ಪಾವಗಡ : ವಿವಿದತೆಯಲ್ಲಿ ಏಕತೇಯನ್ನ ಖಂಡಿರುವ ಭಾರತ ದೇಶದಲ್ಲಿ ಹಲವಾರು ಭಾಷೆಗಳಿದ್ದರು ಸೆಷ್ಟಂಬರ್ 14 ದೇಶದಾದ್ಯಂತ ಹಿಂದಿದಿವಸ್ ಆಚರಣೆ ಮಾಡುವಂತೆ ಸೂಚಿಸಿರುವ ಕೇಂದ್ರ ಸರಕಾರದ ದೋರಣೆಗೆ ನಮ್ಮ ಖಂಡನೆ ಎಂದು ಜೆಡಿಎಸ್ ತಾ,ಅಧ್ಯಕ್ಷರಾದ ಬಲರಾಮ ರೆಡ್ಡಿ ತಿಳಿಸಿದರು.
ಜೆಡಿಎಸ್ ತಾಲೂಕು ಘಟಕದ ವತಿಯಿಂದ ಮಂಗಳವಾರ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಮನವಿ ಪತ್ರ ಸಲ್ಲಿಸಿ ಬಲರಾಮರೆಡ್ಡಿ ಮಾತನಾಡಿ ಸೆಷ್ಟಂಬರ್ 14 ದೇಶದಾದ್ಯಂತ ಹಿಂದಿದಿವಸ್ ಆಚರಣೆ ಮಾಡುವಂತೆ ಕೇಂದ್ರ ಸರಕಾರ ಘೋಷಣೆ ಮಾಡಿರುವುದು ದೇಶದ ಒಕ್ಕೂಟ ವ್ಯವಸ್ಥೆಯನ್ನೇ ಬುಡಮೇಲು ಮಾಡುವಂತಾಗಿದ್ದು ಭಾರತ ದೇಶದಲ್ಲಿ ನೂರಾರು ಬಾಷೇಗಳಿವೆ ಪ್ರಾದೇಶಿಕವಾಗಿ ಹಲವು ರಾಜ್ಯಗಳಲ್ಲಿ ಪ್ರಾದೇಶಿಕ ಭಾಷೇಗಳೆ ಜೀವನಾಡಿಯಾಗಿದ್ದರು ಕೂಡ ಇಂದು ಕೇಂದ್ರ ಸರಕಾರ ದೇಶದಾದ್ಯಂತ ಸೆಷ್ಟಂಬರ್ 14 ಹಿಂದಿ ದಿವಸ್ ಆಚರಣೆಗೆ ಮುಂದಾಗಿರುವುದು ದುರಂತವೆಂದಾ ಅವರು ಸಂಪೂರ್ಣವಾಗಿ ಜೆಡಿಎಸ್ ಪಕ್ಷ ಇದನ್ನ ಖಂಡಿಸುತ್ತಿದೆ ತಕ್ಷಣವೇ ಹಿಂಪಡೆಯಬೇಕೆಂದು ಒತ್ತಾಯಿಸಿದರು.
ಮಾಜಿ ಪುರಸಭಾ ಸದಸ್ಯರಾದ ಜಿ.ಎ.ವೆಂಕಟೇಶ್ ಮಾತನಾಡಿ ಕೇಂದ್ರದ ಸರಕಾರ ಪ್ರಾದೇಶಿಕ ಭಾಷೆಗಳಿಗೆ ಆಪಮಾನ ಮಾಡುವ ನಿಟ್ಟಿನಲ್ಲಿ ಹಿಂದಿದಿವಸ್‌ಗೆ ಮುಂದಾಗಿರುವುದು ಈ ದೇಶದ ದುರಂತವೆಂದಾ ಅವರು ಜಾತ್ಯತೀತ ವ್ಯವಸ್ಥೆಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಆವಮಾನ ಮಾಡುವಂತಾಗಿದ್ದು ಪ್ರಾದೇಶಿಕ ಪಕ್ಷ ಜೆಡಿಎಸ್ ಹಿಂದಿದಿವಸ್ ಆಚರಣೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ ಎಂದರು.
ಮುಖಂಡರಾದ ನ್ಯಾಯದಗುಂಟೆ ಈರಣ್ಣ ಮಾತನಾಡಿ ಒಕ್ಕೂಟದ ರಾಷ್ಠçದಲ್ಲಿ ವಿಭಿನ್ನವಾದ ಆಚರಣೆ, ಸಾಂಪ್ರದಾಯಗಳು ಮತ್ತು ನೆಲ, ಜಲ ಅಲ್ಲಿನ ಸಂಸೃತಿಗೆ ಅನುಗುಣವಾಗಿ ಪ್ರಾದೇಶಿಕ ಭಾಷೆಗಳು ಬೆಳೆದುನಿಂತು ಸಾವಿರಾರು ವರ್ಷಗಳು ಇತಿಹಾಸವನ್ನ ಖಂಡಿರುವ ಸಮಯದಲ್ಲಿ ಕೇಂದ್ರ ಸರಕಾರ ದೇಶದಾದ್ಯಂತ ಹಿಂದಿದಿವಸ್ ಆಚರಣೆ ಮುಂದಾಗಿರುವುದನ್ನ ಜೆಡಿಎಸ್ ಪಕ್ಷ ಖಂಡಿಸಿದ್ದು ಹಿಂಪಡೆಯುವ ತನಕ ಹೋರಾಟ ನಡೆಸಲಾಗುವುದೆಂದರು.
ಹಿಂದಿದಿವಸ್ ಆಚರಣೆ ವಿರೋಧಿಸಿ ತಾ.ಜೆಡಿಎಸ್ ಘಟಕದ ವತಿಯಿಂದ ತಹಶೀಲ್ದರ್ ಕಚೇರಿಗೆ ಮುತ್ತಿಗೆ ಹಾಕಿ ಕೇಂದ್ರ ಹಾಗೂ ರಾಜ್ಯ ಸರಕಾರದ ಜೆಡಿಎಸ್ ಪದಾದಿಕಾರಿಗಳು ವಿರುದ್ದ ದಿಕ್ಕಾರ ಕೂಗಿದರು.
ಈ ಸಂದರ್ಭದಲಿ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷರಾದ ಯೂನಿಸ್, ರಾಜಶೇಖರಪ್ಪ, ಕಾವಲಗೇರೆ ರಾಮಾಂಜಿ, ಗುಟ್ಟೆಹಳ್ಳಿ ಮಣಿ, ಕೆ.ಟಿ.ನಾಗರಾಜು, ಕನ್ನಮೇಡಿ ಲೋಕೇಶ್ ಉಪಸ್ಥಿತರಿದ್ದರು.