ಕೊರಟಗೆರೆ : ತಾಲ್ಲೂಕಿನ ಕಸಬಾ ಹೋಬಳಿಯ ಹುಲಿಕುಂಟೆ ಗ್ರಾಮದ ಗ್ರಾಮಸ್ಥರು ಬೆಳೆದ ಬೆಳೆಯು ಮಳೆಬಾರದೇ ಒಣಗುತ್ತಿರುವುದು ಹಾಗೂ ಕೆರೆಕಟ್ಟೆಗಳಲ್ಲಿ ದನಕರು ಜಾನುವಾರುಗಳು ಕುಡಿಯಲು ನೀರಿಲ್ಲದೆ ಪರದಾಡುವ ಸ್ಥಿತಿ ಕಂಡು ಬರುತ್ತಿದೆ ಸಾವಿರ ರೂಪಾಯಿಗಳನ್ನು ವೆಚ್ಚ ಮಾಡಿ ರೈತಾಪಿ ವರ್ಗವು ಉಳುಮೆ ಮಾಡಿ ಬೀಜ ಬಿತ್ತನೆಯನ್ನು ಮಾಡಿದ್ದು ಮಳೆ ಬಾರದೆ ರೈತಾಪಿ ವರ್ಗವು ಬೀದಿಗೆ ಬಿದ್ದಂತಾಗಿದೆ.
ಕೊರಟಗೆರೆ ತಾಲ್ಲೂಕಿನ ಕಸಬಾ ಹೋಬಳಿಯ ಹುಲಿಕುಂಟೆ ಗ್ರಾಮದ ಗ್ರಾಮಸ್ಥರು ಕೆರೆಯಂಗಳದಲ್ಲಿ ಮಳೆರಾಯನ ಪ್ರತಿಮೆ ಸ್ಥಾಪಿಸಿ ವಿಶೇಷವಾದಂತಹ ಪೂಜೆಗಳನ್ನು ಮಾಡಿ ಮಳೆರಾಯನ ಆಗಮನಕ್ಕೆ ಲಾಲಿ ಹಾಡಿದ್ದು ವಿಶೇಷವಾಗಿತ್ತು. ಭಕ್ತಾದಿಗಳಿಗೆ ಹಾಗೂ ಅಕ್ಕಪಕ್ಕದ ಊರಿನ ಗ್ರಾಮಸ್ಥರು ಗಳಿಗೆ ಅನ್ನಸಂತರ್ಪಣೆಯನ್ನು ಮಾಡಿ ಮಳೆರಾಯನ ಆಗಮನಕ್ಕಾಗಿ ಕಾಯುತ್ತಿದ್ದಾರೆ.
ನಂತರ ಮಾತನಾಡಿದ ಹುಲಿಕುಂಟೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ರಮೇಶ್ ಮುಂಗಾರಿನಿಂದಲು ನಮ್ಮ ರೈತಾಪಿ ವರ್ಗ ಸಾಲಸೋಲಗಳನ್ನು ಮಾಡಿ ಉಳುಮೆ ಮಾಡಿಸಿ ಬಿತ್ತನೆ ಬೀಜಗಳನ್ನು ಬಿತ್ತು ತಮ್ಮ ತಮ್ಮ ಕೆಲಸಗಳನ್ನು ಪೂರ್ಣಗೊಳಿಸಿಕೊಂಡು ಉತ್ತಮ ಬೆಳೆಗಾಗಿ ಬಹು ನಿರೀಕ್ಷೆಯಿಂದ ಕಾಯುತ್ತಿದ್ದರು ಆದರೆ ಈ ಬಾರಿ ಮಳೆರಾಯನು ಬಹುದೊಡ್ಡ ಮಟ್ಟದಲ್ಲಿ ಕೈಕೊಟ್ಟಿರುವುದು ರೈತಾಪಿ ವರ್ಗಕ್ಕೆ ತುಂಬಲಾರದಷ್ಟು ನಷ್ಟವುಂಟಾಗಿದೆ. ಹಾಗಾಗಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ರವರು ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಬಳಲುತ್ತಿರುವ ರೈತ ವರ್ಗಕ್ಕೆ ಪರಿಹಾರ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಜ್ಯೋತಿಪ್ರಕಾಶ್ ಕಾಕಿಮಲ್ಲಯ್ಯ,ಮಂಜುನಾಥ್, ವಿಜಯ್ ಕುಮಾರ್, ಮಂಜು, ಇಮಾಮ್, ಗಿರೀಶ್,ಸುರೇಶ್, ಮುದ್ದಯ್ಯ,ಮಾಲ,ಚಂದ್ರಕಲಾ, ಪ್ರೇಮ,ಶಾಂತಮ್ಮ ಹಾಗೂ ಊರಿನ ಗ್ರಾಮಸ್ಥರು ಹಾಜರಿದ್ದರು,