ಡಿಸೆಂಬರ್ 19ರಂದು ಗ್ರೂಪ್-ಸಿ ತಾಂತ್ರಿಕೇತರ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆ
ತುಮಕೂರು: ನಗರದ 21 ಪರೀಕ್ಷಾ ಕೇಂದ್ರಗಳಲ್ಲಿ ಪದವಿ ಪೂರ್ವ ವಿದ್ಯಾರ್ಹತೆಯುಳ್ಳ ಗ್ರೂಪ್-ಸಿ ತಾಂತ್ರಿಕೇತರ ಹುದ್ದೆಗಳಿಗೆ ಡಿಸೆಂಬರ್ 19ರಂದು ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷೆಯನ್ನು ಯಾವುದೇ ಲೋಪದೋಷವಿಲ್ಲದೆ ನಡೆಸಲು ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯೊಳಗಿನ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಆದೇಶಿಸಿದ್ದಾರೆ.
ನಿಷೇಧಾಜ್ಞೆಯು ಡಿಸೆಂಬರ್ 19ರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಮತ್ತು ಮಧ್ಯಾಹ್ನ 2 ರಿಂದ ಸಂಜೆ 4 ಗಂಟೆಯವರೆಗೆ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಇರುವ ಜೆರಾಕ್ಸ್ ಮತ್ತು ಬೆರಳಚ್ಚು ಕೇಂದ್ರಗಳನ್ನು ತೆರೆಯುವಂತಿಲ್ಲ. ಜಿಲ್ಲೆಯಲ್ಲಿ ಪ್ರಶ್ನೆಪತ್ರಿಕೆಗಳ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳಿಗೆ ಉತ್ತೇಜನ ನೀಡುವಂತಹ ವ್ಯಕ್ತಿಗಳು ಕಂಡು ಬಂದಲ್ಲಿ ದಂಡ ಪ್ರಕ್ರಿಯಾ ಸಂಹಿತೆ 1973ರ ಸೆಕ್ಷನ್ 107 ಮತ್ತು 110ರಡಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು.
ಈ ನಿಷೇಧದನ್ವಯ ಅನಧಿಕೃತ ವ್ಯಕ್ತಿಗಳು ನಿರ್ಬಂಧಿತ ಪ್ರದೇಶದೊಳಗೆ ಪ್ರವೇಶಿಸುವಂತಿಲ್ಲ. ನಿಷೇಧಾಜ್ಞೆಯನ್ನು ಉಲ್ಲಂಘಿಸಿ ನಿರ್ಬಂಧಿತ ಪ್ರದೇಶದೊಳಗೆ ಪ್ರವೇಶಿಸುವ ಅನಧಿಕೃತ ವ್ಯಕ್ತಿಗಳನ್ನು ಬಂಧಿಸಿ ಅವರ ವಿರುದ್ಧ ಕ್ರಮ ಜರುಗಿಸಲು ಜಿಲ್ಲಾ ಪೊಲೀಸ್ ಇಲಾಖೆಗೆ ಆದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪರೀಕ್ಷಾ ಕೇಂದ್ರಗಳು :-
ನಗರದ ಶ್ರೀ ಸಿದ್ಧಲಿಂಗೇಶ್ವರ ರೆಸಿಡೆನ್ಶಿಯಲ್ ಹೈಸ್ಕೂಲ್(ಶ್ರೀ ಸಿದ್ಧಗಂಗಾ ಮಠ), ಗಾಂಧಿನಗರದ ಶ್ರೀ ಸಿದ್ಧಗಂಗಾ ಮಹಿಳಾ ಪದವಿ ಪೂರ್ವ ಕಾಲೇಜು, ಹೊರಪೇಟೆಯ ಸರ್ವೋದಯ ಪದವಿ ಪೂರ್ವ ಕಾಲೇಜು, ಶ್ರೀ ಸಿದ್ಧಲಿಂಗೇಶ್ವರ ರೆಸಿಡೆನ್ಶಿಯಲ್ ಹೈಯರ್ ಪ್ರೈಮರಿ ಸ್ಕೂಲ್(ಶ್ರೀ ಸಿದ್ಧಗಂಗಾ ಮಠ), ಅಶೋಕ ರಸ್ತೆಯ ಎಂಪ್ರೆಸ್ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಶ್ರೀ ಸಿದ್ಧಲಿಂಗೇಶ್ವರ ರೆಸಿಡೆನ್ಶಿಯಲ್ ಹೈಯರ್ ಪ್ರೈಮರಿ ಸ್ಕೂಲ್(ಶ್ರೀ ಸಿದ್ಧಗಂಗಾ ಮಠ), ಅಶೋಕ ರಸ್ತೆಯ ಎಂಪ್ರೆಸ್ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಶಿರಾಗೇಟ್ ಕಾಳಿದಾಸ ಜ್ಯೂನಿಯರ್ ಕಾಲೇಜು(ಹೈಸ್ಕೂಲ್), ಬಿ.ಹೆಚ್.ರಸ್ತೆಯ ಶ್ರೀ ಸಿದ್ಧಗಂಗಾ ಮಹಿಳಾ ಕಾಲೇಜು(ಕಲೆ, ವಿಜ್ಞಾನ, ವಾಣಿಜ್ಯ), ಹೊರಪೇಟೆಯ ಬಾಪೂಜಿ ಕಾಂಪೋಸಿಟ್ ಪಿ.ಯು.ಕಾಲೇಜು(ಹೈಸ್ಕೂಲ್ ಸೆಕ್ಷನ್), ಸದಾಶಿವನಗರದ ಕನ್ನಿಕಾ ಹೈಸ್ಕೂಲ್, ಬಸವೇಶ್ವರ ರಸ್ತೆಯ ಶ್ರೀ ರೇಣುಕಾ ವಿದ್ಯಾಪೀಠ, ಬಿ.ಹೆಚ್. ರಸ್ತೆಯ ಸರ್ಕಾರಿ ಪದವಿಪೂರ್ವ ಕಾಲೇಜು, ವಿಜಯನಗರದ ಸೋಮೇಶ್ವರ ಬಾಲಕಿಯರ ಪ್ರೌಢಶಾಲೆ, ಹೊರಪೇಟೆಯ ಚೇತನ ವಿದ್ಯಾಮಂದಿರ(ಸರ್ವೋದಯ ಹೈಸ್ಕೂಲ್ ಸೆಕ್ಷನ್), ಬಿ.ಹೆಚ್. ರಸ್ತೆಯ ಶ್ರೀ ಸಿದ್ಧಗಂಗಾ ಮಹಿಳಾ ಕಾಲೇಜು(ಕಲೆ, ವಿಜ್ಞಾನ, ವಾಣಿಜ್ಯ), ಕ್ಯಾತಸಂದ್ರದ ಸರ್ಕಾರಿ ಪ್ರೌಢಶಾಲೆ, ಬಿ.ಹೆಚ್.ರಸ್ತೆಯ ಶ್ರೀ ಸಿದ್ಧಗಂಗಾ ಪಿ.ಯು. ಕಾಲೇಜ್(ಹೈಸ್ಕೂಲ್ ಸೆಕ್ಷನ್), ಜೆ.ಸಿ.ರಸ್ತೆಯ ಆರ್ಯನ್ ಹೈಸ್ಕೂಲ್, ಬಿ.ಹೆಚ್.ರಸ್ತೆಯ ಸರ್ಕಾರಿ ಪದವಿಪೂರ್ವ ಕಾಲೇಜು(ಪ್ರೌಢಶಾಲಾ ವಿಭಾಗ) ಹಾಗೂ ಟೌನ್‌ಹಾಲ್ ಸರ್ಕಲ್ ಬಳಿ ಇರುವ ಶ್ರೀ ಸಿದ್ಧಗಂಗಾ ಪಿ.ಯು.ಕಾಲೇಜು.