ಕುಣಿಗಲ್ : ಸರ್ಕಾರ ನಿಗದಿ ಮಾಡಿದ್ದ 3.5 ಟಿ.ಎಂ.ಸಿ. ನೀರನ್ನು ಹೇಮಾವತಿ ನಾಲಾ ಸಂಪರ್ಕವಿರುವ ತಾಲ್ಲೂಕಿನ ಎಲ್ಲ ಕೆರೆ ಕಟ್ಟೆಗಳಿಗೆ ಹರಿಸಬೇಕು, ಮಾರ್ಕೋನಹಳ್ಳಿ ಜಲಾಶಯದಿಂದ ಮಂಗಳ ಜಲಾಶಯಕ್ಕೆ ಲಿಂಕ್ ಕೆನಾಲ್ ಮಾಡಬೇಕೆಂದು ರಾಜ್ಯ ರೈತಸಂಘ ಹಸಿರುಸೇನೆ ಜಿಲ್ಲಾಧ್ಯಕ್ಷ ಆನಂದ್ ಪಟೇಲ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ರಾಜ್ಯ ರೈತ ಸಂಘ ಹಸಿರು ಸೇನೆ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ದಿವಂಗತ ಮಾಜಿ ಮಂತ್ರಿ ವೈ.ಕೆ.ರಾಮಯ್ಯ ನವರು ಮಾರ್ಕೋನಹಳ್ಳಿ ಡ್ಯಾಂನಿಂದ ಮಂಗಳಾ ಡ್ಯಾಂ ಗೆ ಲಿಂಕ್‍ಕೆನಾಲ್ ಮಾಡಲು ಅಂದಿನ ಸರ್ಕಾರದಲ್ಲಿ ಅಂದಾಜು ಪಟ್ಟಿಗೆ ಅನುಮೋದನೆ ಪಡೆದಿದ್ದರು. ಶಾಸಕರಾಗಿದ್ದ ರಾಮಸ್ವಾಮಿ ಗೌಡ, ನಾಗರಾಜಯ್ಯ ನವರು ಲಿಂಕ್‍ಕೆನಾಲ್‍ಗೆ ಒತ್ತಡ ಹಾಕಿದ್ದರು. ಆದರೆ ಈಗಿನ ಶಾಸಕರ ಹಿಂಬಾಲಕರು ಅಂದಾಜು ಪಟ್ಟಿ ನಾವೇ ಮಾಡಿಸಿದ್ದು ಎಂದು ಸುಳ್ಳು ಹೇಳುತ್ತಾ ವಾಟ್ಸ್‍ಆಪ್ ಮತ್ತು ಫೇಸ್‍ಬುಕ್‍ಗಳಲ್ಲಿ ಪುಕ್ಕಟೆ ಪ್ರಚಾರ ಪಡೆಯುತ್ತಿದ್ದಾರೆ. ಅವರ ಸಂಬಂಧಿ ಡಿ.ಕೆ. ಶಿವಕುಮಾರ್ ನೀರಾವರಿ ಸಚಿವರಾಗಿದ್ದಾಗ ಹಣ ಬಿಡುಗಡೆ ಮಾಡಿಸದೆ ಕಾಲಾಹರಣ ಮಾಡಿ, ಸರ್ಕಾರದಿಂದ ಬಂದ ಹಣವನ್ನೆಲ್ಲಾ ರಸ್ತೆಗೆ ಹಾಕಿಕೊಂಡು ನೀರಾವರಿ ಯೋಜನೆಯನ್ನು ಹಾಳು ಮಾಡಿದ್ದಾರೆ, ಸರ್ಕಾರ ಕೂಡಲೇ ಲಿಂಕ್‍ಕೆನಾಲ್‍ಗೆ ಹಣ ಬಿಡುಗಡೆ ಮಾಡಬೇಕು ಎಂದರು.
ತಾಲ್ಲೂಕಿನ ಕೃಷಿ ಇಲಾಖೆಯ ವ್ಯಾಪ್ತಿಯಲ್ಲಿ 19 ಸೋಸೈಟಿಗಳು ಇದ್ದು ಗೊಬ್ಬರದ ಅಭಾವ ಸೃಷ್ಠಿಸಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಸೌಮ್ಯ ಅವರ v ಕುಮ್ಮಕ್ಕಿನಿಂದ ಖಾಸಗಿ ಅಂಗಡಿಗಳ ಮೂಲಕ ದುಪ್ಪಟ್ಟು ಹಣಕ್ಕೆ ಗೊಬ್ಬರ ಮಾರಾಟ ಮಾಡಿಸುತ್ತಿದ್ದಾರೆ ಗೊಬ್ಬರಕ್ಕಾಗಿ ರೈತರು ಪರದಾಡುತ್ತಿದ್ದಾರೆ, ಇದಕ್ಕೆ ಕೃಷಿ ಇಲಾಖಾ ಅಧಿಕಾರಿಗಳೇ ನೇರ ಹೊಣೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ಪಿ ಹೊನ್ನಮಾಚನಹಳ್ಳಿ ಸ.ನಂ. 82 ರಲಿ ಶಾಸಕ ಡಾ|| ರಂಗನಾಥ್ ರವರ ಹೆಸರಿನಲ್ಲಿ ಕ್ರಷರ್ ನಡೆಯುತ್ತಿದ್ದು ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗತ್ತಿದೆ ಕೂಡಲೇ ಜಿಲ್ಲಾಡಳಿತ ಕಾನೂನು ಕ್ರಮ ಕೈಗೊಳ್ಳಬೇಕು, ತಾಲ್ಲೂಕಿನಲ್ಲಿ ಅರಣ್ಯದ ಅಂಚಿನಲ್ಲಿರುವ ರೈತರ ಜಮೀನುಗಳಿಗೆ ಇಲಾಖಾ ಅಧಿಕಾರಿಗಳು ಒಕ್ಕಲೆಬ್ಬಿಸಲು ಕಿರುಕುಳ ನೀಡುತ್ತಿದ್ದಾರೆ. ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೆ ನಡೆಸಿ ರೈತರಿಗೆ ತೊಂದರೆ ಕೊಡುವುದನ್ನ ನಿಲ್ಲಿಸಬೇಕು ಎಂದರು.
ತಾಲ್ಲೂಕು ಅಧ್ಯಕ್ಷ ಅನಿಲ್‍ಕುಮಾರ್ ಮಾತನಾಡಿ ಮಂಗಳ ಜಲಾಶಯದಲ್ಲಿ ಡೆಡ್ ಸ್ಟೋರೇಜ್ ನೀರಿಲ್ಲದಿದ್ದರೆ ಜಲಾಶಯಕ್ಕೆ ಅಪಾಯವೆಂದು ಗೊತ್ತಿದ್ದರು ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತಲೆಕೆಡಿಸಿಕೊಳ್ಳುತ್ತಿಲ್ಲ ವರ್ಷ ವರ್ಷ ಡ್ಯಾಮ್ ನಿರ್ವಹಣೆಗೆಂದು ಬರುವ ಹಣ ಏನಾಗುತ್ತದೆಯೋ ಗೊತ್ತಿಲ್ಲ ಗೇಟ್ ಗಳಿಗೆ ಮತ್ತು ಕೆಲವು ಯಂತ್ರೋಪಕರಣಗಳಿಗೆ ಬಣ್ಣ ಬಳಿಯದೆ ಹಾಳಾಗುತ್ತಿವೆ ಜಲಾಶಯ ನಶಿಸಿ ಹೋಗುವ ಮುನ್ನ ಮಾರ್ಕೋನಹಳ್ಳಿ ಡ್ಯಾಂನಿಂದ ಲಿಂಕ್‍ಕೆನಾಲ್‍ಗೆ ಚಾಲನೆ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿ ತಹಸೀಲ್ದಾರ್ ಮಹಬಲೇಶ್ವರ್ ರವರಿಗೆ ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನೆಯಲ್ಲಿ ರೈತ ಮುಖಂಡರುಗಳಾದ ವೆಂಕಟೇಶ್, ಲಕ್ಷ್ಮಣ್, ಲಿಂಗರಾಜು, ಒಳಗೊಂಡಂತೆ ನೂರಾರು ರೈತರು ಭಾಗವಹಿಸಿದ್ದರು.
Attachments area