
ತಿಪಟೂರು: ತಾಲ್ಲೂಕಿನ ಹೊನ್ನವಳ್ಳಿ ಹೋಬಳಿಯ ಹಾಲೇನಹಳ್ಳಿ ಗ್ರಾಮದಲ್ಲಿಗೊಲ್ಲರಹಟ್ಟಿ, ಭೋವಿಕಾಲೋನಿ ಹಾಗೂ ಮುಂದಿನಹಳ್ಳಿಯನ್ನು ಸಂಪರ್ಕಿಸುವರಸ್ತೆಯಲ್ಲಿ ಸುಮಾರು ೧೦೦ರಿಂದ ೧೫೦ ಮೀಟರ್ ಉದ್ದದ ರಸ್ತೆಯು ಹಾಳಾಗಿದ್ದು ಮಳೆಬಂದರೆ ನೀರಿನಿಂದ ಮುಚ್ಚಿ ಜನರು ತಿರುಗಾಡಲೂ ಆಗದಿರುವಂತಹ ಸ್ಥಿತಿಯನ್ನು ತಲುಪಿದೆ. ರಸ್ತೆಯvಅಕ್ಕಪಕ್ಕದ ಚರಂಡಿಯು ಮಣ್ಣಿನಿಂದ ಮುಚ್ಚಿದ್ದು ಚರಂಡಿಯಲ್ಲಿ ಹರಿಯುವ ನೀರು ರಸ್ತೆಯ ತುಂಬೆಲ್ಲಾ ನಿಂತಿದ್ದು ಸಾಂಕ್ರಾಮಿಕರೋಗವನ್ನು ಹರಡುವ ಕೇಂದ್ರವಾಗಿ ಮಾರ್ಪಟ್ಟಿದೆ. ಗ್ರಾಪಂ ಸದರಿ ಬಗ್ಗೆ ದೂರನ್ನು ಸ್ವೀಕರಿಸಿ ದುರಸ್ತಿಗೆ ಮುಂದೆ ಬಂದರೂ ಆಭಾಗದ ಅಕ್ಕಪಕ್ಕದ ಮನೆಯವರು ಹಾಗೂ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ರಸ್ತೆಯನ್ನು ದುರಸ್ತಿ ಮಾಡಲು ಸಹಕರಿಸುತ್ತಿಲ್ಲ. ತಾಲ್ಲೂಕು ಆಡಳಿತ ಸದರಿ ಸಮಸ್ಯೆಯ ಬಗ್ಗೆ ಗಮನ ಹರಿಸಿ ರಸ್ತೆಯನ್ನು ಸರಿಪಡಿಸುವ ಕಾರ್ಯಕ್ಕೆ ಮುಂದಾಗಬೇಕು ಹಾಗೂ ಪ್ರತಿನಿತ್ಯ ಗ್ರಾಮದ ಹಾಗೂ ಅಕ್ಕಪಕ್ಕದ ಗ್ರಾಮದ ರೈತರು ರಸ್ತೆಯನ್ನು ಬಳಸಲು ಯೋಗ್ಯವಾಗುವಂತೆ ಮಾಡಬೇಕಾಗಿದೆ ಎಂದು ಆಗ್ರಹಿಸಿದ್ದಾರೆ.