಿ ನಗುವ ನೂರ್ಮಡಿಗೊಳಿಸಿತು.
ವಿವಿಧ ಸ್ಪರ್ಧೆಗಳು: ಮೆರಗಿನ ಸಿದ್ಧತೆಯೊಂದಿಗೆ ನಡೆದ ‘ಕಲೋತ್ಸವ-2022’ ಕಾಲೇಜಿನ ವಿದ್ಯಾರ್ಥಿಗಳಿಗೆಂದೇ ನೃತ್ಯ ಪ್ರದರ್ಶನ, ರಂಗೋಲಿ, ನಾಟಕ ಪ್ರದರ್ಶನ, ಕರೋಕೆ, ಬಿಪ್ ಸಾಂಗ್ಸ್, ಮೆಹಂದಿ, ಛಾಯಾಚಿತ್ರ ಸೇರಿದಂತೆ 27ಕ್ಕೂ ಹೆಚ್ಚು ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಅದ್ಧೂರಿ ವೇದಿಕೆ ಮತ್ತು ಬೆಳಕಿನ ವೈಭವದ ನಡುವೆ ಕಲೋತ್ಸವಕ್ಕೆ ತಾರೆಯರ ಮೆರಗು ಕೂಡ ಎಲ್ಲರ ಮನ ತಣಿಸಿತು.
ಕುಂಚದಲ್ಲಿ ಅರಳಿದ ಅಪ್ಪು: ಬಣ್ಣ ಲೇಪಿತ ತುಟಿಯ ಅಂಚಲ್ಲಿ ದಂತ ಕಾಂತಿಯ ಹೊಳಪಿನ ನಗು. ತುಂಬಿದ ಮುದ್ದಾದ ಮೊಗದಲ್ಲಿ ಪ್ರೀತಿಯ ತೊರೆಯಲ್ಲಿ ಬಂಗಾರದ ಲೇಪನದಿಂದ ಬಿಡಿಸಿದ ಚಿತ್ರ ಎಲ್ಲರ ಮನಸ್ಸಿನಲ್ಲಿ ನೋವನ್ನು ಮರೆಸಿತು. ಅಪ್ಪು ಅಮರ ಎಂಬುದು ಆ ಕುಂಚದಲ್ಲಿ ಕಾಣುತ್ತಿತ್ತು. ಪವರ್‌ಸ್ಟಾರ್ ಪುನಿತ್ ರಾಜ್‌ಕುಮಾರ್ ಅವರಿಗೆ ಈ ಬಾರಿಯ ಕಲೋತ್ಸವವನ್ನು ಕುಂಚದ ಮೂಲಕ ಸಮರ್ಪಿಸಲಾಯಿತು.
ಎಸ್‌ಎಸ್‌ಐಟಿ ಕಾಲೇಜಿನ ಬಯಲುಮಂದಿರಲ್ಲಿ ಮುಖ್ಯ ಅತಿಥಿಗಳಾಗಿ ಚಲನಚಿತ್ರ ನಟ ಹಾಗೂ ಭರತನಾಟ್ಯ ಕಲಾವಿದ ಸಂಜಯ್, ಪ್ರಸಿದ್ದ ಹಾಡುಗಾರ ಕಂಬದ ರಂಗಯ್ಯ, ಸಾಹೇ ವಿಶ್ವವಿದ್ಯಾಲಯದ ರಿಜಿಸ್ಟಾçರ್ ಡಾ.ಎಂ.ಝಡ್.ಕುರಿಯನ್, ಡೀನ್ ಹಾಗೂ ಕಲೋತ್ಸವ ಆಚರಣಾ ಸಮಿತಿ ಅಧ್ಯಕ್ಷರಾದ ಡಾ.ಎಂ.ಸಿದ್ದಪ್ಪ, ಕಲೋತ್ಸವ ಸಮಿತಿಯ ವಿದ್ಯಾರ್ಥಿಗಳಾದ ಮನು ಎಂ.ಎಲ್, ಸೋಹನ್ ರಾಜ್. ಆರ್, ಪ್ರದೀಪ್ ಕುಮಾರ್.ಎಂ.ಆರ್, ದೀಪ್ತಿ.ಪಿ, ರವೀತ.ಕೆ.ಜಿ.ಡಿ. ಹಾಗೂ ಶ್ರೀ ಸಿದ್ಧಾರ್ಥ ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರು, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker