ಕುಣಿಗಲ್: ತಾಲೂಕಿನ ಯಡಿಯೂರು ಹೋಬಳಿ ಚೊಟ್ಟನಹಳ್ಳಿ ಗ್ರಾಮದ ಕೆರೆ ಹೇಮಾವತಿ ನೀರಿನಿಂದ ತುಂಬಿ ಕೋಡಿ ಬಿದ್ದ ಕಾರಣದಿಂದ ಶಾಸಕ ಡಾಕ್ಟರ್ ಎಚ್ ಡಿ ರಂಗನಾಥ್ ಬಾಗೀನ ಅರ್ಪಿಸಿದರು.
ನಂತರ ಮಾತನಾಡಿದ ಅವರು ತಾಲೂಕಿನ ಎಲ್ಲಾ ಕೆರೆಗಳು ತುಂಬಬೇಕು ಎಂದರೆ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಜಲಸಂಪನ್ಮೂಲ ಸಚಿವರಾಗಿದ್ದ ವೇಳೆಯಲ್ಲಿ ತಾಲ್ಲೂಕಿಗೆ ನಿಗದಿಯಾಗಿರುವ ಹೇಮಾವತಿ ನೀರು ತರಲು ಪ್ರತ್ಯೇಕ ಲಿಂಕ್ ಕೆನಾಲ್ ಮಂಜೂರು ಮಾಡಿದ್ದಾರೆ.ಇದು ಈಡೇರಬೇಕು ಎಂದರೆ ನಾವುಗಳು ಪಕ್ಷಾತೀತವಾಗಿ ವಿಧಾನಸೌಧಕ್ಕೆ ಪಾದಯಾತ್ರೆ ಮಾಡುವ ಮೂಲಕ ಸರ್ಕಾರದ ಗಮನವನ್ನು ಸೆಳೆದು ನಮ್ಮ ಆಸೆಯನ್ನು ಈಡೇರಿಸಿ ಕೊಳ್ಳಬೇಕು ಆಗ ನಮ್ಮ ತಾಲ್ಲೂಕಿನ ಎಲ್ಲ ಕೆರೆಗಳು ಭರ್ತಿಯಾಗಿ ರೈತರ ಕುಟುಂಬಗಳು ಸುಭಿಕ್ಷವಾಗಿರುತ್ತವೆ ಮತ್ತು ಮಾರ್ಕೋನಹಳ್ಳಿ ಜಲಾಶಯಕ್ಕೆ 1ಟಿಎಂಸಿ ನೀರನ್ನು ಸರ್ಕಾರ ಮಂಜೂರಾತಿ ಮಾಡಿದೆ ಎಂದು ತಿಳಿಸಿದರು .ಈ ಸಂದರ್ಭದಲ್ಲಿ ಹಲವಾರು ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.