
ಲಕ್ಷ್ಮೀಪುರ : ಬಿಜೆಪಿ ಕಾರ್ಯಕರ್ತರು ಧ್ಯೇಯ, ಸಿದ್ದಾಂತದ ಅಡಿಯಲ್ಲಿ ತಮ್ಮ ಕಾರ್ಯನಿರ್ವಹಣೆ ಮಾಡುತ್ತಾ ಕ್ರಿಯಾಶೀಲ ಸೂತ್ರ ಬದ್ದರಾಗಿ ಕೆಲಸ ಮಾಡೋಣ ಎಂದು ಗೃಹ ಸಚಿವರು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಆರಗ ಜ್ಞಾನೇಂದ್ರ ಕರೆ ನೀಡಿದರು.
ಸೋಂಪುರ ಹೋಬಳಿ ನರಸೀಪುರದ ಲಕ್ಷ್ಮೀಪುರದಲ್ಲಿ ಬಿಜೆಪಿ ತುಮಕೂರು ಜಿಲ್ಲಾ ಪ್ರಶಿಕ್ಷಣ ವರ್ಗದ ಉದ್ಘಾಟನಾ ಸಮಾರಂಭದಲ್ಲಿ ಉದ್ಘಾಟನೆ ಮಾಡಿ, ಭಾರತ ಮಾತಾ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡುತ್ತಾ, ಕಾರ್ಯಕರ್ತರಿಗೆ ದೇಶ ಮೊದಲು, ವೈಯಕ್ತಿಕ ಬದುಕು ನಂತರ ಎಂಬ ರೀತಿಯಲ್ಲಿರುತ್ತದೆ. ನಮ್ಮ ಹಿರಿಯರು ಹಣತೆಯನ್ನು ಕೊಟ್ಟು ಬೆಳೆಸಿದರು. ಸದಾ ಚಟುವಟಿಕೆಯಿಂದ ಕಾರ್ಯ ನಿರ್ವಹಿಸುತ್ತಾ, ಪಕ್ಷದ ಸಂಘಟನೆ ನಿರಂತರವಾಗಿ ಮಾಡುತ್ತಾ, ಪ್ರತಿ ಬೂತ್ ಮಟ್ಟದಲ್ಲಿ ಕ್ರೀಯಶೀಲರಾದರೆ ಒಳಿತಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸರಳ ಸಜ್ಜನಿಕೆಯ ಬಿಜೆಪಿ ಹಿರಿಯರಾದ ಲೋಕಸಭಾ ಉಪ ಸಭಾಪತಿಗಳಾಗಿದ್ದ ಎಸ್. ಮಲ್ಲಿಕಾರ್ಜುನಯ್ಯ ನವರ ಕಾರ್ಯ ನಿರ್ವಹಣೆಗಳ ಬಗ್ಗೆ ವಿವರಿಸಿದರು. ದೇಶದಲ್ಲಿ ಬಿಜೆಪಿ ಸರಿಸಾಟಿ ಇರುವ ಯಾವುದೇ ಪಕ್ಷ ಇಲ್ಲ ಕಾರ್ಯಕರ್ತರ ಅರ್ಪಣಾ ವಮನೋಭಾವ ಇರುವುದರಿಂದ ಕಾರ್ಯಕರ್ತರ ಪಡೆ ನಿರ್ಮಾಣವಾಗುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಗೆ ನೇತ್ರತ್ವ, ನಾಯಕತ್ವವಿಲ್ಲ :
ಕಾಂಗ್ರೆಸ್ ಗೆ 130 ವರ್ಷಗಳ ಇತಿಹಾಸ ಇದೆ. 65 ವರ್ಷಗಳ ಸುದೀರ್ಘವಾದ ಆಡಳಿತ ಮಾಡಿದರು. ಇಂದು ದೇಶದಲ್ಲಿ ಎಲ್ಲಾ ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿದ್ದು, ಕಾಂಗ್ರೆಸ್ ಗೆ ನೇತೃತ್ವ, ನಾಯಕತ್ವವಿಲ್ಲದೆ ಮೂಲೆಗುಂಪು ಸ್ಥಿತಿ ತಲುಪಿದೆ ಎಂದು ಆರಗ ಜ್ಞಾನೇಂದ್ರ ರವರು ಹೇಳಿದರು.
ಹಿರಿಯರ ಕಡೆಗಣನೆ, ಜನತಂತ್ರ ವ್ಯವಸ್ಥೆಯಲ್ಲಿ ಹಿನ್ನಡೆ, ಸಿದ್ದಾಂತ ಅಡಿಯಲ್ಲಿ ನಡೆಯದೆ ಕೇವಲ ಒಂದು ಮನೆತನದ ನೇತೃತ್ವದಲ್ಲಿ ನಡೆಸುತ್ತಾ ಇರುವುದರಿಂದ ಇಮೇಜ್ ಕುಸಿದಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ರಾಜ್ಯ ಉಪಾಧ್ಯಕ್ಷರಾದ ಎಂ.ಬಿ.ನಂದೀಶ್ ರವರು ಬಿಜೆಪಿ ಕಾರ್ಯಕರ್ತರ ಆಧಾರಿತ ಪಕ್ಷವಾಗಿದೆ, ಪ್ರಶಿಕ್ಷಣ ವರ್ಗದ ಮೂಲಕ ವಿಚಾರ, ಪರಂಪರೆ, ಧ್ಯೇಯಗಳನ್ನು ಮುಂದಿನ ಪೀಳಿಗೆಗೆ ಮುಂದುವರೆಸಬೇಕಿದೆ. ಪ್ರಶಿಕ್ಷಣದಲ್ಲಿ ಕಲಿಸಲು, ಜೀವನದಲ್ಲಿ ಅಳವಡಿಸಿಕೊಂಡು, ಆಚರಣೆಗೆ ತರೋಣ ಪ್ರೇರಣಾದಾಯಕವಾಗಿ ಕಾರ್ಯ ನಿರ್ವಹಿಸೋಣ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧ್ಯಕ್ಷರಾದ ಲಕ್ಷ್ಮೀಶ್ ರವರು ಪ್ರಶಿಕ್ಷಣ ವರ್ಗದ 3 ದಿನದಲ್ಲಿ ವಿಷಯಗಳನ್ನು ಮನದಟ್ಟು ಮಾಡಿಕೊಂಡು ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಸಧೃಡ ಮಾಡೋಣ ಎಂದರು.
ಈ ಕಾರ್ಯಕ್ರಮದ ವೇದಿಕೆಯಲ್ಲಿ ಶಾಸಕರಾದ ಜ್ಯೋತಿಗಣೇಶ್, ಜೈವಿಕ ಇಂಧನ ನಿಗಮ ಮಂಡಳಿ ಅಧ್ಯಕ್ಷರಾದ ಕೆ.ಎಸ್.ಕಿರಣ್ ಕುಮಾರ್, ವಿಧಾನಪರಿಷತ್ ಮಾಜಿ ಸದಸ್ಯರಾದ ಡಾ.ಎಂ.ಆರ್.ಹುಲಿನಾಯ್ಕರ್, ರಾಜ್ಯ ಪ್ರಶಿಕ್ಷಣ ಪ್ರಕೋಷ್ಠ ಸಂಚಾಲಕರಾದ ಸಹ ಸಂಚಾಲಕರಾದ ಸಿದ್ದರಾಮಣ್ಣ ಉಪಸ್ಥಿತರಿದ್ದರು.
ಪ್ರಶಿಕ್ಷಣ ಪ್ರಕೋಷ್ಠ ಜಿಲ್ಲಾ ಸಂಚಾಲಕರಾದ ಸಾಗರ್ ದಯಾನಂದ ಸ್ವಾಗತಿಸಿದರೆ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಟಿ.ಭೈರಪ್ಪ ಕಾರ್ಯಕ್ರಮ ನಿರೂಪಿಸಿದರು. ಪ್ರಶಿಕ್ಷಣ ವರ್ಗದ ಸಹ ಸಂಚಾಲಕರಾದ ರಾಜಕುಮಾರ ವಂದಿಸಿದರು.