ಕೊರಟಗೆರೆ
ನಾಳೆ ಕೊರಟಗೆರೆ ಪಟ್ಟಣ ಪಂಚಾಯ್ತಿ ಅಧ್ಯಕ್ಷರ ಚುನಾವಣೆ : ಕಾವ್ಯಶ್ರೀ ರಮೇಶ್ ಅಧ್ಯಕ್ಷರಾಗುವ ಸಾಧ್ಯತೆ
ಕೊರಟಗೆರೆ : ಪಟ್ಟಣ ಪಂಚಾಯ್ತಿ ಆಧ್ಯಕ್ಷರ ಚುನಾವಣೆ ಜ.24 ರ ಸೋಮವಾರದಂದು ಬೆಳಿಗ್ಗೆ 11 ಗಂಟೆಗೆ ನಿಯೋಜನೆಗೊಂಡಿದೆ ಎಂದು ಚುನಾವಣಾ ಅಧಿಕಾರಿ ನಹೀದಾ ಜಮ್ ಜಮ್ ತಿಳಿಸಿದ್ದಾರೆ.
ಪಟ್ಟಣ ಪಂಚಾಯ್ತಿ ಅಧ್ಯಕ್ಷರಾಗಿದ್ದ ಮಂಜುಳಾ ಸತ್ಯನಾರಾಯಣ್ ರಾಜೀನಾಮೆ ನೀಡಿದ್ದು,ತೆರವಾದ ಸ್ಥಾನಕ್ಕೆ ಈಗ ಚುನಾವಣೆ ನಡೆಯುತ್ತಿದೆ. ಪ್ರಭಾರ ಅಧ್ಯಕ್ಷರಾಗಿ ಭಾರತಿ ಸಿದ್ದಮಲ್ಲಪ್ಪ ಅಧಿಕಾರವಹಿಸಿಕೊಂಡಿದ್ದರು.
ಪ.ಪಂಚಾಯ್ತಿ ಅಧ್ಯಕ್ಷರ ಹುದ್ದೆ ಪರಿಶಿಷ್ಟ ಪಂಗಡಕ್ಕೆ ನಿಗದಿಯಾಗಿದ್ದು, ಜೆಡಿಎಸ್ ನಿಂದ ಸದಸ್ಯರಾಗಿರುವ ಒಂದನೇ ವಾರ್ಡಿನ ಕಾವ್ಯಶ್ರೀ ರಮೇಶ್ ಆಯ್ಕೆಯಾಗುವ ಸಾಧ್ಯತೆ ನಿಶ್ಚಯವಾಗಿದೆ.
ಕೊರಟಗೆರೆ ಪ.ಪಂಚಾಯ್ತಿಯಲ್ಲಿ 15 ಮಂದಿ ಸದಸ್ಯರಿದ್ದು ಪ.ಪಂಗಡದ ಮಹಿಳಾ ಅಭ್ಯರ್ಥಿಗಳು ಮೂರು ಜನ ಆಯ್ಕೆಯಾಗಿದ್ದಾರೆ .ಅದರಲ್ಲಿ ಭಾಗ್ಯಮ್ಮ ಗಣೇಶ್ ಅಧ್ಯಕ್ಷರ ಚುನಾವಣಾ ಪ್ರಕ್ರಿಯೆ ಯಲ್ಲಿ ಪಾಲ್ಗೊಳ್ಳದ ಹಿನ್ನೆಲೆಯಲ್ಲಿ ಜೆಡಿಎಸ್ ವಿಪ್ ಜಾರಿಗೊಳಿಸಿದ ಕಾರಣದಿಂದ ಸದಸ್ಯತ್ವ ರದ್ದಾಗಿದೆ. ಈಗ ಒಂದನೇ ವಾರ್ಡಿನ ಕಾವ್ಯಶ್ರೀ ರಮೇಶ್ ಅಧ್ಯಕ್ಷರಾಗುವ ಎಲ್ಲಾ ಸಾಧ್ಯತೆ ನಿಶ್ಚಯವಾಗಿದೆ.