ಬಿಜೆಪಿ ವ್ಯಕ್ತಿ ಕೇಂದ್ರೀತ ಪಕ್ಷವಲ್ಲ, ತತ್ವ ಸಿದ್ದಾಂತಗಳಿಗೆ ಮೊದಲ ಆದ್ಯತೆ : ಕ್ಯಾಪ್ಟನ್ ಗಣೇಶ್ ಕಾರ್ಣಿಕ್

ತುಮಕೂರು : ಬಿಜೆಪಿ ಪಕ್ಷ ವ್ಯಕ್ತಿ ಕೇಂದ್ರೀತವಲ್ಲ.ತತ್ವ ಸಿದ್ದಾಂತಗಳಿಗೆ ಮೊದಲ ಆದ್ಯತೆ ನೀಡುತ್ತದೆ ಎಂದು ಬಿಜೆಪಿ ರಾಜ್ಯ ವಕ್ತಾರರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ತಿಳಿಸಿದ್ದಾರೆ.
ನಗರದ ಕನ್ನಡ ಭವನದಲ್ಲಿ ಭಾರತೀಯ ಜನತಾ ಪಾರ್ಟಿ,ತುಮೂರು ಜಿಲ್ಲೆಯವತಿಯಿಂದ ಸೇವಾ ಮತ್ತು ಸಮರ್ಪಣಾ ಅಭಿಯಾನದ ಅಂಗವಾಗಿ ಆಯೋಜಿಸಿದ್ದ ಸೇವಾ ಯಜ್ನದಲ್ಲಿ ಸಮರ್ಪಿತ ಜೀವನ ಎಂಬ ವಿಚಾರ ಸಂಕಿರಣದಲ್ಲಿ ಸೇವಾ ಯಜ್ಞದಲ್ಲಿ ಸಮರ್ಪಿತ ಜೀವನ ಎಂಬ ವಿಷಯ ಕುರಿತು ಮಾತನಾಡಿದ ಅವರು, ಕಳೆದ ಏಳು ವರ್ಷಗಳಲ್ಲಿ ಭಾರತ ಬದಲಾಗುತ್ತಿದ್ದು,ಭಾರತೀಯ ವಿಚಾರಧಾರೆಗಳಿಗೆ ಮನ್ನಣೆ ದೊರೆಯುತ್ತಿದೆ ಎಂದರು.
ಕಳೆದ ಎಪತೈದು ವರ್ಷಗಳಲ್ಲಿ ಹಿರಿಯರು ಕಂಡ ಕನಸು ನನಸಾಗುತ್ತಿದೆ.ಸಮಾಜದ ಅಭಿವೃದ್ದಿಯಲ್ಲಿ ನನ್ನ ಅಭಿವೃದ್ದಿ ಎಂಬ ಹಿನ್ನೇಲೆಯಲ್ಲಿ ಕಳೆದ 75 ವರ್ಷಗಳಲ್ಲಿ ಛಿದ್ರಗೊಂಡ ಸಮಾಜವನ್ನು ಒಂದುಗೂಡಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಹಳ್ಳಿಗಳಿಗೆ ಕುಡಿಯುವ ನೀರು, ರಸ್ತೆ, ವಿದ್ಯುತ್ ಸೇರಿದಂತೆ ಹಲವು ಸೌಲಭ್ಯಗಳು ಕಳೆದ ಏಳು ವರ್ಷಗಳಲ್ಲಿ ದೊರೆತ್ತಿವೆ.ಇಡೀ ಭಾರತವನ್ನು ನನ್ನ ಪರಿವಾರ ಎಂಬ ದೃಷ್ಟಿಯಿಂದ ಬಿಜೆಪಿ ನೋಡುತ್ತಿದೆ.ಸೇವೆಗೆ ಮತ್ತೊಂದು ಹೆಸರೇ ನರೇಂದ್ರಮೋದಿ ಎಂದು ಕ್ಯಾಪ್ಟನ್ ಗಣೇಶ್ ಕಾರ್ಣಿಕ ತಿಳಿಸಿದರು.
ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ಮಾತನಾಡಿ,ಜನಸಂಘದಿಂದ ಇಂದಿನ ರವರೆಗೆ ಬಿಜೆಪಿಪಕ್ಷ ಅಧಿಕಾರದಲ್ಲಿ ಇರಲಿ,ಇಲ್ಲದಿರಲಿ ರಾಷ್ಟ್ರೀಯತೆಯ ವಿಚಾರದಲ್ಲಿ ಎಂದಿಗೂ ರಾಜಿ ಮಾಡಿಕೊಂಡಿಲ್ಲ,ಬಂಡವಾಳಶಾಹಿ,ಎಡಪಂಕ್ತೀಯ ವಿಚಾರಗಳಿಗೆ ಬದಲಾಗಿ ಪಂಡಿತ ದೀನ ದಯಾಳ್ ಉಪಾಧ್ಯಾಯ ಅವರು ನೀಡಿದ ಸಮತೋಲನ ಸಿದ್ದಾಂತದ ಮೇಲೆ ಪ್ರತಿಯೊಬ್ಬರಿಗೂ ಸೌಲಭ್ಯ ದೊರೆಯಬೇಕು ಎಂಬ ಮೂಲ ಆಶಯವನ್ನು ಬಿಜೆಪಿ ಹೊಂದಿದೆ.ಇಂದು ದೇಶದ ಐಕ್ಯತೆ ಮತ್ತು ಸಮಗ್ತತೆಯ ಉಳಿವಿಗಾಗಿ ಇರುವ ಏಕೈಕ ಆಯ್ಕೆ ಎಂದರೆ ಅದು ಬಿಜೆಪಿ ಮಾತ್ರ.ಹಾಗಾಗಿ ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರು ಮೋದಿ ಅವರ ಕೈ ಬಲಪಡಿಸುವ ಕೆಲಸವನ್ನು ಮಾಡಬೇಕಾಗಿದೆ ಎಂದು ಶಾಸಕ ಜೋತಿಗಣೇಶ್ ತಿಳಿಸಿದರು
ಪ್ರಸ್ತಾವಿಕ ನುಡಿಗಳನ್ನಾಡಿದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಂಪಿಗೆ ಶ್ರೀಧರ್,ರಾಷ್ಟ್ರೀಯತೆ ಎಂಬ ವಿಚಾರವನ್ನು ತನ್ನ ಪ್ರಮುಖ ಅಂಶವಾಗಿಟ್ಟುಕೊಂಡು 1956ರಿಂದಲೂ ಕಾರ್ಯನಿರ್ವಹಿಸುತ್ತಿರುವ ಪಕ್ಷ ನಮ್ಮದಾಗಿದೆ.ಜನಸಂಘದಲ್ಲಿ ಕೊಂಚ ಹಿನ್ನೆಡೆ ಯಾದರೂ,ಬಿಜೆಪಿ ಪಕ್ಷ ಕಟ್ಟಿದ ನಂತರ ಇಡೀ ಭಾರತವನ್ನು ತಲುಪಲು ಸಾಧ್ಯವಾಗಿದೆ.ಅಡ್ವಾಣಿ, ಅಟಲ್‌ಜೀ ಅವರ ಕನಸುಗಳನ್ನು ನರೇಂದ್ರಮೋದಿ ಮತ್ತು ಅಮಿತ್ ಷಾ ನನಸು ಮಾಡುತ್ತಿದ್ದಾರೆ.ಅವರ ಹುಟ್ಟಿದ ದಿನವನ್ನು ಸೇವಾ ಮತ್ತು ಸಮರ್ಪಣಾ ಅಭಿಯಾನದ ಹೆಸರಿನಲ್ಲಿ 20 ದಿನಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ಉಪಾಧಕ್ಷ ಪಾವಗಡ ರವಿ ವಹಿಸಿದ್ದರು. ವೇದಿಕೆಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ಬಿ.ನಂದೀಶ್, ಜಿಲ್ಲಾ ಉಪಾಧ್ಯಕ್ಷ ಸಂಪಿಗೆ ಶ್ರೀಧರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.