ಮಧುಗಿರಿ : ಎರಡು ಮುಂಗುಸಿಗಳನ್ನು ಭೇಟೆ ಯಾಡಿದ್ದ ವ್ಯಕ್ತಿಯೊಬ್ಬನನ್ನು ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿ ಬಂಧಿಸಿರುವ ಘಟನೆ ಮಂಗಳವಾರ ನಡೆದಿದೆ.
ತಾಲೂಕಿನ ಐ ಡಿ ಹಳ್ಳಿ ಹೋಬಳಿಯ ಜನಕಲೋಟಿ ಗ್ರಾಮದ ಹಕ್ಕಿಪಿಕ್ಕಿ ಕಾಲನಿಯ ಸಮೀಪದ ಜಮೀನಿನಲ್ಲಿ ಮುಂಗುಸಿಗಳನ್ನು ಭೇಟೆಯಾಡಲು ಬಲೆ ಹಾಕಿ ವಂಚಿಸುವಾಗ ಅರಣ್ಯಾಧಿಕಾರಿಗಳಿಗೆ ಖಚಿತ ಮಾಹಿತಿ ದೊರಕಿದ್ದು ಜನಕಲೋಟಿಯ ಗ್ರಾಮದ ವಾಸಿ ವೆಂಕಟೇಶ್(24) ನನ್ನು ಅರಣ್ಯಾಧಿಕಾರಿಗಳು ಸ್ಥಳದಲ್ಲಿಯೇ ಬಂಧಿಸಿದ್ದು ಮೃತಪಟ್ಟ ಎರಡು ಮುಂಗುಸಿಗಳ ಕಳೆಬರಹಗಳು ಸೇರಿದಂತೆ ಬೇಟೆ ಯಾಡಲು ಬಳಸಿದ್ದ ಎರಡು ರೇಷ್ಮೆ ಬಲೆಗಳನ್ನು ವಶ ಪಡಿಸಿ ಕೊಂಡು ವನ್ಯ ಜೀವಿ ಸಂರಕ್ಷಣಾ ಕಾಯಿದೆ 1972 ಹಾಗೂ 2022 ರಂತೆ ಪ್ರಕರಣ ದಾಖಲಿಸಿ ಆರೋಪಿಯನ್ನು ಮಂಗಳವಾರ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದು ಅಧಿಕಾರಿಗಳು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ವಲಯಾರಣ್ಯಾಧಿಕಾರಿ ಸುರೇಶ್ ಹೆಚ್ ಎನ್ , ಉಪವಲಯಾರಣ್ಯಾಧಿಕಾರಿ ಮುತ್ತುರಾಜು ಬಿ. ಎನ್ , ಸಿಬ್ಬಂದಿಗಳಾದ , ತಿಪ್ಪೇಸ್ವಾಮಿ , ಸೋಮಪ್ಪ , ಗಂಗರಾಜು ಇದ್ದರು.