ಶಿರಾ

ಒಕ್ಕಲಿಗ ಅಭಿವೃದ್ಧಿ ನಿಗಮವನ್ನು ಶೀಘ್ರ ಕಾರ್ಯಾರಂಭ ಮಾಡಿ : ನಂಜಾವಧೂತ ಶ್ರೀ

ಶಿರಾ : ರಾಜ್ಯ ಸರಕಾರ ಒಕ್ಕಲಿಗ ಅಭಿವೃದ್ಧಿ ನಿಗಮವನ್ನು ಘೋಷಣೆ ಮಾಡಿದರೆ ಸಾಲದು. ನಿಗಮದ ಕಾರ್ಯಚಟುವಟಿಕೆಗಳ ಬಗ್ಗೆ ವಿಸ್ತೃತವಾಗಿ ನಿಯಮಗಳನ್ನು ಜಾರಿಗೊಳಿಸಿ, ಅಧ್ಯಕ್ಷ, ಸದಸ್ಯರನ್ನು ನೇಮಿಸಿ, ಕಚೇರಿ ಸ್ಥಾಪನೆ ಮಾಡಿ ಸಮುದಾಯಕ್ಕೆ ಅನುಕೂಲವಾಗುವಂತೆ ಮಾಡಿ ಎಂದು ಸ್ಪಟಿಕಪುರಿ ಸಂಸ್ಥಾನಮಠದ ಪೀಠಾಧ್ಯಕ್ಷರಾದ ಶ್ರೀ ನಂಜಾವಧೂತ ಸ್ವಾಮೀಜಿಯವರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ಕಳೆದ ಅಧಿವೇಶನದಲ್ಲಿ ಯಡಿಯೂರಪ್ಪ ಅವರು ಒಕ್ಕಲಿಗ ಸಮುದಾಯದ ಬಗ್ಗೆ ಕಾಳಜಿ ವಹಿಸಿ ಒಕ್ಕಲಿ ಅಭಿವದ್ಧಿ ನಿಗಮ ಘೋಷಣೆ ಮಾಡಿ 500 ಕೋಟಿ ಅನುದಾನ ಮೀಸಲಿಟ್ಟಿದ್ದು, ಸಮುದಾಯದ ಎಲ್ಲರಿಗೂ ಸಂತೋಷವನ್ನು ತಂದಿತ್ತು. ಆದರೆ ಒಕ್ಕಲಿಗ ಅಭಿವೃದ್ಧಿ ನಿಮಗವನ್ನು ಇದುವರೆಗೂ ಚಾಲನೆ ನೀಡದಿರುವುದು ಆಶ್ಚರ್ಯ ತಂದಿದೆ. ಈ ಬಗ್ಗೆ ವಿಧಾನಮಂಡಲದ ಅಧಿವೇಶನದಲ್ಲಿ ಶಾಸಕ ಕೃಷ್ಣಬೈರೇಗೌಡರು ಪ್ರಶ್ನೆ ಮಾಡಿದ್ದು, ಒಕ್ಕಲಿಗ ಅಭಿವೃದ್ಧಿ ನಿಗಮವನ್ನು ಹೆಸರಿಗಷ್ಟೆ ಘೋಷಣೆ ಮಾಡಿದ್ದೀರಿ ಇದುವರೆಗೂ ಇದರಿಂದ ಸಮುದಾಯದ ಯಾರಿಗೂ ಅನುಕೂಲವಾಗಿಲ್ಲ ಎಂದು ಹೇಳಿದ್ದಾರೆ. ಒಳ್ಳೆ ಭಾವನೆ ಇಟ್ಟುಕೊಂಡು ಮಾಡಿದ ಅಭಿವೃದ್ದಿ ನಿಗಮ ಕಾರ್ಯವನ್ನು ಮಾಡಿಲ್ಲ. 2022ರ ಬಜೆಟ್‌ನಲ್ಲೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು 100 ಕೊಟಿ ಅನುದಾನ ಮೀಸಲಿಟ್ಟಿದ್ದಾರೆ. ಆದರೆ ನಿಗಮಕ್ಕೆ ಅಧ್ಯಕ್ಷರು ಸದಸ್ಯರನ್ನು ನೇಮಕ ಮಾಡಿಲ್ಲ. ನಿಗಮವನ್ನು ನೊಂದಣಿ ಮಾಡಿಲ್ಲ. ಆದ್ದರಿಮದ ತಕ್ಷಣವೇ ನಿಗಮವನ್ನು ನೊಂದಾವಣೆ ಮಾಡಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ನೇಮಿಸಿ ಇದಕ್ಕೆ ಬೇಕಾದ ಸಿಬ್ಬಂದಿಗಳನ್ನು ನೇಮಿಸಿ ನಿಗಮವನ್ನು ಕಾರ್ಯಾರಂಭ ಮಾಡಿ ಸಮುದಾಯ ಜನರಿಗೆ ಅನುಕೂಲವಾಗುವಂತೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಒಕ್ಕಲಿಗ ಅಭಿವೃದ್ಧಿ ನಿಗಮದ ರೀತಿಯಲ್ಲೇ ಉಳಿದ ನಿಗಮಗಳಿಗೂ ಇದೇ ರೀತಿ ಮಾಡಿದ್ದೀರಿ ಎಂಬ ಬಗ್ಗೆ ಅನುಮಾನ ಕಾಡುತ್ತಿದೆ. ಈ ಅನುಮಾನವನ್ನು ಜನಗಳ ಮನಸ್ಸಿನಲ್ಲಿ ಮೂಡುವುದಕ್ಕಿಂತ ಮುಂಚೆಯೆ ಸರಕಾರ ಸರಿಯಾದ ರೀತಿಯಲ್ಲಿ ರೂಪಿಸಿ ಎಂದಿರುವ ಶ್ರೀಗಳು, ಕೃಷ್ಣಬೈರೇಗೌಡರು ಸರಕಾರದ ಗಮನ ಸೆಳೆದಿರುವುದು ಶ್ಲಾಘನೀಯ ಸಮುದಾಯದ ಪರವಾಗಿ ಅಭಿನಂದನೆಗಳು. ಎಲ್ಲಾ ಮುಖಂಡರು ಸಮುದಾಯದ ಹಿತವನ್ನು ಕಾಪಾಡುವ ದೃಷ್ಟಿಯಿಂದ ಎಲ್ಲರೂ ಒಗ್ಗಟ್ಟಾಗಿ ಸಮುದಾಯದ ಅಭಿವೃದ್ಧಿಗೆ ಶ್ರಮಿಸಬೇಕು. ವಿಧಾನಸಭೆ ಸರಕಾರದಲ್ಲಿ ಸಮುದಾಯದ ಹಕ್ಕುಗಳನ್ನು ಅವಕಾಶಗಳನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಕು. ಹಾಗೂ ಮತ್ತೊಮ್ಮೆ ಸರಕಾರಕ್ಕೆ ನೆನಪು ಮಾಡುತ್ತೇನೆ. ಸರಕಾರ ಬದ್ಧತೆಯಿಂದ ನಿಗಮವನ್ನು ತಕ್ಷಣವೇ ಕಾರ್ಯಾರಂಭ ಮಾಡಿಸುವುದು ಮತ್ತು ಕಟ್ಟ ಕಡೆಯ ಒಕ್ಕಲಿಗನಿಗೂ ಕೂಡ ಸವಲತ್ತು ಸಿಗುವಂತೆ ಮಾಡಬೇಕು. ಒಕ್ಕಲಿಗ ಸಮುದಾಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಜನ ಇದ್ದಾರೆ. ಭೂಮಿ ರಹಿತರು ಇದ್ದಾರೆ. ಕೂಲಿ ಮಾಡುವ ವರ್ಗವೂ ಇದೆ. ಅಂತಹವರಿಗೆ ಅನುಕೂಲವಾಗಲಿ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ಒಂದು ವರ್ಷವಾದರೂ ಕೂಡ ಇದುವರೆಗೂ ಹಣ ಬಿಡುಗಡೆಯಾಗಿಲ್ಲ. ಘೋಷಣೆಯಷ್ಟೆ ಆಗಿದೆ. ಬಿಡುಗಡೆಯಾದ ಹಣ ಬಳಸಲಿಕ್ಕೆ. ನಿಗಮವೇ ನೊಂದಣಿಯಾಗಿಲ್ಲ. ಈ ಬಗ್ಗೆ ಕಾನೂನು ಸಚಿವರು ಸ್ಪಷ್ಟಪಡಿಸಿದ್ದಾರೆ. ನಿಗಮ ನೊಂದಣಿಯಾಗಬೇಕು. ನಂತರ ಬ್ಯಾಂಕ್ ಖಾತೆ ತೆರೆಯಬೇಕು ಎಂದು ಸ್ಪಷ್ಟಪಡಿಸಿದ್ದಾರೆ. ಮಾರ್ಚ್ 31 ಬಂದರೆ ಈ ಆರ್ಥಿಕ ವರ್ಷವೂ ಮುಗಿಯುತ್ತದೆ. ಆಗ ಅನುದಾನವೂ ವಾಪಸ್ಸು ಹೋಗುತ್ತದೆ. ಆದ್ದರಿಂದ ಶೀಘ್ರ ಒಕ್ಕಲಿಗ ಅಭಿವೃದ್ಧಿ ನಿಗಮಕ್ಕೆ ಚಾಲನೆ ನೀಡಿ ಎಂದು ಆಗ್ರಹಿಸಿದ್ದಾರೆ.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker