ತುಮಕೂರುರಾಜಕೀಯರಾಜ್ಯ

ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ತುಮಕೂರು : ಕರ್ನಾಟಕದ ಜನತೆಯ ದುಖಃ, ದುಮ್ಮಾನಗಳನ್ನು ಅರಿತು ಅವರ ಪರಿಹಾರಕ್ಕೆ ಹೊರಟಿರುವ ಯಾತ್ರೆಯಾಗಿದ್ದು, ದಲಿತರು, ರೈತರು, ಕಾರ್ಮಿಕರು ಅನುಭವಿಸುತ್ತಿರುವ ನೋವುಗಳಿಗೆ ಇತಿಶ್ರಿ ಹಾಡಲು ಹೊರಟಿರುವ ಯಾತ್ರೆಯಾಗಿದೆ. ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ನಗರದ ಗಾಜಿನಮನೆಯುಲ್ಲಿ ಜಿಲ್ಲಾ ಕಾಂಗ್ರೆಸ್‌ವತಿಯಿಂದ ಹಮ್ಮಿಕೊಂಡಿದ್ದ ಪ್ರಜಾದ್ವನಿ ಬಸ್ ಯಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಬಿಜೆಪಿ 2014ರಲ್ಲಿ ಬಿಜೆಪಿ ಸುಮಾರು 600 ಭರವಸೆ ನೀಡಿತ್ತು.ಸಾಲಮನ್ನಾ, ಯುವಕರಿಗೆ ಉದ್ಯೋಗ,ಕಪ್ಪು ಹಣ ವಾಪಸ್,ರೈತರ ಅದಾಯ ದ್ವಿಗುಣ ಹೀಗೆ ಹಲವರು ಘೋಷಣೆಗಳು ಕೇವಲ ಪುಸ್ತಕದಲ್ಲಿಯೇ ಉಳಿದಿದೆ.ಜೆಡಿಎಸ್ ಪಕ್ಷದ ಕುಟುಂಬ ರಾಜಕಾರಣದಿಂದ ಹಾಲಿ ವಿಧಾನಪರಿಷತ್ ಸದಸ್ಯರುಗಳೇ ರಾಜೀನಾಮೆ ನೀಡಿ ಕಾಂಗ್ರೆಸ್‌ಗೆ ಸೇರುತಿದ್ದಾರೆ.ಹಾಗೆಯೇ ಗುಬ್ಬಿ,ಅರಸೀಕೆರೆ,ಪಾಂಡವಪುರದ ಜೆಡಿಎಸ್ ಎಂ.ಎಲ್.ಎಗಳು ಕಾಂಗ್ರೆಸ್ ಪಕ್ಷ ಸೇರಿದ್ದಾರೆ.ಶಿವಮೊಗ್ಗದಲ್ಲಿ ಮಂಜುನಾಥಗೌಡ,ವೈ.ಎಸ್.ದತ್ತ,ಬನ್ನೂರು ಕ್ಷೇತ್ರದ ಸುನೀತ ವೀರಪ್ಪಗೌಡ ಕಾಂಗ್ರೆಸ್ ಸೇರಿದ್ದಾರೆ. ಇದೇ ಹೇಳುತ್ತೆ,ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂಬುದನ್ನು ತೋರಿಸುತ್ತದೆ.ಜನವರಿ 30 ರಂದು ರಾಹು¯ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯ ಮುಕ್ತಾಯ ಸಮಾರಂಭವಿದೆ.ನಾನು,ಸಿದ್ದರಾಮಯ್ಯ ಸೇರಿದಂತೆ ಹಲವರು ಕರ್ನಾಟಕದಿಂದ ಭಾಗವಹಿಸಲಿದ್ದೇವೆ.ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಜನರಿಗಾಗಿ ಹಲವಾರು ಕಾರ್ಯಕ್ರಮಗಳನ್ನು ತಂದಿದೆ.ನುಡಿದಂತೆ ನಡೆದಿದ್ದೇವೆ.ನಾವು ಘೋಷಣೆ ಮಾಡಿರುವ 200 ಯೂನಿಟ್ ಮತ್ತು 2000 ರೂ ಇದು ನಮ್ಮ ಭರವಸೆಯಲ್ಲ,ವಾಗ್ಧಾನ.ಇದನ್ನು ನೀಡದಿದ್ದರೆ ನಾವು ರಾಜೀನಾಮೆ ನೀಡಲು ಸಿದ್ದ.ಇದನ್ನು ಜನರು ಅರ್ಥ ಮಾಡಿಕೊಂಡು, ಇಂದೇ ಕಾಂಗ್ರೆಸ್‌ಗೆ ಮತ ನೀಡುವ ಪ್ರತಿಜ್ಞೆ ಮಾಡಬೇಕೆಂದು ಕೆರೆ ನೀಡಿದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ಸಿಂಗ್ ಸುರ್ಜೆವಾಲಾ ಮಾತನಾಡಿ  ಮೊಸರು,ಮಜ್ಜಿಗೆ,ಹಾಲಿನ ಉತ್ಪನ್ನಗಳು, ಯುವಕರು ಧರಿಸುವ ಬಟ್ಟೆ ಹೀಗೆ ಎಲ್ಲದರ ಮೇಲೂ ಜಿ.ಎಸ್.ಟಿ ಹಾಕುವ ಮೂಲಕ ದೇಶದ ಜನರನ್ನು ಲೂಟಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಅಡುಗೆ ಅನಿಲ,ಇಂಧನ,ವಿದ್ಯುತ್,ಪೆಟ್ರೋಲ್ ಬೆಲೆಗಳನ್ನು ಹೆಚ್ಚಳ ಮಾಡಿ ಜನರನ್ನು ಶೋಷಣೆ ಮಾಡಲಾಗುತ್ತಿದೆ.ದಲಿತರು, ಹಿಂದುಳಿದವರ್ಗದವರು, ಬಡವರು ಬೆಲೆ ಹೆಚ್ಚಳದಿಂದ ಬದುಕುವುದು ಕಷ್ಟವಾಗಿದೆ. ಮೋದಿಯವರ ಅಚ್ಚೆದಿನ್ ಇದೇ ಇರಬೇಕು ಎಂದರು.
ಬಡವರ ಮತ್ತು ದೀನದಲಿತರ ಪರವಾಗಿ ಇರುವ ಕಾಂಗ್ರೆಸ್ ಜನರ ಕಷ್ಟವನ್ನು ಅರ್ಥ ಮಾಡಿಕೊಂಡು ಒಂದು ಕುಟುಂಬಕ್ಕೆ 200 ಯೂನಿಟ್ ವರೆಗೆ ವಿದ್ಯುತ್ ಉಚಿತ ಹಾಗೂ ಕುಟುಂಬದ ಮಹಿಳೆಯ ಖಾತೆಗೆ ಮಾಸಿಕ 2000 ರೂ ಘೋಷಿಸಿದೆ.ಇದಕ್ಕೆ ಎಲ್ಲಿಂದ ಹಣ ತರುತ್ತೀರಿ ಎಂಬ ಪ್ರಶ್ನೆಯನ್ನು ಆಡಳಿತ ಪಕ್ಷ ಬಿಜೆಪಿ ಎತ್ತಿದೆ.ಅದಕ್ಕೆ ನಮ್ಮ ಉತ್ತರ ಏನು ಎಂದರೆ,ನೀವು ಪ್ರತಿ ಯೋಜನೆಯಲ್ಲಿ ಪಡೆಯುತ್ತಿರುವ ಶೇ40ರ ಕಮಿಷನ್ ತಡೆದರೆ ವಾರ್ಷಿಕ ಸುಮಾರು 7 ಸಾವಿರ ಕೋಟಿ ರೂ ಬೊಕ್ಕಸಕ್ಕೆ ಉಳಿಯಲಿದೆ.ಅದರಿಂದ ಇಂತಹ ಹಲವು ಕಾರ್ಯಕ್ರಮ ಮಾಡಲಿದ್ದೇವೆ ಎಂದು ಸುರ್ಜೆವಾಲಾ ತಿಳಿಸಿದರು.

ಕೆಪಿಸಿಸಿ ಪ್ರಾಣಾಳಿಕೆ ಸಮಿತಿ ಅಧ್ಯಕ್ಷರು ಹಾಗೂ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಪ್ರಾಸ್ತಾವಿಕವಾಗಿ ಮಾತನಾಡಿ,ಪ್ರಜಾದ್ವನಿ ಇಂದು ತುಮಕೂರು ಜಿಲ್ಲೆಯಲ್ಲಿ ಮೊಳಗುತ್ತಿದೆ.ಈ ದ್ವನಿ 2023ರ ಚುನಾವಣೆಯಲ್ಲಿ ಜಿಲ್ಲೆಯ ಮನೆ ಮನೆಗೆ ತಲುಪಬೇಕು ಎಂಬುದು ನಮ್ಮ ಆಶಯವಾಗಿದೆ.ಕಾಂಗ್ರೆಸ್ ಪಕ್ಷವನ್ನು ಮನೆ ಮನೆಗೆ ತಲುಪಿಸುವುದು ನಿಮ್ಮ,ನಮ್ಮೆಲ್ಲರ ಕರ್ತವ್ಯವಾಗಿದೆ. ಇದುವರೆಗೂ ಕಾಂಗ್ರೆಸ್ ಪಕ್ಷ ನೀಡಿದಂತಹ ಕಾರ್ಯಕ್ರಮಗಳು ಎಷ್ಟು ಜನಪರ ಎಂಬುದನ್ನು ಜನರಿಗೆ ತಿಳಿಸಬೇಕಿದೆ.ಪ್ರಸ್ತುತ ಸರಕಾರದ ಜನವಿರೋಧಿ ನೀತಿಗಳನ್ನು ಜನರಿಗೆ ಮುಟ್ಟಿಸಲು ಈ ಪ್ರಜಾದ್ವನಿ ಕಾರ್ಯಕ್ರಮ ವೇದಿಕೆಯಾಗಿದೆ.ಬಿಜೆಪಿ ಸರಕಾರ ರಾಜ್ಯ ಮತ್ತು ಕೇಂದ್ರದಲ್ಲಿ ಡಬಲ್ ಇಂಜಿನ್ ಸರಕಾರ ಜನಪರವಾಗಿಲ್ಲ.ಬೊಮ್ಮಾಯಿಯವರಿಗೆ ಒಂದು ಪ್ರಶ್ನೆ ಕೇಳಲು ಬಯಸುತ್ತೇನೆ.ತುಮಕೂರು ಜಿಲ್ಲೆಗೆ ನಿಮ್ಮ ಕೊಡುಗೆ ಏನು? 2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ಹೆಚ್.ಎ.ಎಲ್.ಉದ್ಘಾಟನೆ 2018ಕ್ಕೆ ಹೆಲಿಕ್ಯಾಪ್ಟರ್ ಇದುವರೆಗೂ 6500 ಉದ್ಯೋಗ,ಕೆ.ಲಕ್ಕಪ್ಪ ಹೆಚ್.ಎಂ.ಟಿ.ಪ್ಯಾಕ್ಟರಿ ಪುನಶ್ಚೇತನಕ್ಕೆ ನಿಮ್ಮ ಕೊಡುಗೆ ಏನು,ಇಸ್ರೋ ಕೆಲಸ ನಡೆಯುತ್ತಿಲ್ಲ.ಮದ್ಯ ಕರ್ನಾಟಕ ಕುಡಿಯುವ ನೀರಿಗಾಗಿ 13500 ಕೋಟಿ ಎತ್ತಿನಹೊಳೆ,ಕುಂಟುತ್ತಾ ಇದೆ.ಕಳೆದ 3 ವರೆ ವರ್ಷದಲ್ಲಿ ಎಷ್ಟು ನೀಡಿದ್ದೀರಿ. ಇಂದು 23000 ಕೋಟಿ ಅಂದಾಜು ಆಗಿದೆ.ಇದಕ್ಕೆ ಯಾರು ಹೊಣೆ,ಕಳೆದ ಬಜೆಟ್‌ನಲ್ಲಿ 500 ಕೋಟಿ, ಭದ್ರಾ ಮೇಲ್ದಂಡೆ ಹಣ ನೀಡಲಿಲ್ಲ. ಹೇಮಾವತಿ ನದಿ ಯೋಜನೆ ಸಬ್‌ಕೆನಾಲ್ ದುರಸ್ಥಿಗೆ ಹಣ ನೀಡಿಲ್ಲ.ಸ್ಮಾರ್ಟ್ಸಿಟಿ ಯೋಜನೆಯಲ್ಲಿ ಸಾವಿರಾರು ಕೋಟಿ ಖರ್ಚು ಮಾಡಿದರೂ ಒಂದು ಸ್ಮಾರ್ಟ್ನೆಸ್ ಕಾಣುಸುತ್ತಿಲ್ಲ. ಸಾವಿರಾರು ಕೋಟಿ ಲೂಟಿ ಮಾಡಿದ್ದಾರೆ. ಭ್ರಷ್ಟಾಚಾರ,ಲಂಚದಲ್ಲಿ ಆಡಳಿತ ಮುಳುಗುತ್ತಿದೆ.ಸಿದ್ದರಾಮಯ್ಯ ಕಾಲದಲ್ಲಿ 36 ಸಾವಿರ ಕೋಟಿ ಅವ್ಯವಹಾರ ಬೊಬ್ಬೆ ಹಾಕುತ್ತಿದ್ದೀರಿ,ನೀವೇ ಸಿ.ಎಂ. ನ್ಯಾಯಾಂಗ ತನಿಖೆ ನಡೆಸಿ, ನಿಮ್ಮ ಆಡಳಿತವೂ ತನಿಖೆ ನಡೆಯಲಿ, ತಪ್ಪಿತಸ್ತರು ಯಾರು ಎಂದು ಜನತೆಗೆ ತಿಳಿಸಿ, ನಿಮಗೆ ಬದ್ದತೆ ಇದ್ದರೆ ಸವಾಲು ಸ್ವೀಕರಿಸಿ ಎಂದು ಆಹ್ವಾನ ನೀಡಿದರು.
ಮಕ್ಕಳಿಗೆ ವಿದ್ಯಾರ್ಥಿ ವೇತನ ಇಲ್ಲ. ಹಾಸ್ಟಲ್ ಮಕ್ಕಳಿಗೆ ಊಟ ಸರಿಯಲ್ಲ.ಲೋಕೋಪಯೋಗಿ ಇಲಾಖೆಯ 6500 ಕೋಟಿ ಬಾಕಿ ಇದೆ. ಹಣ ಏನಾಯಿತು. ಹಾಲಿ ಬಾಬಾ ನಲವತ್ತು ಜನ ಕಳ್ಳರು ಎಂಬಂತೆ ಹಣ ಹಂಚಿಕೊಂಡಿದ್ದಾರೆ.ಜನತೆ 2023ರಲ್ಲಿ ನಮ್ಮನ್ನು ಆಶೀರ್ವಾದ.ಪ್ರತಿಯೊಬ್ಬ ಕಾಂಗ್ರೆಸ್ ಮುಖಂಡ ಮತ್ತು ಕಾರ್ಯಕರ್ತ ಈ ಬಾರಿ ಬಿಜೆಪಿಯನ್ನು ಕಿತ್ತೊಗೆಯುವ ಚಲ ರೂಢಿಸಿಕೊಳ್ಳಿ ಎಂದರು.
ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಮಾತನಾಡಿ,ಪ್ರಜಾದ್ವನಿ ಮುಂದಿನ ಚುನಾವಣೆಯಲ್ಲಿ 11 ಕ್ಷೇತ್ರಗಳಲ್ಲಿ 11 ಕ್ಷೇತ್ರಗಳನ್ನು ಗೆಲುವ ಕಾರ್ಯಕ್ರಮ.ನಮ್ಮೆಲ್ಲರ ಒಗ್ಗಟ್ಟಿನ ಸಂಕೇತ.ಇಂದು ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಬಿ.ಎಸ್.ಯಡಿಯೂರಪ್ಪ ಕಾರಣ.ಆದರೆ ಅದೇ ಯಡಿಯೂರಪ್ಪ ಅವರು ಕಣ್ಣೀರು ಹಾಕುತ್ತಾ ಸಿ.ಎಂ.ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮಾಡಿದರು.ನಮ್ಮದು ಗಾಂಧಿ ಹಿಂದುತ್ವ,ಬಿಜೆಪಿಯದ್ದು ಗೂಡ್ಸೆ ಹಿಂದುತ್ವ.ಗೂಡ್ಸೆ ಹಿಂದುತ್ವವನ್ನು ದಿಕ್ಕರಿಸಿ,ಸ್ವಾಭಿಮಾನಿ ಬದುಕಿಗಾಗಿ ಸಂವಿಧಾನ ನೀಡಿದ ಡಾ.ಬಿ.ಆರ್.ಅಂಬೇಡ್ಕರ್,ಗೂಡ್ಸೆ ಹಿಂದೂ ವಾಗಿ ಸಾಯದೆ,ಬೌದ್ದ ಧರ್ಮಕ್ಕೆ ಮತಾಂತರ ಹೊಂದಿದರು.ಅಂಬೇಡ್ಕರ್ ಅವರನ್ನು ಪ್ರೀತಿಸುವ ನಾವೆಲ್ಲರೂ ರಾಜ್ಯದಲ್ಲಿ ಗೂಡ್ಸೆ ಹಿಂದೂತ್ವಕ್ಕೆ ಎಂದಿಗೂ ಅವಕಾಶ ನೀಡದೆ, ಗಾಂಧೀ ಹಿಂದುತ್ವವನ್ನು ಪ್ರತಿಪಾದಿಸೋಣ ಎಂದರು.

ಶಾಸಕ ಯ.ಟಿ.ಖಾದರ್, ಪ್ರಜಾದ್ವನಿ ಎಂಬುದು ಒಂದು ಯಾತ್ರೆಯಲ್ಲ,ಹೋರಾಟ.ಇದಕ್ಕೆ ನಾವೆಲ್ಲರೂ ಒಗ್ಗೂಡಿ ಬುಜಕ್ಕೆ ಬುಜಕ್ಕೆ ಕೊಟ್ಟು, ಬಿಜೆಪಿಯ ದುರಾಡಳಿತವನ್ನು ಕಿತ್ತೊಗೆಯುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ.ನಮಗೆ ಕೋಮುವಾದಿ ಬಿಜೆಪಿ ಬೇಕಿಲ್ಲ. ಅಂಬೇಡ್ಕರ್ ಅವರ ಸಂವಿಧಾನದ ಅಡಿಯಲ್ಲಿ ಆಡಳಿತ ನಡೆಸುವ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕಿದೆ ಎಂದರು.
ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ,ಮಾಜಿ ಸಚಿವ ಟಿ.ಬಿ.ಜಯಚಂದ್ರ, ಕೆ.ಷಡಕ್ಷರಿ, ಬಿ.ಕೆ.ಹರಿಪ್ರಸಾದ್, ವೇಣುಗೋಪಾಲ್ ಸೇರಿದಂತೆ ಹಲವರು ಮಾತನಾಡಿದರು.
ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ,ಹರಿಪ್ರಸಾದ್,ಎಐಸಿಸಿ ಕಾರ್ಯದರ್ಶಿ ಮಯೂರು ಜಯಕುಮಾರ್,ಅಂಜನೇಯ, ಯು.ಟ.ಖಾದರ್,ಎ.ಪಿ.ಚಂದ್ರಶೇಖರ್,ಶ್ರೀಮತಿರಾಣಿಸತೀಶ್,ಪಿ.ಚಂದ್ರಪ್ಪ,ಟಿ.ಬಿ.ಜಯಚಂದ್ರ,ಕೆ.ಎನ್.ರಾಜಣ್ಣ,ಶಾಸಕರಾದ ಆರ್. ರಾಜೇಂದ್ರ,ಡಾ.ರಂಗನಾಥ್,ವೆಂಕಟರವಣಪ್ಪ,ನಾಗರಾಜ್ ಯಾದವ್,ಹನುಮಂತಯ್ಯ,ಡಾ.ಎಸ್.ರಫೀಕ್ ಅಹಮದ್,ಡಿಸಿಸಿ ಅಧ್ಯಕ್ಷ ಚಂದ್ರಶೇಖರಗೌಡ, ಎಂ.ಎಲ್.ಸಿ.ಉಗ್ರಪ್ಪ,ಪುಷ್ಪಅಮರನಾಥ್, ಕೆ.ಷಡಕ್ಷರಿ, ನಾಗರಾಜ್‌ಯಾದವ್,ಹೆಚ್.ವಿ.ವೆಂಕಟೇಶ್,ಆತೀಕ್ ಅಹಮದ್, ಇಕ್ಬಾಲ್ ಅಹಮದ್ ಮತ್ತಿತರರು ವೇದಿಕೆಯಲ್ಲಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker