ತಿಪಟೂರು : ತಾಲ್ಲೂಕಿನ ನೊಣವಿನಕೆರೆ ಗ್ರಾಮದ ಸೋಮೆಕಟ್ಟೆ ಶ್ರೀ ಕಾಡಸಿದ್ದೇಶ್ವರ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಧರ್ಮಸಭೆ, ಉಚಿತ ಸಾಮೂಹಿಕ ವಿವಾಹ ಕಾರ‍್ಯಕ್ರಮವು ಇದೇ ಫೆಬ್ರವರಿ 14 ರಿಂದ 16 ರವರೆಗೆ ಮೂರು ದಿನಗಳ ಕಾಲ ನೆಡೆಯಲಿದೆ ಎಂದು ಶ್ರೀ ಡಾ.ಕರಿವೃಷಭದೇಶಿಕೇಂದ್ರ ಶಿವಯೋಗೀಶ್ವರ ಮಹಾಸ್ವಾಮೀಜಿಯವರು ತಿಳಿಸಿದರು.
ಶ್ರೀ ಮಠದ ಗುರುಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತಾನಾಡಿದ ಪೂಜ್ಯರು ದಿನಾಂಕ 14 ರಂದು ಬೆಳಗ್ಗೆ 8 ಗಂಟೆಗೆ ಧ್ವಜರೋಹಣ ಕರ‍್ಯಕ್ರಮವನ್ನು ತೆವೆಡೇಹಳ್ಳಿ ಮಠದ ಗೋಸಲ ಚನ್ನಬಸವೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ಹಾಗೂ ಮೇಟಿಕುರ್ಕೆ ಬೂದಿಹಾಳ್ ಮಠದ ಶಶಿಶೇಖರ ಸಿದ್ದಬಸವ ಮಹಾಸ್ವಾಮಿಜಿಯವರು ನೇರವೇರಿಸುವವರು. 11.00 ಗಂಟೆಗೆ ಲಲಿತ ಸಹಸ್ರನಾಮ, ಮಕ್ಕಳಿಗೆ ವಿದ್ಯಾಜ್ಞಾನ101 ಮಕ್ಕಳಿಗೆ ವಿದ್ಯಾಯಜ್ಞ ಸಂಕಲ್ಪ, ಕೆಂಡಾರ್ಚನೆ, 108 ಮತ್ತೆöÊದೆಯರಿಗೆ ಬಾಗಿನ ಸೇವೆ ಕರ‍್ಯಕ್ರಮ ದಿವ್ಯ ಸಾನಿಧ್ಯ ಮಾಗಡಿ ಮಠದ ಮುಮ್ಮಡಿ ಬಸವರಾಜೇಂದ್ರ ಸ್ವಾಮೀಜಿಯವರು ವಹಿಸುವವರು ಎಂದು ತಿಳಿಸಿದರು.
ಶ್ರೀ ಮಠದ ಕಿರಿಯ ಶ್ರೀಗಳಾದ ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ ಮಾತನಾಡಿ 15 ರಂದು ಶ್ರೀ ಶಿವಯೋಗೀಶ್ವರ ಆಸ್ವತ್ರೆ, ಆಸರ ಆಸ್ವತ್ರೆ, ಸಂಜೀವಿನಿ ಬ್ಲಡ್ ಬ್ಯಾಂಕ್ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ, ರಕ್ತದಾನ, ಉಚಿತ ನೇತ್ರ ತಪಾಸಣೆ ಆಯೋಜನೆ ಮಾಡಲಾಗಿದ್ದು ಅಂದು ನೊಣವಿನಕೆರೆಯ ರಾಜಬೀದಿಗಳಲ್ಲಿ ಕಾಡಸಿದ್ದೇಶ್ವರ ಸ್ವಾಮಿಯ ಅಡ್ಡಪಲ್ಲಕ್ಕಿ ಮಹೊತ್ಸವ ಸಂಜೆ 5 ಗಂಟೆಗೆ ಸ್ವಾಮಿ ರಥೋತ್ಸವ, ಸಂಜೆ ಸಾಂಸ್ಕೃತಿಕ ಕರ‍್ಯಕ್ರಮ ಮತ್ತು ಆರ್ಶೀವಚನ ಕರ‍್ಯಕ್ರಮವಿದ್ದು, ಕಲ್ಬುರ್ಗಿ ಜಿಲ್ಲೆಯ ಶ್ರೀ ಸದಾಶಿವ ಮಹಾಸ್ವಾಮಿಜಿ ಚಾಲನೆ ನೀಡುವವರು, ಮಹಾರಾಷ್ಟçದ ಶಿವಾನಂದ ಮಹಾಸ್ವಾಮಿಜಿ, ಪಾನಮಂಗಳೂರು ಶಿವಯೋಗಿ ಶಿವಾಚಾರ್ಯ ಮಹಾಸ್ವಾಮೀಜಿ, ಶ್ರೀ ಗುರುಲಿಂಗದೇವರು, ಹೆಗ್ಗಡಹಳ್ಳಿಯ ವಿಶ್ವನಾಥ ಶಿವಾಚಾರ್ಯ ಮಹಾಸ್ವಾಮೀಜಿ ಮುತ್ತಿನಕಂತೆ ಮಠದ ಮಹಾಸ್ವಾಮೀಜಿ, ಪದ್ಮಶ್ರೀ ವಿಜೇತೆ ಮಂಜಮ್ಮ ಜೋಗತಿ, ವೀರಶೈವ ರುದ್ರಭೂಮಿಯ ಶ್ರೀ ನೀಲಮ್ಮನವರು ಆಗಮಿಸಲಿದ್ದು, ಅಂದು ರಾತ್ರಿ 11.00 ಗಂಟೆಗೆ ರಾಜ್ಯ ಮಟ್ಟದ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿ ಕರ‍್ಯಕ್ರಮವನ್ನು ಕೋ-ಕೋ ಸಂಸ್ಥೆಯ ಅದ್ಯಕ್ಷರಾದ ಲೋಕೇಶ್ವರ ಉದ್ಗಾಟಿಸಲಿದ್ದಾರೆ.
ಮಠದ ಹೆಗ್ಗಡಹಳ್ಳಿಯ ಶ್ರೀ ವಿಶ್ವನಾಥ ಶಿವಾಚಾರ್ಯ ಮಹಾಸ್ವಾಮೀಜಿ ಮಾತನಾಡಿ 16 ರಂದು ಬೆಳಗ್ಗೆ ಧಾರ್ಮಿಕ ಧರ್ಮಸಭೆ ಕಾರ್ಯಕ್ರಮವಿದ್ದು, ಉದ್ಗಾಟನೆಯನ್ನು ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿಯ ಅಧ್ಯಕ್ಷ ಡಿ.ಕೆ ಶಿವಕುಮಾರ್ ಉದ್ಗಾಟಿಸಲಿದ್ದು, ಅಧ್ಯಕ್ಷತೆಯನ್ನು ವಸತಿ ಸಚಿವರಾದ ಸೋಮಣ್ಣ ವಹಿಸಲಿದ್ದಾರೆ. ವಿಭೂತಿಪುರ ಮಠದ ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಜಿ, ಶಿವಗಂಗಾ ಕ್ಷೇತ್ರದ ಮೇಲಣಗವಿ ಮಠದ ಮಲಯಶಾಂತಮುನಿ ಶಿವಚಾರ್ಯ ಮಹಾಸ್ವಾಮೀಜಿ, ಏಕದಳ ಬಿಲ್ವ ಬಂಡೆಮಠದ ಚರಮೂರ್ತಿ ಸಚ್ಚಿದಾನಂದ ಮಹಾಸ್ವಾಮೀಜಿ, ಹಿರೇಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ, ಚಂದ್ರವನ ಆಶ್ರಮದ ತ್ರಿನೇತ್ರ ಮಹಂತ ಮಹಾಸ್ವಾಮೀಜಿ, ಗಂಜಿಗಟ್ಟಿ ಮಠದ ವೈಜನಾಥ್ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮೀಜಿ, ಹೊನ್ನವಳ್ಳಿ ಕರಿಸಿದ್ದೇಶ್ವರ ಮಠದ ಶಿಪ್ರಕಾಶ್ ಶಿವಚಾರ್ಯ ಮಹಾಸ್ವಾಮಿಜಿ, ಹುಣಸೇಘಟ್ಟದ ಗುರುಮೂರ್ತಿ ಶಿವಾಚರ್ಯ ಮಹಾಸ್ವಾಮೀಜಿ ಆಗಮಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್, ಗೃಹ ಸಚಿವ ಅರಗ ಜ್ಞಾನೇಂದ್ರ, ಇಂದನ ಸಚಿವ ಸುನೀಲ್ ಕುಮಾರ್, ಸಾರಿಗೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಶ್ರೀರಾಮುಲು, ಲೋಕೋಪಯೋಗಿ ಸವಿವ ಸಿ,ಸಿ ಪಾಟೀಲ್, ಸಂಸದರಾದ ಜಿ.ಎಸ್ ಬಸವರಾಜು, ಮಾಜಿ ಶಾಸಕರಾದ ಚೆಲುವರಾಯಸ್ವಾಮಿ, ಉಪನ್ಯಾಸ ಸುಧಾಬರಗೂರು, ವಿಶೇಷ ಆಹ್ವಾನಿತರಾದ ಸಂಸದ ಡಿಕೆ ಸುರೇಶ್, ಶಾಸಕರಾದ ಮಸಾಲೆ ಜಯರಾಮ್, ರಾಜ್ಯಸಬಾ ಸದಸ್ಯ ಜಿ.ಸಿ ಚಂದ್ರಶೇಖರ್, ವಿಜಯಸಾಹಿ, ಮಾಜಿ ರಾಜ್ಯಸಬಾ ಸದಸ್ಯರಾದ ರಾಮಮೂರ್ತಿ, ಮಾಜಿ ಶಾಸಕ ಕೆ.ಷಡಕ್ಷರಿ, ನಂಜಾಮರಿ, ಬೆಮೆಲ್ ಕಾಂತರಾಜ್, ಲಕ್ಷಿö್ಮನಾರಾಯಣ್, ಸಮಾಜ ಸೇವಕ ಅರಸೀಕೆರೆ ಬಿಜೆಪಿ ಮುಖಂಡ ಎನ್.ಆರ್ ಸಂತೋಷ್, ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಶ್ರೀ ಮಠದ ಆಡಳಿತಾಧಿಕಾರಿ ಶಂಬುಲಿಂಗಸ್ವಾಮಿ, ವಿಜಯ್ ಕುಮಾರ್, ಸಂಪಿ ಲೋಕೇಶ್ ಹಾಜರಿದ್ದರು.