ಪ್ರಿಯಾಂಕಗಾಂಧಿ ಬಂಧನ : ಯುವ ಕಾಂಗ್ರೆಸ್ ಪ್ರತಿಭಟನೆ

ತುಮಕೂರು : ಉತ್ತರ ಪ್ರದೇಶದಲ್ಲಿರುವ ಯೋಗಿ ಆದಿತ್ಯನಾಥ್ ಅವರು ಗೂಂಡಾರಾಜ್ಯ ನಡೆಸುತ್ತಿದ್ದು, ಬಿಜೆಪಿ ದುರಾಡಳಿತ ನಡೆಸುತ್ತಿದ್ದು, ರೈತರಿಗೆ ಸಾಂತ್ವಾನ ಮಾಡಲು ಹೋಗುತ್ತಿದ್ದ ಪ್ರಿಯಾಂಕ ಗಾಂಧಿ ಅವರನ್ನು ಬಂಧಿಸಿರುವ ಬಿಜೆಪಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸುವುದಾಗಿ ಯುವ ಕಾಂಗ್ರೆಸ್ ಅಧ್ಯಕ್ಷ ಶಶಿಹುಲಿಕಲ್‌ಮಠ್ ಎಚ್ಚರಿಕೆ ನೀಡಿದರು.
ನಗರದ ಟೌನ್‌ಹಾಲ್‌ವೃತ್ತದಲ್ಲಿ ಸೋಮವಾರ ಸಂಜೆ ಯುವಕಾಂಗ್ರೆಸ್ ಕಾರ್ಯಕರ್ತರು ಪ್ರಿಯಾಂಕಗಾಂಧಿ ಬಂಧನ ವಿರೋಧಿಸಿ ಯೋಗಿ ಆದಿತ್ಯನಾಥ್ ಪ್ರತಿಕೃತಿ ಎದುರು ಕ್ಯಾಡಲ್ ಹಚ್ಚಿ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಉತ್ತರ ಪ್ರದೇಶದಲ್ಲಿ ರೈತ ವಿರೋಧಿ ಕಾನೂನುಗಳ ಜಾರಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಯೋಗಿಆದಿತ್ಯನಾಥ್‌ನ ಗೂಂಡಾಗಳು ಕಾರು ಹತ್ತಿಸಿ ಮೂವರನ್ನು ಕೂಲೆ ಮಾಡಿದ್ದಾರೆ. ಉತ್ತರ ಪ್ರದೇಶದಲ್ಲಿ ಯಾವುದೇ ಕಾನೂನು, ಸಂವಿಧಾನ ಇಲ್ಲ ಇರುವುದೆಲ್ಲ, ಆದಿತ್ಯನಾಥ್‌ನ ಗೂಂಡಾ ಕಾನೂನುಗಳು ಎಂದು ಆರೋಪಿಸಿದರು.
ರೈತರ ಮೇಲೆ ಕಾರು ಹತ್ತಿಸಿದ ಉತ್ತರ ಪ್ರದೇಶದ ಲಕ್ಕೀಪುರಕ್ಕೆ ಹೋಗುತ್ತಿದ್ದ ಪ್ರಿಯಾಂಕಗಾಂಧಿ ಅವರನ್ನು ಏಕಾಏಕಿ, ಯಾವುದೇ ಸೂಚನೆಗಳನ್ನು ನೀಡದೇ ಬಂಧಿಸಿರುವುದು ಅಕ್ರಮವಾಗಿದ್ದು, ರೈತರನ್ನು ಭೇಟಿ ಮಾಡಲು ಯಾವುದೇ ನಿರ್ಬಂಧಗಳಿಲ್ಲದೇ ಇದ್ದರು, ಪೊಲೀಸರು ಅಡ್ಡಿಯುಂಟು ಮಾಡಿ ಬಂಧಿಸಿರುವುದು ಖಂಡನೀಯ, ಇಡೀ ದೇಶದಲ್ಲಿರುವ ಬಿಜೆಪಿ ಗೂಂಡಾಗಳಿಗೆ ತಕ್ಕ ಪಾಠ ಕಲಿಸಲು ಕಾಂಗ್ರೆಸ್ ಮುಂದಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಮಹಿಳೆಯರು, ರೈತರು, ದೇಶದ ಬಗ್ಗೆ ಅಸಡ್ಡೆ ಮನೋಭಾವವನ್ನು ಹೊಂದಿರುವ ಮೋದಿ, ಶಾ, ಆದಿತ್ಯನಾಥ್ ಅಂತವರಿಗೆ ಯುವ ಕಾಂಗ್ರೆಸ್, ಕಾಂಗ್ರೆಸ್ ಬುದ್ಧಿಕಲಿಸಲಿದ್ದು, ರಾಜ್ಯದಲ್ಲಿರುವ ಇಂಧನ ಸಚಿವ ಸುನೀಲ್‌ಕುಮಾರ್, ಕಾಂಗ್ರೆಸ್ ಶಾಸಕಿಯರು ರಾತ್ರಿ ಸಂಸ್ಕೃತಿಯಿಂದ ಬಂದವರು ಎಂದು ಹೇಳಿದ್ದಾರೆ, ಬಿಜೆಪಿ ಪಕ್ಷದವರು ಏನು ಮಾಡಿದ್ದಾರೆ ಎನ್ನುವುದು ಇಡೀ ರಾಜ್ಯಕ್ಕೆ ಗೊತ್ತಿರುವ ವಿಚಾರವಾಗಿದೆ ಎಂದು ವ್ಯಂಗ್ಯವಾಡಿದರು.
ಬಿಜೆಪಿ ಮುಖಂಡರು ಮುತ್ತಿಕ್ಕಿದ್ದು, ಬೇರೆಯವರೊಂದಿಗೆ ಅನೈತಿಕ ಸಂಬಂಧ ಹೊಂದಿರುವುದು, ಸದನದಲ್ಲಿಯೇ ನೀಲಿ ಚಿತ್ರ ವೀಕ್ಷಣೆ ಮಾಡಿರುವುದನ್ನು ರಾಜ್ಯದ ಜನ ಮರೆತಿಲ್ಲ, ಕಾಂಗ್ರೆಸ್ ಪಕ್ಷದ ಶಾಸಕಿಯರ ಬಗ್ಗೆ ಮಾತನಾಡುವಾಗ ನಾಲಿಗೆ ಹರಿಯಬಿಟ್ಟರೆ, ಬಿಜೆಪಿ ಬಂಡಾವಾಳ ಬಯಲಾಗಲಿದೆ, ಬಿಜೆಪಿಗೆ ಮಹಿಳೆಯರ ಬಗ್ಗೆ ಇರುವ ಅಸಡ್ಡೆಗೆ ಇದು ಉದಾಹರಣೆ ಆಗಿದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಆಟೋರಾಜು, ಮೆಹಬೂಬ್‌ಪಾಷ, ಯುವ ಕಾಂಗ್ರೆಸ್ ಪ್ರಧಾನಕಾರ್ಯದರ್ಶಿ ಅನಿಲ್‌ಕುಮಾರ್, ಜಿಲ್ಲಾ ಉಪಾಧ್ಯಕ್ಷ ಮೋಹನ್‌ಕುಮಾರ್, ನಗರ ಉಪಾಧ್ಯಕ್ಷ ಅರ್ಮಾನ್, ಶಾನು, ಸಕ್ಕು, ಗ್ರಾಮಾಂತರದ ಇರ್ಫಾನ್, ಆಕಾಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.