ಜಿಲ್ಲೆತುಮಕೂರುತುಮಕೂರು ಗ್ರಾಮಾಂತರತುಮಕೂರು ನಗರಸುದ್ದಿ
Trending

ಎಡ, ಬಲ, ಎರಡು ಸಮುದಾಯಗಳು ಒಂದಾಗಿರುವುದು ಇಡೀ ದೇಶಕ್ಕೆ ಮಾದರಿ : ಡಿ.ಸಿ.ಗೌರಿಶಂಕರ್

ತುಮಕೂರಿನಲ್ಲಿ ಛಲವಾದಿ, ಆದಿಜಾಂಭವ ವಸತಿಹೀನ ಹಾಗೂ ಕೃಷಿ ಭೂಮಿ ರಹಿತರ ಕ್ಷೇಮಾಭಿವೃದ್ದಿ ಸಂಘ(ರಿ) ಅಸ್ಥಿತ್ವಕ್ಕೆ

ತುಮಕೂರು: ಎಡ,ಬಲದ ಹೆಸರಿನಲ್ಲಿ ತಮ್ಮೊಳಗೆ ಕಂದಕ ಸೃಷ್ಟಿಸಿಕೊಂಡಿದ್ದ ಪರಿಶಿಷ್ಟ ಜಾತಿಯ ಅಸ್ಪೃಷ್ಯ ಸಮುದಾಯಗಳು, ತಮ್ಮ ಹಕ್ಕುಗಳಿಗಾಗಿ ಹೋರಾಟ ನಡಸಲು ಒಂದೇ ವೇದಿಕೆ ಅಡಿಯಲ್ಲಿ ಹೊರಟಿರುವುದು ಇತರೆ ಸಮುದಾಯಗಳಿಗೆ ಮಾದರಿಯಾಗಿದೆ ಎಂದು ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಕನ್ನಡ ಭವನದಲ್ಲಿ ಛಲವಾದಿ, ಆದಿಜಾಂಭವ ವಸತಿಹೀನ ಹಾಗೂ ಕೃಷಿ ಭೂಮಿ ರಹಿತರ ಕ್ಷೇಮಾಭಿವೃದ್ದಿ ಸಂಘ(ರಿ) ಇದರ ಉದ್ಘಾಟನೆ ನೆರವೇರಿಸಿ ಮಾತನಾಡುತಿದ್ದ ಅವರು,ಪಂಗಡ,ಉಪಪAಗಡದ ಹೆಸರಿನಲ್ಲಿ ಹರಿದು ಹಂಚಿ ಹೋಗಿದ್ದ, ಅವರನ್ನು ಒಂದು ಮಾಡುವುದೇ ದೊಡ್ಡ ಸವಾಲಾಗಿದೆ.ಇಂತಹ ಸಂದರ್ಭದಲ್ಲಿ ಶತ ಶತಮಾನಳಿಂದ ಶೋಷಣೆಗೆ ಒಳಗಾಗಿದ್ದರೂ ಕೆಲವರು ಉರುಳಿಸಿದ ದಾಳಕ್ಕೆ ಬಲಿಯಾಗಿ,ಹಂತ ಹಂತವಾಗಿ ತಮ್ಮ ಎಲ್ಲಾ ಅಧಿಕಾರಗಳಿಂದ ವಂಚಿತ ವಾಗುತ್ತಿದ್ದ ಎಡ, ಬಲ ಸಮುದಾಯಗಳು ಒಂದಾಗಿರುವುದು ಇಡೀ ದೇಶಕ್ಕೆ ಒಂದು ಸ್ಪಷ್ಟ ಸಂದೇಶವನ್ನು ನೀಡಿದೆ ಎಂದರು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಮನುಷ್ಯನ ಎಲ್ಲಾ ಸಮಸ್ಯೆಗಳಿಗೆ ಪರಿಹಾರದ ಕೀಲಿ ಕೈ ಶಿಕ್ಷಣ ಎಂದಿದ್ದರು. ಜೊತೆಗೆ ಶಿಕ್ಷಣ ರಾಜಕೀಯ ಅಧಿಕಾರ ಪಡೆಯಲು ಅನುಕೂಲವಾಗಬೇಕೆಂಬ ಕನಸು ಹೊಂದಿದ್ದರು. ಡಾ.ಬಿ.ಆರ್.ಅಂಬೇಡ್ಕರ್, ಬಾಬು ಜಗಜೀವನ್‌ರಾಂ,ಪ್ರೊ.ಬಿ.ಕೃಷ್ಣಪ್ಪ ಇವರೆಲ್ಲರ ಕನಸು ನನಸಾಗಬೇಕೆಂದರೆ ಈ ರಾಜ್ಯಕ್ಕೆ ಡಾ.ಜಿ.ಪರಮೇಶ್ವರ್ ಸೇರಿದಂತೆ ದಲಿತರೊಬ್ಬರು ಮುಖ್ಯಮಂತ್ರಿ ಯಾಗಿ ಅಧಿಕಾರ ವಹಿಸಿಕೊಳ್ಳುವಂತಾಗಬೇಕು.ಈ ನಿಟ್ಟಿನಲ್ಲಿ ನಿಮ್ಮಗಳ ಹೋರಾಟಕ್ಕೆ ನನ್ನ ಬೆಂಬಲವಿದೆ ಎಂದು ಶಾಸಕ ಡಿ.ಸಿ.ಗೌರಿಶಂಕರ್ ತಿಳಿಸಿದರು.
ತುಮಕೂರು ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಡಾ.ಬಿ.ಆರ್. ಅಂಬೇಡ್ಕರ್,ಬಾಬು ಜಗಜೀವನ್ ರಾಂ ಪತ್ಥಳಿ ಆನಾವರಣಗೊಳ್ಳಬೇಕೆಂಬ ನಿಮ್ಮ ಬೇಡಿಕೆಗೆ ನನ್ನ ಸಂಪೂರ್ಣ ಸಹಮತವಿದೆ.9 ತಿಂಗಳ ಹಿಂದೆಯೇ ನಮ್ಮ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ.ದೇವೆಗೌಡರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇನೆ.ನಿಮ್ಮ ಜೊತೆಗೆ ನಾನು ಕುಳಿತು ಹೋರಾಟ ನಡಸುತ್ತೇನೆ.ಅಲ್ಲದೆ ಪುತ್ಥಳಿ ನಿರ್ಮಾಣಕ್ಕೆ 10 ಲಕ್ಷ ರೂಗಳ ಧೇಣಿಗೆ ನೀಡುವುದಾಗಿ ಭರವಸೆಯನ್ನು ಶಾಸಕ ಡಿ.ಸಿ.ಗೌರಿಶಂಕರ್ ನೀಡಿದರು.
ದೂರವಾಣಿ ಮೂಲಕ ಕಾರ್ಯಕ್ರಮಕ್ಕೆ ಶುಭ ಹಾರೈಸಿದ ಮಾಜಿ ಉಪಮುಖ್ಯಮಂತ್ರಿ ಹಾಗೂ ಕೊರಟಗೆರೆ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್,ಎಡ, ಬಲಗಳು ಒಂದು ವೇದಿಕೆಯಡಿ ಬರುವುದು ಇಂದಿನ ತುರ್ತು ಅಗತ್ಯವಾಗಿತ್ತು. ಈ ನಿಟ್ಟಿನಲ್ಲಿ ತುಮಕೂರಿನ ಯುವಜನರು ಹೆಜ್ಜೆ ಇರಿಸಿರುವುದು ಸ್ವಾಗರ್ತಾಹ ಬೆಳವಣಿಗೆ, ಶೋಷಿತರ ನಡುವೆಯೇ ಈ ರೀತಿಯ ವಿಭಾಗಗಳು ಏಕಾದವು ಎಂಬುದು ನಿಜಕ್ಕೂ ಯಕ್ಷಪ್ರಶ್ನೆಯಾಗಿದೆ.ಇಂತಹ ಬೇಲಿಯನ್ನು ಕಿತ್ತೊಗೆಯಬೇಕಿದೆ.ಈ ನಿಟ್ಟಿನಲ್ಲಿ ನಿರಂತರ ನಿಮ್ಮ ಬೆಂಬಲಕ್ಕೆ ನಿಲ್ಲುವುದಲ್ಲದೆ, ನಿಮ್ಮ ಹೋರಾಟದಲ್ಲಿ ಭಾಗವಹಿಸುತ್ತೇನೆ ಎಂದು ಶುಭ ಕೋರಿದರು.
ತುಮಕೂರು ನಗರ ಶಾಸಕ ಜೋತಿಗಣೇಶ್ ಮಾತನಾಡಿ, ಇದೊಂದು ಜಾತ್ಯಾತೀತ, ಪಕ್ಷಾತೀತ ಕಾರ್ಯಕ್ರಮ ಒಂದು ಒಳ್ಳೆಯ ಉದ್ದೇಶ ಇಟ್ಟುಕೊಂಡು ಹೊರಟಿದ್ದಾರೆ.ವಸತಿ ಹೀನ, ಕೃಷಿ ಭೂಮಿ ರಹಿತ ಛಲವಾದಿ, ಆದಿಜಾಂಭವ ಸಮುದಾಯದ ಜನರಿಗೆ ನ್ಯಾಯ ಕೊಡಿಸಬೇಕೆಂಬ ನಿಮ್ಮ ಉದ್ದೇಶಕ್ಕೆ ನನ್ನ ಬೆಂಬಲವಿದೆ.ತುಮಕೂರು ನಗರದಲ್ಲಿ ವಸತಿಹೀನರಿಗೆ ಮನೆ ನಿರ್ಮಿಸಿ ಕೊಡಲು 17ಎಕರೆ ಜಾಗ ಗುರುತಿಸಿದ್ದು,ಡಿಮೆಂಡ್ ಸರ್ವೆ ಕಾರ್ಯಕ್ಕೆ ಅರ್ಜಿ ಆಹ್ವಾನಿಸಲಾಗುವುದು. ಆಗ ನೀವುಗಳು ನಿಮ್ಮ ಅಕ್ಕಪಕ್ಕದ ಆರ್ಹರೊಂದಿಗೆ ಅರ್ಜಿ ಸಲ್ಲಿಸಿದರೆ, ಸಮಿತಿಯ ಮುಂದಿಟ್ಟು ಮನೆ ಮಂಜೂರು ಮಾಡಿಕೊಡಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು.ಜಿಲ್ಲಾಧಿಕಾರಿಗಳ ಕಚೇರಿ ಎದುರು ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಬಾಬು ಜಗಜೀವನ್‌ರಾಂ ಪುತ್ಥಳಿ ಆನಾವರಣೆಗೆ ಅಗತ್ಯ ಕ್ರಮಗಳನ್ನು ಕೈಗೊಂಡು, ಮುಖ್ಯಮಂತ್ರಿಗಳಿAದಲೇ ಶಂಕು ಸ್ಥಾಪನೆ ನೆರವೇರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ನಗರಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಾ ಮಾತನಾಡಿ, ನಗರಪಾಲಿಕೆ 24.10 ರ ಅನುದಾನದಲ್ಲಿ ದಲಿತರ ಮನೆಗಳಲ್ಲಿ ಶೌಚಾಲಯ ನಿರ್ಮಾಣ,ಯುಜಿಡಿ ಸಂರ್ಪಕ,ಮನೆ ನಿರ್ಮಾಣ ಸೇರಿದಂತೆ ಹಲವು ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಳ್ಳಲು ಧನ ಸಹಾಯ ನೀಡಲಾಗುವುದು. ಅಲ್ಲದೆ ಉದ್ಯಮಶೀಲತಾ ಯೋಜನೆಯಡಿ ಹೆಣ್ಣು ಮಕ್ಕಳಿಗೂ ಹಲವಾರು ಸೌಲಭ್ಯಗಳಿದ್ದು, ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಹಾಗೆಯೇ ಸ್ಲಂಗಳಲ್ಲಿ ವಾಸಿಸುವ ಕುಟುಂಬಗಳಿಗೆ ಹಕ್ಕು ಪತ್ರ ನೀಡುವ ಸಂಬAಧ ಪ್ರಕ್ರಿಯೆ ಚಾಲನೆಯಲ್ಲಿ 94ಸಿಸಿಯಲ್ಲಿ ಅರ್ಜಿ ಸಲ್ಲಿಸಿ, ಹಕ್ಕುಪತ್ರ ಪಡೆಯುಬಹುದಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಛಲವಾದಿ, ಆದಿಜಾಂಭವ ವಸತಿಹೀನ ಮತ್ತು ಕೃಷಿಭೂಮಿ ರಹಿತ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ರಂಗಯ್ಯ ವಹಿಸಿದ್ದರು.ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಪಿ.ಎನ್.ರಾಮಯ್ಯ, ಭಾನುಪ್ರಕಾಶ್, ಎಂ.ವಿ.ರಾಘವೇಂದ್ರ ಸ್ವಾಮಿ,ಕೋಡಿಯಾಲ ಮಹದೇವು,ಗೂಳರಿವೆ ನಾಗರಾಜು, ರಂಜನ್,ಜಿ.ಆರ್.ಗಿರೀಶ್‌, ಛಲವಾದಿ ಶೇಖರ್‌, ಮೇಲಕಲ್ಲಹಳ್ಳಿ ಯೋಗೀಶ್,ನರಸಿಂಹಮೂರ್ತಿ,ಶಿವರಾಜು ಕೌತುಮಾರ ನಹಳ್ಳಿ, ಚಿಕ್ಕಕೊರಟಗೆರೆ ಕುಮಾರ್‌, ಜಗದೀಶ್, ಗೂಳೂರು ರಾಜಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker