ತುಮಕೂರು : ಕುಣಿಗಲ್ ಪುರಸಭೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಲ್ಯಾಣ, ವಿಕಲಚೇತನರ ಕಲ್ಯಾಣ, ಇತರೆ ಬಡಜನರ ಕಲ್ಯಾಣ ಯೋಜನೆಯಡಿ ಪ್ರೋತ್ಸಾಹಧನ ಹಾಗೂ ಸಹಾಯಧನ ಕಲ್ಪಿಸಲು ಅರ್ಹರಿಂದ ಅರ್ಜಿ ಆಹ್ವಾನಿಸಿದೆ.
ಕುಣಿಗಲ್ ಪಟ್ಟಣ ವ್ಯಾಪ್ತಿಯಲ್ಲಿ ಸರ್ಕಾರಿ ಶಾಲಾ/ಕಾಲೇಜು/ಸರ್ಕಾರಿ ವೃತ್ತಿಪರ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ/ಪಂಗಡದ ಹಾಗೂ ಇತರೆ ಬಡಜನರ ವಿಧ್ಯಾರ್ಥಿಗಳ ವಿಧ್ಯಾಭ್ಯಾಸಕ್ಕಾಗಿ ಪ್ರೋತ್ಸಾಹಧನ ಹಾಗೂ ಪರಿಶಿಷ್ಟ ಜಾತಿ/ವಿಕಲಚೇತನ ಸಣ್ಣ ಉದ್ದಿಮೆದಾರರು ಮತ್ತು ಪರಿಶಿಷ್ಟ ಪಂಗಡ/ ಇತರೆ ಬಡಜನರು ತಮ್ಮ ಮನೆಯ ಮೇಲ್ಚಾವಣಿ ದುರಸ್ಥಿ/ಇತರೆ ಸಾಮಾಗ್ರಿಗಳ ಖರೀದಿಗೆ ಸಹಾಯಧನ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ.
ಆಸಕ್ತರು ನಿಗಧಿತ ಅರ್ಜಿ ನಮೂನೆಯನ್ನು ಪುರಸಭೆಯಲ್ಲಿ ಪಡೆದು ಆಧಾರ್‌ಕಾರ್ಡ್, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ವಾಸಸ್ಥಳ ದೃಢೀಕರಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಇತ್ತೀಚಿನ 2 ಭಾವಚಿತ್ರ, ಬ್ಯಾಂಕ್ ಪಾಸ್ ಪುಸ್ತಕ, ವ್ಯಾಸಂಗ ದೃಢೀಕರಣ ಪತ್ರ(ಅನ್ವಯಿಸಿದ್ದಲ್ಲಿ ಮಾತ್ರ), ವಿಕಲಚೇತನ ಪ್ರಮಾಣ ಪತ್ರ (ಅನ್ವಯಿಸಿದ್ದಲ್ಲಿ ಮಾತ್ರ), ಚಾಲ್ತಿ ಸಾಲಿನ ನಮೂನೆ-03 (ಅನ್ವಯಿಸಿದ್ದಲ್ಲಿ ಮಾತ್ರ) ಹಾಗೂ ಉದ್ದಿಮೆದಾರರಾಗಿದ್ದರೆ ಅಂಗಡಿ ಫೋಟೋ (ಅನ್ವಯಿಸಿದ್ದಲ್ಲಿ ಮಾತ್ರ) ಮತ್ತಿತರ ದಾಖಲೆಗಳನ್ನು ಭರ್ತಿ ಮಾಡಿದ ಅರ್ಜಿಯೊಂದಿಗೆ ಲಗತ್ತಿಸಿ ಸೆಪ್ಟೆಂಬರ್ 23ರೊಳಗಾಗಿ ಪುರಸಭೆ ಕಾರ್ಯಾಲಯಕ್ಕೆ ಸಲ್ಲಿಸಬೇಕು.
ವಿವಿಧ ಸಾಲಸೌಲಭ್ಯ:-
ಕುಣಿಗಲ್ ಪುರಸಭೆಯು ಸ್ವಯಂ ಉದ್ಯೋಗ ಯೋಜನೆಯಡಿ 18 ರಿಂದ 35 ವರ್ಷ ವಯೋಮಿತಿಯೊಳಗಿನ ನಿರುದ್ಯೋಗ ಯುವಕ/ಯುವತಿಯರಿಗೆ ಸಾಲ ಸೌಲಭ್ಯ ಒದಗಿಸಲು, ಸ್ವ-ಸಹಾಯ ಸಂಘಗಳನ್ನು ರಚಿಸಲು ಹಾಗೂ ಈಗಾಗಲೇ ರಚಿತವಾಗಿರುವ ಸ್ವ-ಸಹಾಯ ಗುಂಪುಗಳಿಗೆ ಸಾಲ ಸೌಲಭ್ಯ ನೀಡಲು ಮತ್ತು ಬೀದಿ ಬದಿ ವ್ಯಾಪಾರಸ್ಥರುಗಳಿಗೆ ಗುರುತಿನ ಚೀಟಿ ನೀಡಲು ಅರ್ಹರಿಂದ ಅರ್ಜಿ ಆಹ್ವಾನಿಸಿದೆ.
ಆಸಕ್ತರು ಪುರಸಭೆ ಕಾರ್ಯಾಲಯದಲ್ಲಿ ನಿಗಧಿತ ಅರ್ಜಿ ಪಡೆದು ಆಧಾರ್‌ಕಾರ್ಡ್, ರೇಷನ್‌ಕಾರ್ಡ್, ಮತದಾರರ ಗುರುತಿನ ಚೀಟಿ, ವಿದ್ಯಾರ್ಹತೆ ಪ್ರಮಾಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಪಾಸ್‌ಪುಸ್ತಕ, ವ್ಯಾಪಾರಿಗಳಾಗಿದ್ದರೆ ಉದ್ದಿಮೆ ಪರವಾನಗಿ, ಅಂಗಡಿ ಫೋಟೋ ಹಾಗೂ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ 3 ಭಾವಚಿತ್ರಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ಸೆಪ್ಟೆಂಬರ್ 23ರೊಳಗೆ ಪುರಸಭೆ ಕಾರ್ಯಾಲಯಕ್ಕೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಯೋಜನಾ ಶಾಖೆಯ ವಿಷಯ ನಿರ್ವಾಹಕರನ್ನು ಸಂಪರ್ಕಿಸಬಹುದಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಕೆ.ಪಿ. ರವಿಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.