ಕುಣಿಗಲ್:ಅನಧಿಕೃತವಾಗಿ ಗಂಧದ ಮರ ಕಡಿದು ಚಕ್ಕೆಯನ್ನು ತೆಗೆದು ಸಂಗ್ರಹಣೆ ಮಾಡುತ್ತಿದ್ದ ವೇಳೆ ಅರಣ್ಯ ಸಿಬ್ಬಂದಿ ತಮ್ಮ ಆತ್ಮರಕ್ಷಣೆಗೆಂದು ಹಾರಿಸಿದ ಗುಂಡಿಗೆ ಓರ್ವ ಸಾವನ್ನಪ್ಪಿ ೩ಜನ ಸಿನಿಮೀಯ ರೀತಿಯಲ್ಲಿ ತಪ್ಪಿಸಿಕೊಂಡು ಹೋಗಿರುವ ಘಟನೆ ಹುಲಿಯೂರು ದುರ್ಗ ಪೊಲೀಸ್ ಠಾಣಾ ವ್ಯಾಪ್ತಿಂ iÀÄಲ್ಲಿ ಬೆಳಿಗ್ಗೆ ಜರುಗಿದೆ.
ತಾಲ್ಲೂಕಿನ ಹುಲಿಯೂರುದುರ್ಗ ಹೋಬಳಿ ಕಂಪ್ಲಾ ಪುರ ಸ್ಯಾಂಡಲ್ ವುಡ್ ಫಾರೆಸ್ಟ್ ಅರಣ್ಯ ಪ್ರದೇಶದಲ್ಲಿ ಸುಮಾರು ೪ಮಂದಿ ೪ ಗಂಧದ ಮರಗಳನ್ನು ಕಡಿ ದು ಚಕ್ಕೆಯನ್ನು ಎಬ್ಬಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿಯನ್ನು ಆಧರಿಸಿ ಹುಲಿಯೂರು ದುರ್ಗ ಅರಣ್ಯ ಸಿಬ್ಬಂದಿಗಳು ಮರಗಳ್ಳರನ್ನು ಹಿಡಿಯಲು ಹೋದಾಗ ಅರಣ್ಯ ಸಿಬ್ಬಂದಿಗಳ ಮೇಲೆ ಮರಗಳ್ಳರು ಮಚ್ಚು ಮತ್ತು ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ ಅರಣ್ಯ ಸಿಬ್ಬಂದಿಗಳು ಸುಮಾರು ಬಾರಿ ಎಚ್ಚರಿಕೆ ನೀಡಿ ದರು ಕಳ್ಳರು ಹಲ್ಲೆಗೆ ಮುಂದಾಗಿದ್ದಾರೆ ತಕ್ಷಣ ಪರಿ ಸ್ಥಿತಿಯನ್ನು ಅರಿತ ಅರಣ್ಯ ಸಿಬ್ಬಂದಿಗಳು ತಮ್ಮ ಆತ್ಮ ರಕ್ಷಣೆಗೆಂದು ತಮ್ಮಲ್ಲಿದ್ದ ಬಂದೂಕಿನಿAದ ಗುಂಡು ಹಾರಿಸಿದ್ದಾರೆ ಆಕಸ್ಮಿಕವಾಗಿ ಒಬ್ಬನಿಗೆ ಬಂದೂಕಿನ ಗುಂಡು ತಾಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಇನ್ನೂ ೩ಜನ ಮಂದಿ ಕಳ್ಳರು ಸಿನಿಮೀಯ ರೀತಿಯಲ್ಲಿ ತಪ್ಪಿಸಿಕೊಂಡು ಹೋಗಿದ್ದಾರೆ, ಇಲಾಖೆಯ ಮೂವ ರಿಗೆ ಗಾಯವಾಗಿದೆ ಎಂದು ಹುಲಿಯೂರು ದುರ್ಗ ಅರಣ್ಯ ಇಲಾಖೆಯ ಆರ್‌ಎಫ್‌ಒ ಮನ್ಸೂರ್ ಮಾಹಿತಿ ನೀಡಿದ್ದಾರೆ ಸ್ಥಳಕ್ಕೆ ತುಮಕೂರು ಜಿಲ್ಲಾ ಧಿಕಾರಿ ಪಾಟೀಲ್, ಎಸ್ಪಿ ರಾಹುಲ್, ಎಸಿ ಅಜಯ್ ತಹಶೀಲ್ದಾರ್ ಮಹಾ ಬಲೇಶ್, ಡಿವೈಎಸ್ಪಿ ರಮೇಶ್, ಸಿಪಿಐ ಗುರುಪ್ರಸಾದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.