ಮತಾಂತರ ನಿಷೇಧ ಕಾಯ್ದೆ ಕೈಬಿಡಲು ಕ್ರೈಸ್ತ ಸಮುದಾಯ ಒತ್ತಾಯ
ತುಮಕೂರು : ರಾಜ್ಯ ಸರಕಾರ ಕ್ರಿಶ್ಚಿಯನ್ ಸಮುದಾಯವನು ಗುರಿಯಾಗಿಟ್ಟುಕೊಂಡು ಜಾರಿಗೆ ತರಲು ಹೊರಟಿರುವ ಮತಾಂತರ ನಿಷೇಧ ಕಾಯ್ದೆಯನ್ನು ಹಿಂಪಡೆಯಬೇಕು ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಪ್ರಸ್ತಾಪಿಸಿರುವ ಕ್ರೆöÊಸ್ತ ಧಾರ್ಮಿಕ ಸಂಸ್ಥೆಯ ಗಣತಿ ಕಾರ್ಯವನ್ನು ಕೈಬಿಡಬೇಕೆಂದು ಸಮಸ್ತ ಕ್ರೈಸ್ತ ಬಾಂಧವರ ಪರವಾಗಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುತ್ತಿರುವುದಾಗಿ ತುಮಕೂರು ಕ್ಷೇತ್ರದ ಸಿಎಸ್‌ಐ ಸಭೆಗಳ ಕ್ಷೇತ್ರಾಧ್ಯಕ್ಷರಾದ ಮನೋಜ್ ಕುಮಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಇಂದು ಎಲ್ಲಾ ಕ್ರೆöÊಸ್ತ ಬಾಂಧವರು ಸಿಎಸ್‌ಐ ವಕೇಷನಲ್ ಚರ್ಚ್ನಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಮೌನ ಮೆರವಣಿಗೆ ನಡೆಸಿ,ಸರಕಾರಕ್ಕೆ ಮನವಿ ಸಲ್ಲಿಸುವ ಕಾರ್ಯ ಮಾಡಲಿದ್ದೇವೆ ಎಂದರು.
ಇತ್ತೀಚಿನ ದಿನಗಳಲ್ಲಿ ಮತಾಂತರದ ಹೆಸರಿನಲ್ಲಿ ಕ್ರೈಸ್ತರ ಮೇಲಿನ ದಬ್ಬಾಳಿಕೆ,ದೌರ್ಜನ್ಯಗಳು ಮಿತಿಮೀರಿವೆ.ಒಂದೆರಡು ಘಟನೆಗಳನ್ನು ಮುಂದಿಟ್ಟುಕೊAಡು,ಅಪಟ್ಟ ಭಾರತೀಯರಾಗಿರುವ ಕ್ರಿಶ್ಚಿಯನ್ ಸಮುದಾಯವನ್ನು ಅಸ್ಪೃಷ್ಯರಂತೆ ಕಾಣುತ್ತಿದೆ ಇದನ್ನು ನಾವು ಖಂಡಿಸುತ್ತೇವೆ ಎಂದರು.
ಭಾರತದ ಸಂವಿಧಾನದಲ್ಲಿ ಓರ್ವ ವ್ಯಕ್ತಿ ಸ್ವಯಂ ಪ್ರೇರಣೆಯಿಂದ ಯಾವುದೇ ಮತವನ್ನು ಸ್ವೀಕರಿಸಲು ಅವಕಾಶವಿದೆ.ಧಾರ್ಮಿಕ ಕೇಂದ್ರಗಳನ್ನು ತೆರದು ಶಾಂತಿಯುತವಾಗಿ ನಡೆಸಿಕೊಂಡು ಹೋಗಲು ಅವಕಾಶ ನೀಡಲಾಗಿದೆ.ಹಾಗಿದ್ದಾಗ್ಯೂ ಕೂಡ, ಮತಾಂತರ ನಿಷೇಧ ಕಾಯ್ದೆಯ ಅಗತ್ಯವಿದೆ. ಇದು ಸಂವಿಧಾನ ವಿರೋಧಿಯಲ್ಲವೇ ಎಂಬುದು ಸಮಸ್ತ ಕ್ರಿಶ್ಚಿಯನ್ನರ ಪ್ರಶ್ನೆಯಾಗಿದೆ.ಕ್ರೈಸ್ತ ಸಮುದಾಯ ದೇಶದ ಭದ್ರತೆಗೆ ಎಂದಿಗೂ ಭಂಗ ತಂದಿಲ್ಲ.ಬಲವಂತದ ಮತಾಂತರವಿದ್ದರೆ ಕ್ರಮ ಕೈಗೊಳ್ಳಿ ಅದಕ್ಕೆ ಸಮುದಾಯದ ತಕರಾರು ಇಲ್ಲ. ಆದರೆ ಸ್ವಯಂ ಪ್ರೇರಿತರಾಗಿ ಮತಾಂತರ ಹೊಂದಿದಾಗ ತಡೆಯುವುದು ಸಂವಿಧಾನ ಬಾಹಿರವಾಗುತ್ತದೆ ಎಂಬುದು ನಮ್ಮ ಆಭಿಪ್ರಾಯವಾಗಿದೆ ಎಂದು ಮನೋಜ್‌ಕುಮಾರ್ ತಿಳಿಸಿದರು.
ಮಾಜಿ ಸಚಿವರು, ಶಾಸಕರು ಆಗಿರುವ ಗೂಳಿಹಟ್ಟಿ ಶೇಖರ್ ಅವರ ತಾಯಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿಲ್ಲ. ಅವರೇ ಮಾಧ್ಯಮಗಳ ಮುಂದೆ ಹೇಳಿರುವಂತೆ ತಮ್ಮ ಕಷ್ಟು ನಿವಾರಣೆಯಾದ ಹಿನ್ನಲೆಯಲ್ಲಿ ಕೈಸ್ತನ ಅನುಯಾಯಿಯಾಗಿದ್ದಾರೆ.ಮೊದಲು ಶಾಸಕರು ತಮ್ಮ ತಾಯಿಯನ್ನು ಭೇಟಿಯಾಗಿ ಮಾತನಾಡಲಿ, ನಿಜಾಂಶ ತಿಳಿಯತ್ತದೆ. ಅದನು ಬಿಟ್ಟು ಜನರಿಗೆ ತಪ್ಪು ಭಾವನೆ ಬರುವಂತೆ ನಡೆದುಕೊಳ್ಳುವುದು ಶೋಭೆ ತರುವುದಿಲ್ಲ.ಕ್ರೈಸ್ತರು ಸೇವೆಗೆ ಹೆಸರಾದವರು, ಮತಾಂತರವೇ ನಮ್ಮ ಗುರಿಯಾಗಿದ್ದರೆ, ಒಟ್ಟಾರೆ ಭಾರತದ ಜನಸಂಖ್ಯೆಯ ಶೇ1.08ರ ಮಾತ್ರ ಇರುತಿರಲಿಲ್ಲ ಎಂದರು.
ಮೊದಲ ಹಂತದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವ ಕೆಲಸ ನಡೆಯಲಿದೆ. ಎರಡನೇ ಹಂತದಲ್ಲಿ ರಾಜ್ಯಧಾನಿಯಲ್ಲಿ ಬೃಹತ್ ಮೆರವಣಿಗೆಯ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು. ತದನಂತರ ದೆಹಲಿ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.ಮತಾಂತರ ನಿಷೇದ ಕಾಯ್ದೆ ಹಿಂಪೆಡಯುವವರೆಗೂ ಹೋರಾಟ ಮುಂದುವರೆಯಲಿದೆ ಎಂದು ಮನೋಜ್‌ಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿ ನಂತರ ಮೌನ ಮೆರವಣಿಗೆಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.ಈ ವೇಳೆ ರೋಮನ್ ಕ್ಯಾತಲಿಕ್ ಚರ್ಚ್ಗಳ ಮುಖ್ಯಸ್ಥರಾದ ಜೇಮ್ಸ್ ಪ್ರಭು, ಸ್ವತಂತ್ರ ಚರ್ಚ್ನ ಜಾಯ್‌ಕುಟ್ಟಿ, ವಿವಿಧ ಶಾಲಾ ಕಾಲೇಜುಗಳ ಮುಖ್ಯಸ್ಥರು, ನನ್‌ಗಳು ಉಪಸ್ಥಿತರಿದ್ದರು.