ತುಮಕೂರು: ಖ್ಯಾತ ಸಂಗೀತ ನಿರ್ದೇಶಕ ಡಾ.ಹಂಸಲೇಖ ಅವರ ತೇಜೋವಧೆಗೆ ಮುಂದಾಗಿರುವುದನ್ನು ಖಂಡಿಸಿ, ಎಫ್.ಐ.ಆರ್ ರದ್ದು ಪಡಿಸುವಂತೆ ಒತ್ತಾಯಿಸಿ ಇಂದು ದಲಿತ, ಅಲ್ಪಸಂಖ್ಯಾತ, ಹಿಂದುಳಿದ, ಪ್ರಗತಿಪರ ಸಂಘಟನೆ ಗಳ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾ ಪೊಲೀಸ್ ವರಿಷ್ಠರಿಗೆ ಮನವಿ ಸಲ್ಲಿಸಿದರು.
ಚಾಮರಾಜನಗರ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ದೇಶದ ತಳಸಮುದಾಯಗಳು ಅನುಭವಿಸುತ್ತಿರುವ ನೋವು,ಸಂಕಟವನ್ನು ಹೇಳಿದ್ದಾರೆ.ಇದನ್ನೆ ತಪ್ಪಾಗಿ ಅರ್ಥೈಸಿ,ಅವರ ವಿರುದ್ದ ವಾಗ್ದಾಳಿ ನಡೆಸಿ,ಕ್ಷಮೆ ಕೇಳುವಂತೆ ಮಾಡಿರುವುದೇ ಅಲ್ಲದೆ,ಅವರ ವಿರುದ್ಧ ಎಫ್‌ಐಆರ್ ದಾಖಲಿಸುವ ಮೂಲಕ ಅವರಿಗೆ ಮಾನಸಿಕ ಕಿರುಕುಳ ನೀಡಿ, ತೇಜೋವಧೆಗೆ ಮುಂದಾಗಿರುವುದನ್ನು ಪತ್ರಿಭಟನಾ ನಿರತರಾದ ತಾಜುದ್ದೀನ್ ಷರೀಫ್, ಅತೀಕ್ ಅಹಮದ್, ಕೊಟ್ಟಶಂಕರ್, ಸಿ.ಭಾನುಪ್ರಕಾಶ್ ಖಂಡಿಸಿದರು
ಡಾ.ಹಂಸಲೇಖ ಅವರ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ.ಶತಶತಮಾನಗಳಿಂದ ಅಸ್ಪೃಶ್ಯತೆ ಅನುಭವಿಸುತಿದನ್ನು ತಮ್ಮ ಮಾತಿನಲ್ಲಿ ವಿವರಿಸಿದ್ದಾರೆ.ಸತ್ಯವನ್ನು ಅರಗಿಸಿಕೊಳ್ಳಲಾಗದ ಮನುವಾದಿಗಳು ಇದೇ ರೀತಿಯ ಕಿರುಕುಳ ಮುಂದುವರೆದರೆ ರಾಜ್ಯದಾದ್ಯಂತ ಪ್ರತಿಭಟನೆ ನಡೆಸುವುದರ ಜೊತೆಗೆ,ಬಹುಜನ ಆಹಾರವಾದ ಮಾಂಸ ಆಹಾರವನ್ನು ಅವಹೇಳನ ಮಾಡಿದವರ ವಿರುದ್ದ ಸಾಮೂಹಿಕ ಪ್ರತಿದೂರು ದಾಖಲಿಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಶತಮಾನಗಳಿಂದ ಈ ದೇಶದಲ್ಲಿ ಅಸ್ಪೃಶ್ಯತೆ ತಾಂಡವವಾಡುತ್ತಿದೆ.ಇದನ್ನು ಪ್ರಶ್ನೆ ಮಾಡಿದ ಡಾ.ಹಂಸಲೇಖ ಅವರ ತೇಜೋವಧೆಗೆ ಮುಂದಾಗಿರುವುದು ಸರಿಯಲ್ಲ. ಅವರ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ.ಸತ್ಯ ವನ್ನು ಅರಗಿಸಿಕೊಳ್ಳಲಾಗದೆ ಅವರ ಮೇಲೆ ವೈಯುಕ್ತಿಕ ದಾಳಿಗೆ ಇಳಿದಿದ್ದಾರೆ ಇದನ್ನು ನಾವು ಖಂಡಿಸುತ್ತೆವೆ.ಮನುವಾದಿಗಳ ಕುತಂತ್ರವನ್ನು ಬಗ್ಗು ಬಡಿಯಲು ಸದಾ ಕಾಲ ನಿಮ್ಮೊಂದಿಗೆ ಇರುವುದಾಗಿ ತಿಳಿಸಿದರು.
ಮಾಜಿ ಮಂತ್ರಿ ಟಿ.ಬಿ.ಜಯಚಂದ್ರ ಮಾತನಾಡಿ,ಅಸ್ಪೃಶ್ಯತೆಯ ವಿರುದ್ದ ಹಲವಾರು ಕಾಯ್ದೆಗಳನ್ನು ಜಾರಿಗೆ ತಂದರು ನಿರ್ಮೂ ಲನೆ ಸಾಧ್ಯವಾಗಿಲ್ಲ.ಸತ್ಯ ನುಡಿದ ಡಾ.ಹಂಸಲೇಖ ವಿರುದ್ದ ಜಾತಿವಾದಿಗಳು ಇಲ್ಲಸಲ್ಲದ ಆರೋಪ ಮಾಡಿ,ಒತ್ತಡ ಹಾಕಿ ಕ್ಷಮೆ ಕೋರುವಂತೆ ಮಾಡಿದ್ದಾರೆ.ಇದು ಖಂಡನೀಯ ಎಂದರು.
ಕೆ.ಎನ್.ರಾಜಣ್ಣ ಮಾತನಾಡಿದ ಸ್ವಾತಂತ್ರ‍್ಯ ಬಂದು 75 ವರ್ಷ ಕಳೆದರು ಇಂದಿಗು ಅಸ್ಪೃಶ್ಯತೆ ನಿವಾರಣೆ ಸಾಧ್ಯವಾಗಿಲ್ಲ.ಅವರ ನೋವುಗಳನ್ನು ಜನತೆಯ ಮುಂದಿಟ್ಟ ಡಾ.ಹಂಸಲೇಖ ನಮ್ಮ ಊರಿನವರು. ಅವರ ತೇಜೋವಧೆಗೆ ನಾವು ಅವಕಾಶ ನೀಡಬಾ ರದು ಎಂದರು.
ಪ್ರತಿಭಟನೆಯಲ್ಲಿ ಕೇಬಲ್‌ರಘು,ರಂಗಯ್ಯ,ರಾಮಯ್ಯ,ಸೈಯದ್ ಮುದಾಸೀರ್,ಡ್ಯಾಗೇರಹಳ್ಳಿವಿರೂಪಾಕ್ಷ,ಜೆಸಿಬಿ ವೆಂಕಟೇಶ್, ಮರಳೂರು ಕೃಷ್ಣ ಮೂರ್ತಿ,ಗೋಪಿ, ಹಬ್ಬತ್ತನಹಳ್ಳಿ ಶ್ರೀನಿವಾಸ್, ಮುಜೀಬ್ ಅಹಮದ್,ಬಂಡೆಕುಮಾರ್, ಛಲವಾದಿ ಶೇಖರ್, ಕೆಂಪರಾಜು,ಪಿ.ಎನ್.ರಾಮಯ್ಯ,ಯೋಗಾನಂದ್,ನಾಗಭೂಷಣ, ಹೊಸಕೋಟೆ ನಟರಾಜು,ರಾಮಾಂಜೀ,ಹಾಲನೂರು ನರಸಿಂಹ ರಾಜು,ಅಮರ್,ಟಿ.ಪಿ.ಮೋಹನ್,ಕಂಬತ್ತನಹಳ್ಳಿ ಮೂರ್ತಿ,ಕ್ಯಾತ್ಸಂದ್ರ ಮೂರ್ತಿ,ಹೆಗ್ಗರೆ ಕೃಷ್ಣಪ್ಪ,ರಂಜನ್,ಮುನಿರಾಜು, ಜಿ.ಆರ್.ಸುರೇಶ್,ರಾಮಮೂರ್ತಿ, ಪಿ.ಶಿವಾಜಿ, ಜಯಪುರ ಗುರು, ಭರತ್‌ಕುಮಾರ್ ಬೆಲ್ಲದಮಡು, ರಂಗಧಾಮಯ್ಯ, ಆದಂ ಷರೀಷ್, ಸೈಯದ್‌ಮುಜೀಬ್, ಯಲ್ಲಾಪುರ ನರಸಯ್ಯ, ಸೇರಿದಂತೆ ಇತರರಿದ್ದರು.