ಪಾವಗಡ ಕಾಂಗ್ರೇಸ್ ಪಕ್ಷದಲ್ಲಿ ಭಿನ್ನಮತ ಸ್ಪೋಟ : ಶಾಸಕ ವೆಂಕಟರಮಣಪ್ಪ ನಾಯಕತ್ವದ ವಿರುದ್ದ ಅಸಮದಾನ
ಎಐಸಿಸಿ ವೀಕ್ಷಕರ ಸಭೆಯಿಂದ ಹೊರಗುಳಿದ ಟಿಕೆಟ್ ಆಕಾಂಕ್ಷಿಗಳು
ಪಾವಗಡ : ಪಾವಗಡ ಕಾಂಗ್ರೇಸ್ ಪಕ್ಷದಲ್ಲಿ ಭಿನ್ನಮತ ಸ್ಪೋಟ ಎಐಸಿಸಿ ವೀಕ್ಷಕರ ಸಭೆಯಿಂದ ಹೊರಗುಳಿದು ಶಕ್ತಿ ಪ್ರದರ್ಶನ ಮಾಡಿದ ಆಕಾಂಕ್ಷಿಗಳು, ಸ್ಥಳೀಯ ಶಾಸಕ ವೆಂಕಟರಮಣಪ್ಪ ನಾಯಕತ್ವದ ವಿರುದ್ದ ಅಸಮದಾನ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಗುರುವಾರ ಎಐಸಿಸಿ ವೀಕ್ಷಕರಾದ ಮಯೂರ ಜಯಕುಮಾರ್‌ರವರು ಪಾವಗಡಕ್ಕೆ ಬೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಪಾವಗಡ ವಿಧಾನ ಸಭಾ ಕ್ಷೇತ್ರದ ಆಂಕಾಕ್ಷಿಗಳಾದ ಮಾಜಿ ಜಿಪಂ ಸದಸ್ಯರಾದ ಗಾಯಿತ್ರಿಬಾಯಿ, ಕೃಷ್ಣನಾಯ್ಕ್, ರಾಮಚಂದ್ರಪ್ಪ, ಹಾಗೂ ಮಾಜಿ ಶಾಸಕರಾದ ಸೋಮ್ಲನಾಯ್ಕ್, ಮಾಜಿ ಜಿಪಂ ಸದಸ್ಯರಾದ ಗೌರಮ್ಮತಿಮ್ಮಯ್ಯ, ಕೋಟೆ ಪ್ರಭಾಕರ್, ನಾಗೇಂದ್ರಪ್ಪ, ಗೋಪಾಲ್‌ರೆಡ್ಡಿ, ಹಾಗೂ ಮಾಜಿ ತಾಪಂ ಸದಸ್ಯರಾದ ರವಿಕುಮಾರ್, ಮೈಲಾರ್‌ರೆಡ್ಡಿ, ಹನುಮಂತರಾಯಪ್ಪರವರು ಎಐಸಿಸಿ ವೀಕ್ಷಕರನ್ನ ಗೌರವಿಸಿ ಮನವಿ ಸಲ್ಲಿಸಲು ಸಿದ್ದರಾಗಿದ್ದ ವೇಳೆ ಎಐಸಿಸಿ ವೀಕ್ಷರನ್ನ ಬೇರೆ ಮಾರ್ಗದಲ್ಲಿ ನಗರ ಬ್ಲಾಕ್ ಕಾಂಗ್ರೇಸ್ ಪದಾಧಿಕಾರಿಗಳ ಸಭೆಗೆ ಕರೆದೊಯ್ಯಲಾಗಿದೆ ಎಂದು ತಾಲೂಕು ಮುಖಂಡರ ವಿರುದ್ದ ಆಕ್ರೋಶ ಹೊರ ಹಾಕಿದರು.
ಇದೇ ವೇಳೆ ಮಾಜಿ ಜಿಪಂ ಸದಸ್ಯರಾದ ಗಾಯಿತ್ರಿಬಾಯಿ ಮಾತನಾಡಿ ಕಾಂಗ್ರೇಸ್ ಪಕ್ಷಕ್ಕಾಗಿ ಪ್ರಮಾಣಿಕವಾಗಿ ದುಡಿದಿದ್ದೆನೆ ಮೀಸಲು ಕ್ಷೇತ್ರದಲ್ಲಿ ನಮ್ಮ ತಂದೆಯವರಾದ ಮಾಜಿ ಶಾಸಕ ಸೋಮ್ಲನಾಯ್ಕ್ರವರ ಮಾರ್ಗದರ್ಶನದಲ್ಲಿ ಈಭಾರಿ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಮುಂದಾಗಿ ಅರ್ಜಿ ಸಲ್ಲಿಸಿ, ಎಐಸಿಸಿ ವೀಕ್ಷಕರನ್ನ ಕಾಣಲು ಕೂಡ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿರುವುದು ದುರಂತದ ಸಂಗತಿ ಎಂದು ಅಸಮದಾನ ವ್ಯಕ್ತಪಡಿಸಿದರು.
ಮಾಜಿ ಜಿಪಂ ಸದಸ್ಯರಾದ ಕೋಟೆ ಪ್ರಭಾಕರ್‌ರವರು ಮಾತನಾಡಿ 2018ರಲ್ಲಿ ಶಾಸಕರ ಗೆಲುವಿಗೆ ಹಗಲಿರುಳು ದುಡಿದಿದ್ದೆನೆ , ಆದರೆ ಅವರಿಗೆ ನಿಷ್ಠಾವಂತ ಕಾರ್ಯಕರ್ತರ ಅಗತ್ಯವಿಲ್ಲ, ನಮ್ಮ ದೇವರು ಸಣ್ಣಚಿತ್ತಯ್ಯರವರು ಅವರು ಯಾರಿಗೆ ಮತ ಹಾಕಿ ಅಂತಾ ಹೇಳಿದ್ರೆ ಅವರಿಗೆ ಮತ ಹಾಕುತ್ತೆನೆ, ನನಗೆ ತಿಳಿಯದೆ ಕೆಪಿಸಿಸಿ ಸದಸ್ಯತ್ವ ಮಾಡಿದ್ರು, ನಾನು ಪ್ರತಿನಿಧಿಸಿದ ಜಿಪಂ ಕ್ಷೇತ್ರದಲ್ಲಿ ಅಭಿವೃದ್ದಿ ಕಣ್ಮರೆ ಆಗಿದೆ ಅಂದಾ ಮೇಲೆ ಯಾರು ಯಾರನ್ನ ಕೇಳಬೇಕು ಎಂದು ಕಿಡಿಕಾರಿದರು.
ಮಾಜಿ ಶಾಸಕರಾದ ಸೋಮ್ಲನಾಯ್ಕ್ ಮಾತನಾಡಿ ಪಾವಗಡ ವಿಧಾನ ಸಭಾ ಕ್ಷೇತ್ರದಿಂದ 8ಜನ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು, ಎಐಸಿಸಿ ವೀಕ್ಷಕರ ಸಭೆಯನ್ನ ಅವರಿಗೆ ಬೇಕಾದವರಿಗೆ ಮಾತ್ರ ತಿಳಿಸಲಾಗಿದೆ, ಆಕಾಂಕ್ಷಿಗಳು ವೀಕ್ಷಕರನ್ನ ಬೇಟಿಯಾಗುತ್ತಾರೆಂದು ಮಾರ್ಗ ಬದಲಿಸಿದರು, ನಾವು ಪಕ್ಷ ಬೀಡುವವರಲ್ಲ ಅದು ಅವರಿಗೆ ಗೋತ್ತಿಲ್ಲ ಎಂದಾ ಅವರು ಮುಂದಿನ ವಿದ್ಯಾಮಾನಗಳು ಬಹಳ ಕಷ್ಟಕರವಾದ ದಿನಗಳಾಗಿದ್ದು, ಒಮ್ಮತದ ಅಭಿಪ್ರಾಯಕ್ಕೆ ಅವಕಾಶ ನೀಡದೆ ಹೋದರೆ ಬಹುದೊಡ್ಡ ಸವಾಲು ಎದುರಿಸಲು ಸಿದ್ದರಾಗಿರಬೇಕೆಂದರು.
ಭಿನ್ನಮತೀಯರ ಸಭೆಯಲ್ಲಿ ಮಾಜಿ ಜಿಪಂ ಸದಸ್ಯರಾದ ನಾಗೇಂದ್ರಪ್ಪ, ಗೋಪಾಲ್‌ರೆಡ್ಡಿ, ಮಾಜಿ ತಾಪಂ ಸದಸ್ಯರಾದ ಮೈಲಾರ್‌ರೆಡ್ಡಿ, ಹನುಮಂತರಾಯಪ್ಪ ಇದ್ದರು.