ಅನುಮಾನಕ್ಕೆ ಬೇಸತ್ತ ಮಹಿಳೆ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಸಾವು

ಗುಬ್ಬಿ:– ಗಂಡನ ಅನುಮಾನಕ್ಕೆ ನಿತ್ಯ ಬೇಸತ್ತ ಮಹಿಳೆ ಡೆತ್ ನೋಟ್ ನಲ್ಲಿ ನಾನು ಅಂತವಳಲ್ಲ, ನಾನು ಏನು ತಪ್ಪು ಮಾಡಿಲ್ಲ, ನನ್ನ ಮೇಲೆ ಸಂಶಯ ಪಡುವುದು ಸರಿಯಲ್ಲ, ನಿಮ್ಮಗಳ ಬಾಯಿಂದ ಅನುಮಾನಿಸಿಕೊಂಡು ಬದುಕಲು ನನಗಿಷ್ಟವಿಲ್ಲ ಎಂದು ಬರೆದಿಟ್ಟು ಮನೆಯ ಪಕ್ಕದ ಶೆಟ್ ನಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಧಾರುಣ ಘಟನೆ ತಡರಾತ್ರಿ ನಡೆದಿದೆ.
ತಾಲ್ಲೂಕಿನ ಕಸಬಾ ಹೋಬಳಿಯ ಮಡೇನಹಳ್ಳಿ ಗ್ರಾಮದ ವಾಸಿಯಾದ ಲಕ್ಷ್ಮೀ ಎಂಬ ಸುಮಾರು 30 ವರ್ಷದ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ನತದೃಷ್ಟೇಯಾಗಿದ್ದು ಬೆಂಗಳೂರು ಮೂಲದ ಈಕೆ ಮದುವೆಯಾಗಿ 6 ವರ್ಷ ಕಳೆದಿದ್ದು ಇಬ್ಬರು ಗಂಡು ಮಕ್ಕಳನ್ನು ಬಿಟ್ಟು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಹೆಂಡತಿಯ ನಡತೆಯ ಬಗ್ಗೆ ಅನುಮಾನಿಸಿದ ಜೊತೆಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ ಮಹಿಳೆಯ ಗಂಡ ರಾಜು 32 ವರ್ಷ ಎನ್ನಲಾಗಿದ್ದು ತಡರಾತ್ರಿ ಗಂಡ ಮತ್ತು ಹೆಂಡತಿಯ ನಡುವೆ ಜಗಳ ನಡೆದಿದ್ದು ಮೃತಪಟ್ಟ ಯುವತಿ ತನ್ನ ಸಾವಿನ ಬಗ್ಗೆ ಕಾರಣ ತಿಳಿಸಿ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಯಲಾಗಿದೆ.
ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಗುಬ್ಬಿ ಪೊಲೀಸರು ಪರಿಶೀಲನೆ ನಡೆಸಿ ಮಹಿಳೆ ಬರೆದಿಟ್ಟಿದ್ದಾರೆ ಎನ್ನಲಾದ ಡೆತ್ ನೋಟ್ ಪಡೆದು ಪ್ರಕರಣ ದಾಖಲು ಮಾಡಲು ಮುಂದಾಗಿದ್ದು ಮಹಿಳೆಯ ಗಂಡ ಸೇರಿದಂತೆ ಅತ್ತೆ ಮಾವ ಅವರನ್ನು ವಶಕ್ಕೆ ಪಡೆದು ಸಾವಿನ ಬಗ್ಗೆ ನಿಖರ ಕಾರಣ ತಿಳಿಯಲು ಮುಂದಾಗಿ ಗುಬ್ಬಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.